ಪ್ರಧಾನಿ ನರೇಂದ್ರ ಮೋದಿಯವರು ಆ ಜಾಗದಲ್ಲಿ ಅಭಿವೃದ್ಧಿಪರ ರಾಜಕೀಯವನ್ನು ಜಾರಿಗೊಳಿಸಿದ್ದಾರೆ: ಜೆ.ಪಿ.ನಡ್ಡಾ

ಬೆಂಗಳೂರು: ಹಿಂದೆ ಪ್ರಾದೇಶಿಕತೆ, ಜಾತಿವಾದದಂಥ ಮತಬ್ಯಾಂಕ್‌ ರಾಜಕೀಯ ನಡೆಯುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಆ ಜಾಗದಲ್ಲಿ ಅಭಿವೃದ್ಧಿಪರ ರಾಜಕೀಯವನ್ನು ಜಾರಿಗೊಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದರು.

 

ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ, ಪ್ರಾದೇಶಿಕತೆಯ ಚಿಂತನೆ ಅಲ್ಲಿಲ್ಲ. ಸಬ್‌ ಕಾ ಸಾಥ್‌‍, ಸಬ್‌ ಕಾ ವಿಕಾಸ್‌ ಮಂತ್ರದೊಂದಿಗೆ ಅವರು ದೇಶವನ್ನು ಮುನ್ನಡೆಸುತ್ತಿ ದ್ದಾರೆ ಎಂದು ವಿಶ್ಲೇಷಿಸಿದರು. ಎಲ್ಲರಿಗೂ ನ್ಯಾಯ ಕೊಡುವ ಮತ್ತು ಯಾರದೇ ಓಲೈಕೆ- ತುಷ್ಟೀಕರಣ ಇಲ್ಲದ ಆಡಳಿತ ನಮ್ಮದು , ಶೋಷಿತರು, ಬಡವರು, ವಂಚಿತರು, ದಲಿತರು, ಮಹಿಳೆಯರು, ಯುವಜನತೆಗೆ ಹಾಗೂ ರೈತರ ಸಶಕ್ತೀಕರಣವೇ ನಮ್ಮ ಧ್ಯೇಯ ಎಂದು ತಿಳಿಸಿದರು.

ದೇಶವನ್ನು ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯತ್ತ ಮೋದಿಯವರು ಮುನ್ನಡೆಸಿದ್ದಾರೆ ,ಅಮೆರಿಕ, ಯುರೋಪ್‌‍, ಜಪಾನ್‌ ಸೇರಿದಂತೆ ಅನೇಕ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಆದರೆ, ಕಳೆದ 10 ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಬಲಶಾಲಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

11ನೇ ಸ್ಥಾನ ದಲ್ಲಿದ್ದ ಭಾರತವು ಬ್ರಿಟನ್‌ ಸೇರಿ ಅನೇಕ ದೇಶಗಳನ್ನು ಹಿಂದಿಕ್ಕಿ 5ನೇ ಬೃಹತ್‌ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ನಿಮ್ಮ ಆಶೀರ್ವಾದ ಮತ್ತು ಮತಶಕ್ತಿಯಿಂದ ಭಗವಂತ್‌ ಖೂಬಾ ಅವರು ಮತ್ತೊಮ್ಮೆ ಸಂಸದರಾಗಲಿದ್ದಾರೆ. ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.

 

ಎರಡು ವರ್ಷಗಳಲ್ಲಿ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಮುಖಂಡರು, ಶಾಸಕರು, ಜಿಲ್ಲಾಧ್ಯಕ್ಷ, ಪದಾಧಿಕಾರಿಗಳು ಭಾಗವಹಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top