ಇಂಧನ, ರಸಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೋದಿ ಸರ್ಕಾರದ ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮೋದಿ ಅವರು ಮುಖ್ಯಮಂತ್ರಿ ಹಾಗೂ ಮನಮೋಹನ್ ಸಿಂಗ ಅವರ ಪ್ರಧಾನಿಯಾಗಿದ್ದಾಗ, ಮೋದಿ ಅವರ ನಾಯಕತ್ವದಲ್ಲಿ ಅಲ್ಪ ಪ್ರಮಾಣದ ಬೆಲೆ ಏರಿಕೆ ಆದರೂ ಹೋರಾಟ ಮಾಡಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರವನ್ನು ಕಟು ಶಬ್ಧಗಳಿಂದ ಟೀಕೆ ಮಾಡಿದ್ದರು. ಬಿಜೆಪಿ ಸರ್ಕಾರ ಎಂದರೆ ಸುಳ್ಳಿನ ಕಾರ್ಖಾನೆ. ಮೋದಿ ಅವರು ಪ್ರಧಾನಿಯಾದ ನಂತರ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸ್ವತಂತ್ರಯ ಭಾರತದಲ್ಲಿ ಅನೇಕ ಪ್ರಧಾನಿಗಳು ಬಂದು ಹೋಗಿದ್ದಾರೆ, ಅದರೆ ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ. ಅಚ್ಛೇದಿನ ಬರುತ್ತದೆ ಎಂದು ಹೇಳಿದರು, ಮೋದಿ ಅವರೇ ಈ ದೇಶಕ್ಕೆ ರೈತರು, ಬಡವರು, ಯುವಕರು, ಮಹಿಳೆಯರಿಗೆ ಒಳ್ಳೇ ದಿನ ಬಂತಾ? ಮನಮೋಹನ್ ಸಿಂಗ್ ಅವರ ಸರ್ಕಾರ ಅಂತ್ಯವಾಗಿದ್ದು 2014ರಲ್ಲಿ, ಮೋದಿ ಅರು ಮೇ ತಿಂಗಳಲ್ಲಿ ಪ್ರಧಾನಿಯಾದರು ಈಗ 8 ವರ್ಷ ತುಂಬಲಿದೆ. ಈ 8 ವರ್ಷಗಳಲ್ಲಿ 2014ರಲ್ಲಿ ಕೊಟ್ಟ ಯಾವುದಾದರೂ ಭರವಸೆ ಈಡೇರಿಸಿರುವ ನಿದರ್ಶನವನ್ನು ಕೊಡಿ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಡೀಸಲ್ ಮೇಲಿನ ಸುಂಕ 3.46 ರೂ. ಮಾತ್ರ. ಪೆಟ್ರೋಲ್ ಮೇಲೆ 9,20 ರೂ. ಅಬಕಾರಿ ಸುಂಕ ಇತ್ತು. ಇಂದು ಡೀಸೆಲ್ ಮೇಲೆ 31.84 ಹಾಗೂ ಪೆಟ್ರೋಲ್ ಮೇಲೆ 32.98 ರೂ. ಅಬಕಾರಿ ಸುಂಕ ವಿಧಿಸಲಾಗಿದೆ. ಇದು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಲೆ ಏರಿಕೆಯಲ್ಲ. ಕೇಂದ್ರ ಸರ್ಕಾರ ಮಾಡುತ್ತಿರುವ ವಸೂಲಿ. ಮೋದಿ ಅವರೇ ಇದು ಹಗಲು ದರೋಡೆಯಲ್ಲವೇ?
ಮೋದಿ ಅವರು ಪ್ರಧಾನಿಯಾದ ನಂತರ ಇಂಧನ ತೈಲದ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ವಸೂಲು ಮಾಡಿದ್ದಾರೆ. ನಿಮಗೆ ಸಾಮಾನ್ಯ ಜನ, ರೈತರಿಗೆ ಒಳ್ಳೆಯದು ಮಾಡಬೇಕಾದರೆ ಈ ಅಬಕಾರಿ ಸುಂಕ ಇಳಿಸಿ. ಡೀಸೆಲ್ ಸುಂಕ 10 ರೂ.ಗೆ ಪೆಟ್ರೋಲ್ ಸುಂಕ 15 ರೂ.ಗೆ ಇಳಿಸಿ. ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಲ್ಲಿ ಕಚ್ಛಾತೈಲ ಬೆಲೆ ಹೆಚ್ಚಾಗಿದೆ ಎಂದು ಕಾರಣ ಹೇಳುತ್ತಾರೆ. ಮೋದಿ ಪ್ರಧಾನಿ ಆದ ನಂತರ ಕಚ್ಛಾತೈಲ ಬೆಲೆ ಕಡಿಮೆ ಆಗಿತ್ತು, ಈಗ ಮತ್ತೆ ಹೆಚ್ಚಾಗಿದೆ. 2016ರಲ್ಲಿ ಪ್ರತಿ ಬ್ಯಾರೆಲ್ ಗೆ 46 ಡಾಲರ್ ಆಗಿತ್ತು ಆಗ ಎಷ್ಟು ಕಡಿಮೆ ಮಾಡಿದಿರಿ? ಆಗ ಯಾಕೆ ಕಡಿಮೆ ಮಾಡಲಿಲ್ಲ? ಇಂದು 118 ಡಾಲರ್ ಆಗಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಡೀಸೆಲ್ ಮೇಲೆ 46 ರೂ. ಪೆಟ್ರೇಲ್ 68 ರೂ. ಇತ್ತು. ಮೋದಿ ಅವರೇ ನೀವು ಈಗ ಪೆಟ್ರೋಲ್ 113, ಡೀಸೆಲ್ 97 ರೂ. ಆಗಿದೆ. ವ್ಯಾತ್ಯಾಸ ಎಷ್ಟಿದೆ? ಇದು ಹಗಲು ದರೋಡೆ ಅಲ್ಲವೇ? ಮೋದಿ ಅವರು 2022ಕ್ಕೆ ರೈತರ ಆದಾಯ ಡಬಲ್ ಮಾಡುತ್ತೇನೆ ಎಂದರು. ಇಂದು ರೈತರ ಆದಾಯವಲ್ಲ, ಸಾಲ ದುಪ್ಪಟ್ಟಾಗಿದೆ. ರೈತರು ಅವರೇ ಕೂಲಿ ಕಾರ್ಮಿಕರಾಗುವ ಸ್ಥಿತಿ ಬಂದಿದೆ. ಬಡತನ ಹೆಚ್ಚುತ್ತಿದೆ. ಮೋದಿ ಅವರೇ ಎಲ್ಲಿ ದುಪ್ಪಟ್ಟು ಆದಾಯ ಬಂದಿದೆ. ಡಿಎಪಿ ಗೊಬ್ಬರ 50 ಕೆ.ಜಿಗೆ 150 ರೂ. ಹೆಚ್ಚಿಸಿದ್ದೀರಿ. ರೈತರ ಆದಾಯ ದುಪ್ಪಟ್ಟು ಹೇಗೆ ಆಗುತ್ತದೆ? ಗೊಬ್ಬರ ಸಬ್ಸಿಡಿ ಇಳಿಸಿದ್ದೀರಿ. ಅನುದಾನ ಕಡಿಮೆ ಮಾಡಿ ರೈತರ ಮೇಲೆ ಚಪ್ಪಡಿ ಎಳೆಯುತ್ತಿದ್ದೀರಿ. ಅಡುಗೆ ಅನಿಲ 2014ರಲ್ಲಿ 14.2 ಕೆ.ಜಿ ಸಿಲಿಂಡರ್ 414 ರೂ. ಇತ್ತು. ಆಗ ಮನಮೋಹನ್ ಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಇಂದು 1000 ರೂ. ಆಗಿದೆ. ಸುಮಾರು 600 ರೂ. ಹೆಚ್ಚಾಗಿದೆ. ಇತ್ತೀಚೆಗೆ ಅಡುಗೆ ಅನಿಲ 50 ರೂ. ಹಾಗೂ ವಾಣಿಜ್ಯ ಗ್ಯಾಸ್ 250 ರೂ ಹೆಚ್ಚಾಗಿದೆ. ಆ ಮೂಲಕ ಹೆಣ್ಣಿನ ಶೋಷಣೆಯಾಗುತ್ತಿದೆ. ಜನಸಾಮಾನ್ಯರ ಆದಾಯ ಹೆಚ್ಚಾಗಿದೆಯಾ? ಇದೆಲ್ಲವನ್ನು ಜನರಿಗೆ ತಿಳಿಸಬೇಕು.
ಮೋದಿ ಸರ್ಕಾರ ಬಡವರಿಗೆ ಅನ್ಯಾಯ, ಸುಲಿಗೆ, ದರೋಡೆ ಮಾಡುತ್ತಿದೆ ಎಂದು ತಿಳಿಸಬೇಕು. ಕಾರ್ಪೋರೇಟ್ ಕಂಪನಿಗಳ ತೆರಿಗೆ ಶೇ.35ರಿಂದ ಶೇ.23ಕ್ಕೆ ಇಳಿಸಲಾಗಿದೆ. ಬಡವರ ತಲೆ ಬೋಳಿಸಿ, ಶ್ರೀಮಂತರಿಗೆ ತೆರಿಗೆ ಇಳಿಸಿದರು. ಇದರಿಂದ 4.5 ಲಕ್ಷ ಕೋಟಿ ಸರ್ಕಾರಕ್ಕೆ ನಷ್ಟ. ಅದಾನಿ ಒಟ್ಟು ಸಂಪತ್ತು 57 ಸಾವಿರ ಕೋಟಿ ಇತ್ತು, ಈಗ ಅವರ ಆಸ್ತಿ 7 ಲಕ್ಷ ಕೋಟಿ ಆಗಿದೆ. ಅಂಬಾನಿ ಅವರ ಸಂಪತ್ತು 1.57 ಲಕ್ಷ ಕೋಟಿ ಇತ್ತು, ಇಂದು ಅವರ ಸಂಪತ್ತು 8 ಲಕ್ಷ ಕೋಟಿ. ಬಡವರು, ರೈತರ ಆದಾಯ ಕಡಿಮೆ ಆಯ್ತು, ಅಂಬಾನಿ ಅದಾನಿ ಆದಾಯ ಹೆಚ್ಚಾಯ್ತು. ಇದು ದೇಶಕ್ಕೆ ಮೋದಿಯ ಕೊಡುಗೆ. ಮೋದಿ ಪ್ರಧಾನಿ ಆದಾಗ ದೇಶದ ಮೇಲೆ ಸಾಲ 53.11 ಲಕ್ಷ ಕೋಟಿ. ಆದರೆ ಮುಂದಿನ ಮಾರ್ಚ್ ಅಂತ್ಯಕ್ಕೆ ದೇಶದ ಸಾಲ 152 ಲಕ್ಷ ಕೋಟಿ. 8 ವರ್ಷದಲ್ಲಿ ಈ ದೇಶದಲ್ಲಿ ಮಾಡಿರುವ ಸಾಲ 100 ಲಕ್ಷ ಕೋಟಿ. ಈ ದೇಶ ಉಳಿಯುತ್ತದಾ? ನಮ್ಮ ದೇಶದ ಬಜೆಟ್ ನ ಶೇ.45ರಷ್ಟು ಮೋತ್ತ ಬಡ್ಡಿ ಕಟ್ಟಲಾಗುತ್ತಿದೆ. ರೈತರು, ಬಡವರು, ದಲಿತರು ಕಂಗಾಲಾಗಿದ್ದಾರೆ. ಇಂಧನ ಬೆಲೆ ಹೆಚ್ಚಾದರೆ ಎಲ್ಲ ಬೆಲೆ ಹೆಚ್ಚಾಗುತ್ತದೆ. ಬಡವರು ಉಪಯೋಗಿಸುವ ಜನಔಷಧಿ ಶೇ.10ರಷ್ಟು ಹೆಚ್ಚಿಸಿದರು. ವಿದ್ಯುತ್ ಬೆಲೆ ಪ್ರತಿ ಯುನಿಟ್ 35 ಪೈಸೆ ಹೆಚ್ಚಳ, ನೀರಿನ ಬಿಲ್, ಅಡುಗೆ ಎಣ್ಣೆ, ಕಬ್ಬಿಣ, ಸೀಮೆಂಟ್ ಹೆಚ್ಚಾಯ್ತು, ಜನ ಸಾಮಾನ್ಯರು ಬದುಕುವುದು ಹೇಗೆ? ಮೋದಿ ಪ್ರಧಾನಿಯಾಗಿ ಇರಬೇಕಾ? ಈ ಸರ್ಕಾರ ಬೇಕಾ? ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಮೋದಿ ಸರ್ಕಾರ ಮಾತನಾಡುತ್ತಾರಾ?
ಈ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 11 ಕೋಟಿ ಉದ್ಯೋಗ ನೀಡುತ್ತಿದ್ದವು, ಈಗ ಅವುಗಳು 2.5 ಕೋಟಿ ಉದ್ಯೋಗ ಮಾತ್ರ ನೀಡುತ್ತಿವೆ. ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎಂದು ಹೇಳುತ್ತೀರಲ್ಲ ಮೋದಿ ಅವರೇ, ನಿಮಗೆ ಮಾನ ಮರ್ಯಾದೆ ಇದೆಯೇ? ಯುವಕರು ಗೊತ್ತಿಲ್ಲದೇ ಮೋದಿ ಮೋದಿ ಎಂದರು. ಅವರ ಹೊಟ್ಟೆ ಮೇಲೆ ಹೊಡೆದರಲ್ಲಾ. ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಇಲ್ಲಿನ ಬೊಮ್ಮಾಯಿ ಸರ್ಕಾರ ಇದನ್ನು ಮುಚ್ಚಿಕೊಳ್ಳಲು ಹಿಜಾಹಬ್, ಹಲಾಲ್, ಭಗವದ್ಗೀತೆ, ವ್ಯಾಪಾರ ನಿರ್ಬಂಧ, ಧ್ವನಿವರ್ಧಕ ವಿಚಾರ ಆರಂಭಿಸಿದ್ದೀರಲ್ಲಾ. ಇದು ಸಂಘಪರಿವಾರದವರ ದೇಶ ಅಲ್ಲಾ, ಈಬಗ್ಗೆ ಮಾಧುಸ್ವಾಮಿ ಸ್ವಲ್ಪ ನಿಜ ಹೇಳಿದ್ದಾರೆ. ಇದು ಎಲ್ಲ ಭಾರತೀಯರ ದೇಶ. ಬಜರಂಗದಳದವರು ಕಲ್ಲಂಗಡಿ ಮಾರುವ ವ್ಯಾಪಾರಿ ಮೇಲೆ ದಾಳಿ ಮಾಡಿದರೂ ಬೊಮ್ಮಾಯಿ ಹಾಗೂ ಜ್ಞಾನೇಂದ್ರ ಅವರೇ ಸುಮ್ಮನೇ ಕೂತಿದ್ದೀರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ? ಅಧಿಕಾರದಲ್ಲಿ ಹೇಗೆ ಮುಂದುವರಿಯುತ್ತಿದ್ದೀರಿ? ಬೊಮ್ಮಾಯಿ ಅವರು ಮೌನಿ. ಕಾರಣ ಆರ್ ಎಸ್ಎಸ್ ಆಟ ಇದೆಲ್ಲಾ. ಅವರಿಂದಲೇ ಈ ಗಿರಾಕಿ ಸಿಎಂ ಆಗಿದ್ದಾರೆ. ಇವರು ನನಗೂ ಹಾಗೂ ಇದಕ್ಕೆ ಸಂಬಂಧವಿಲ್ಲದಂತೆ ಕೂತಿದ್ದಾರೆ. ನೀವು ಈ ರಾಜ್ಯದ ಮುಖ್ಯಮಂತ್ರಿಗಳು, ಸಮಾಜ ನಾಶ ಮಾಡಬೇಡಿ. ನಿಮ್ಮಿಂದ ಆಗಲಿಲ್ಲ ಎಂದರೆ ರಾಜೀನಾಮೆ ಕೊಡಿ, ಈ ರಾಜ್ಯವನ್ನು ನಾವು ಸರಿ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ನಾಶವಾಗಿದೆ. ಕಾನೂನು ಸುವ್ಯವಸ್ಥೆ ಹಾಳಾದರೆ ದೇಶ ಅಭಿವೃದ್ಧಿ ಆಗುವುದಿಲ್ಲ. ಇಲ್ಲಿ ಬಂಡವಾಳ ಹೂಡಲು ಯಾರು ಬರುತ್ತಾರೆ?
ಪರಿಸ್ಥಿತಿ ಅನುಕೂಲವಾಗಿರದಿದ್ದರೆ ಯಾರೂ ಬಂಡವಾಳ ಹೂಡುವುದಿಲ್ಲ, ಬಂಡವಾಳ ಹೂಡಿಕೆ ಮಾಡದಿದ್ದರೆ, ಉದ್ಯೋಗ ಸೃಷ್ಟಿ ಹೇಗೆ? ಉದ್ಯೋಗ ಸೃಷ್ಟಿಯಾಗದಿದ್ದರೇ ಜಿಡಿಪಿ ಬೆಳವಣಿಗೆ ಹೇಗೆ ಸಾಧ್ಯ? ನೀವು ಎಲ್ಲವನ್ನು ಹಾಳು ಮಾಡುತ್ತಿದ್ದೀರಿ. ಮಾರ್ಚ್ ಅಂತ್ಯದವರೆಗೂ ರಾಜ್ಯದ ಮೇಲೆ ಇರುವ ಸಾಲ 5.18 ಲಕ್ಷ ಕೋಟಿ. ಈ ಸಾಲಕ್ಕೆ ಕಟ್ಟಬೇಕಿರುವ ಬಡ್ಡಿ 43 ಸಾವಿರ ಕೋಟಿ. ನಮ್ಮ ರಾಜ್ಯ ನೀಡುವ ತೆರಿಗೆ 3 ಲಕ್ಷ ಕೋಟಿ. ನಮಗೆ ಕೇಂದ್ರ ಕೊಡುವ ಅನುದಾನ 47 ಸಾವಿರ ಕೋಟಿ ಮಾತ್ರ. ರಾಜ್ಯ ಅಭಿವೃದ್ಧಿ ಹೇಗೆ ಆಗುತ್ತದೆ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಲ್ಲಿದೆ? ಶಿವಮೊಗ್ಗದಲ್ಲಿ ಹರ್ಷ ಹತ್ಯೆಗೆ ಸರ್ಕಾರದಿಂದ 25 ಲಕ್ಷ ಕೊಟ್ಟರು. ಬೆಳ್ತಂಗಡಿಯಲ್ಲಿ ದಲಿತ ದಿನೇಶ್ ಬಜರಂಗದಳದವರಿಂದ ಕೊಲೆಯಾದಾಗ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಡಲಿಲ್ಲ. ನರಗುಂದದಲ್ಲಿ ಶ್ರೀರಾಮ ಸೇನೆಯಿಂದ ಕೊಲೆಯಾದವರಿಗೆ ಒಂದು ರೂ. ಪರಿಹಾರ ಕೊಡಲಿಲ್ಲ. ಸಚಿವ ಈಶ್ವರಪ್ಪ ಸೆಕ್ಷನ್ 144 ಜಾರಿ ಇದ್ದರೂ ಶವ ಯಾತ್ರೆ ಮಾಡಿ ಅದನ್ನು ಉಲ್ಲಂಘಿಸಿದರು. ಆನಂದ್ ಕೂಬಾ ಸೆಕ್ಷನ್ 144 ಉಲ್ಲಂಘನೆ ಮಾಡಿದರು. ಅವರ ವಿರುದ್ಧ ಕ್ರಮ ಇಲ್ಲ.ಇವರ ವಿರುದ್ಧ ಏಫ್ ಐಆರ್ ಇಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಮೂರ್ನಾಲ್ಕು ಪ್ರಕರಣ ದಾಖಲಿಸಿದ್ದಾರೆ. ಇದೇನಾ ನಿಮ್ಮ ಸಂವಿಧಾನ, ಕಾನೂನು ಪಾಲನೆ? ಅದಿವೇಶನದಲ್ಲಿ ಈ ದಲಿತರ ಹತ್ಯೆಗೂ ಪರಿಹಾರ ಕೊಡಿ ಎಂದೆ. ಕೊಡುತ್ತೇವೆ ಎಂದವರು ಈವರೆಗೂ ಕೊಟ್ಟಿಲ್ಲ. ಇದೇನು ಇವರಪ್ಪನ ಮನೆ ಹಣವೇ? ಜನರ ತೆರಿಗೆ ಹಣ. 45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನಾನು ನೋಡಿರಲಿಲ್ಲ.
ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅಧಿಕಾರ ಅನುಭವಿಸಬೇಕು ಎಂಬುದಕ್ಕೆ ಹೋರಾಟವಲ್ಲ. ಇಂತಹ ಕೆಟ್ಟ ಸರ್ಕಾರ ತೊಲಗಿಸಿ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಅತ್ಯಂತ ಕೆಟ್ಟ, ಅಮಾನವೀಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಕ್ರೈಸ್ತರು, ಮುಸಲ್ಮಾನರು ಆತಂಕದಲ್ಲಿ ಬದುಕುವ ಸ್ಥಿತಿಯಲ್ಲಿದೆ. ಮಾತೆತ್ತಿದರೆ ತೈಲ ಕಂಪನಿ ನಮ್ಮ ಕೈಲಿಲ್ಲ ಎನ್ನುತ್ತಾರೆ. ಹಾಗಾದರೆ ನವೆಂಬರ್ ನಲ್ಲಿ ಕೊನೆ ಬಾರಿಗೆ ಬೆಲೆ ಏರಿಕೆ ಮಾಡಿದವರು ಮಾರ್ಚ್ 17ರ ವರೆಗೂ ಯಾಕೆ ಹೆಚ್ಚಿಸಲಿಲ್ಲ? ಪಂಚರಾಜ್ಯ ಚುನಾವಣೆ ಕಾರಣಕ್ಕೆ ಅಲ್ಲವೇ? 10ರಂದು ಫಲಿತಾಂಶ ಬಂತು, ನಂತರ ಏರಿಕೆ ಆಗಿದೆ. ಪೆಟ್ರೋಲ್ ಡೀಸೆಲ್ ತಲಾ 10 ರೂ. ಅಡುಗೆ ಅನಿಲ 50 ರೂ. ವಾಣಿಜ್ಯ ಗ್ಯಾಸ್ 250 ರೂ. ಹೆಚ್ಚಾಗಿದೆ. ಯಾಕೆ ಸುಳ್ಳು ಹೇಳುತ್ತೀರಿ? ಬಿಜೆಪಿ ಬೆಂಬಲಿಸುವವರಿಗೂ ಹೇಳುತ್ತಿದ್ದೇನೆ. ಬಿಜೆಪಿ ಲೂಟಿ ಮಾಡುತ್ತಿದೆ. ಇದು ಕಾಂಗ್ರೆಸ್ ಮನೆಗೆ ಮಾತ್ರ ಬಿದ್ದಿರುವ ಬೆಂಕಿಯಲ್ಲ, ಇಡೀ ಸಮಾಜ್, ದೇಶದಲ್ಲಿ ದರೋಡೆ ಆಗುತ್ತಿದೆ. ನಿಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಬಿಜೆಪಿಯಿಂದ ಮುಕ್ತವಾಗಬೇಕಾದರೆ, ಕಿತ್ತೊಗೆಯಬೇಕು. 2013ರಿಂದ 2018ರವರೆಗೆ ನಮ್ಮ ಸರ್ಕಾರ ಇತ್ತು, ಜನ ಈಗ ನಿಮ್ಮ ಸರ್ಕಾರದಲ್ಲಿ ಸುವರ್ಣಯುಗವಿತ್ತು ಎಂದು ಹೇಳುತ್ತಿದ್ದಾರೆ. ಮತ್ತೆ ಆ ಸುವರ್ಣ ಯುಗ ಬೇಕಾದರೆ, ಬಿಜೆಪಿಯನ್ನು ಒದ್ದು ಒಡಿಸಿ. ನಮ್ಮ ಕಾರ್ಯಕರ್ತರು ಅದಕ್ಕೆ ಪ್ರೇರಕರಾಗಿರಬೇಕು. ಜನರನ್ನು ಜಾಗೃತಿಗೊಳಿಸಬೇಕು. ನಿಮ್ಮ ಮನೆಗೆ ಬಿಜೆಪಿ ಬೆಂಕಿ ಹಾಕಿದೆ. ನಾವೆಲ್ಲರೂ ಸೇರಿ ಈ ಬೆಂಕಿ ಆರಿಸೋಣ ಎಂದು ಮನವಿ ಮಾಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಈ ಹೋರಾಟ ಪ್ರಾರಂಭವಾಗಿದ್ದು, ನಿರಂತರವಾಗಿ ಮುಂದುವರಿಯಲಿದೆ.
ಇನ್ನು ರಾಗಿ ವಿಚಾರ. ಈ ವರ್ಷ 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆಯಲಾಗಿದೆ. ಪ್ರತಿ ಕ್ವಿಂಟಾಲ್ ಗೆ 3370 ರೂ. ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದಾರೆ. ಕೇಂದ್ರ ಸರ್ಕಾರ 2.1 ಲಕ್ಷ ಮೆ.ಟನ್ ಮಾತ್ರ ಖರೀದಿ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೆ ನಾನು ರೈತರು ಬೆಳೆದಿರುವುದರಲ್ಲಿ ಶೇ.50ರಷ್ಟಾದರೂ ಖರೀದಿ ಮಾಡಿ, ಉಳಿದ ಶೇ.50ರಷ್ಟನ್ನು ಮನೆಯಲ್ಲಿ ಊಟಕ್ಕೆ ಬಳಸಿಕೊಳ್ಳುತ್ತಾರೆ ಎಂದು ಹೇಳಿದೆ. ರೈತರು ಮಾರುಕಟ್ಟೆ ಬೆಲೆಗೂ ಬೆಂಬಲ ಬೆಲೆಗೂ ಒಂದೂವರೆ ಸಾವಿರ ವ್ಯತ್ಯಾಸವಿದೆ. ಇನ್ನು ಭತ್ತ, ಜೋಳ, ತೊಗರಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಮೋದಿ ಅರು ಹೇಗೆ ಆದಾಯ ದುಪ್ಪಟ್ಟು ಮಾಡುತ್ತೀರಿ? ರತರು ಬೆಳೆದಿದ್ದನ್ನು ಖರೀದಿ ಮಾಡಿ. ನಮ್ಮ ಸರ್ಕಾರ ಇದ್ದಾಗ ರೈತರು ಅಪಾರ ಪ್ರಮಾಣದಲ್ಲಿ ಮೆಕ್ಕೆ ಜೋಳ ಬೆಳೆದರು. ಆಗ ನಮ್ಮ ಸರ್ಕಾರ ಎಲ್ಲ ಮೆಕ್ಕೆ ಜೋಳವನ್ನು ಖರೀದಿ ಮಾಡಿತ್ತು. ತೊಗರಿ ಬೆಳೆದಿದ್ದರು, ನಾನು 500 ರೂ. ಹೆಚ್ಚು ಕೊಟ್ಟು ಬೆಳೆದೆ. ಭತ್ತ ಬೆಳೆ ನಾಸವಾದಾಗ ಹೆಕ್ಟೋರ್ ಗೆ 25 ಸಾವಿರ ಕೊಟ್ಟೆ. ಇದು ನಮ್ಮ ಸರ್ಕಾರ. ನಾಶವಾಗುತ್ತಿರುವುದು ಬಿಜೆಪಿ ಸರ್ಕಾರ. ನಾವು ಉಳುವವನೇ ಭೂಮಿಯ ಒಡೆಯ ಮಾಡಿದರೆ, ನೀವು ಉಳ್ಳವನೆ ಭೂಮಿಯ ಹೊಡೆಯ ಮಾಡಿದ್ದೀರಿ. ಈ ರೀತಿ ಆದರೆ ಬಡವರು ಉಳಿಯುತ್ತಾರಾ? ರಾಜ್ಯ ಈ ರೀತಿ ಹಾಳಾಗುತ್ತಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ರೈತರನ್ನು ಹಾಳು ಮಾಡುತ್ತಿದ್ದೀರಿ. ಎಲ್ಲರ ಮನೆಗೂ ಬೆಂಕಿ ಬಿದ್ದೆ. ಈ ಬೆಂಕಿ ಆರಿಸುವ ಕೆಲಸ ಕಾಂಗ್ರೆಸ್ ಜವಾಬ್ದಾರಿ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ: ಇಂದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಬೆಲೆ ಏರಿಕೆ ಮುಕ್ತ ಭಾರತದ ಅಭಿಯಾನವನ್ನು ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರದ ಎಲ್ಲ ಭಾಗದಲ್ಲಿ ನಡೆಯುತ್ತಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮೋದಿ ಅವರ ಸರ್ಕಾರ ಬಂದ ಮೇಲೆ ಬೆಲೆ ಏರಿಕೆಗೆ ಲಂಗು ಲಗಾಮು ಇಲ್ಲದಂತಾಗಿದೆ. ಪೆಟ್ರೋಲ್ ಬೆಲೆ 68ರಿಂದ 11, ಡೀಸೆಲ್ 48ರಿಂದ 97 ರೂ. ಆಗಿದೆ. ಅಡುಗೆ ಅನಿಲ 390ರಿಂದ 1000 ಆಗಿದೆ. ಅಡುಗೆ ಎಣ್ಣೆ 60ರಿಂದ 200 ರೂ. ಆಘಿದೆ. ಬಟ್ಟೆ ಬೆಲೆ ಶೇ.20ರಷ್ಟು, ಸಕ್ಕರೆ, ಕಬ್ಬಿಣ ಟನ್ ಗೆ 38 ಸಾವಿರದಿಂದ 85 ಸಾವಿರ ಆಗಿದೆ. ಸೀಮಂಟ್ 180ರಿಂದ 400 ರೂ. ಆಗಿದೆ. ಜತೆಗೆ ದೇಶದ ಸಾಲವು ಹೆಚ್ಚಾಗುತ್ತಿದೆ. ದೇಶದ ಎಲ್ಲ ಪ್ರಧಾನಿಗಳು ಸೇರಿ ಸಾಲ ಮಾಡಿದ್ದು 52 ಲಕ್ಷ ಕೋಟಿ, ಮೋದಿ 8 ವರ್ಷದಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈಗ ನಮ್ಮ ದೇಶದ ಸಾಲ 155 ಲಕ್ಷ ಕೋಟಿಯಾಗಿದೆ.ಅದಾನಿ ಅವರ ಆದಾಯ 4 ಪಟ್ಟು, ಅಂಬಾನಿ ಆದಾಯ 3 ಪಟ್ಟು ಹೆಚ್ಚಾಗಿದೆ. ಮೋದಿ ಅವರು ತಮಗೆ ಬೇಕಾದ ಉದ್ಯಮಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮಾತ್ರ ಮನ್ನಾ ಮಾಡಲ್ಲ, ಬದಲಿಗೆ ರೈತ ವಿರೋಧಿ ಕಾನೂನು ತರುತ್ತಾರೆ. ಕಾರ್ಮಿಕರ ಸಾಲ ಮನ್ನಾ ಮಾಡಲ್ಲ, ಕೈಗಾರಿಕೆಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಸಂವಿಧಾನವನ್ನು ಬದಲಾವಣೆ ಕೂಗು ಹೆಚ್ಚಾಗಿದ್ದು, ಮುಂದೆ ಅದನ್ನು ಮಾಡಿ ಪರಿಶಿಷ್ಟರು, ದುರ್ಬಲ ವರ್ಗದವರಿಗೆ ಕೊಟ್ಟಿದ್ದ ಅನುಕೂಲ ತೆಗೆಯುವ ಯೋಜನೆ ಮಾಡಿದ್ದಾರೆ. ಇಂದು ಬಡವರು, ಮಧ್ಯಮ ವರ್ಗ ಜೀವನ ಮಾಡುವುದು ಕಷ್ಟವಾಗಿದೆ. ಈಗ ಎಚ್ಚೆತ್ತುಕೊಳ್ಳಬೇಕಿದೆ. ಜನರ ಆದಾಯ ಹೆಚ್ಚುತ್ತಿಲ್ಲ, ಬದಲಿಗೆ ವೆಚ್ಚ ಮಾತ್ರ ಹೆಚ್ಚುತ್ತಿದೆ. ಜನರ ಕಷ್ಟ ಮೋದಿ ಅವರಿಗೆ ಅರ್ಥವಾಗುವುದಿಲ್ಲ. ಕಾರಣ ಅವರು ಮದುವೆಯಾಗಿ ನಂತರ ಸಂಸಾರ ಮಾಡದೇ ಬಿಟ್ಟುಬಿಟ್ಟರು. ಸಂಸಾರ ಮಾಡದವರಿಗೆ ಜನರ ಕಷ್ಟ ಹೇಗೆ ಅರ್ಥವಾಗುತ್ತದೆ. ಇನ್ನು ರಾಜ್ಯದಲ್ಲಿ ಶೇ.40ರಷ್ಟು ಲಂಚ ಪಡೆಯಲಾಗುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. 2018ರ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಶೇ.10 ಸರ್ಕಾರ ಎಂದು ಹೇಳಿದ್ದರು. ಆಗ ಮಾಧ್ಯಮದವರು ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ನಮ್ಮ ಮ್ಲೆ ಆಯವುದೇ ಆರೋಪವಿಲ್ಲ, ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದರು. 13 ವರ್ಷ ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದರು ಅವರು ಅಲ್ಲಿ ಆ ಕೆಲಸ ಮಾಡಿ ಇಲ್ಲಿ ಬಂದು ಹೇಳುತ್ತಿದ್ದಾರೆ ಎಂದು ಉತ್ತರಿಸಿದ್ದೆ. ಇಂದು ಶೇ.40ರಷ್ಟು ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್: ಬೆಲೆ ಏರಿಕೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರು ಹುಬ್ಬಳ್ಳಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗೆ ಆರ್ಥಿಕ ನೆರವು ಕೊಟ್ಟು ಬಂದಿದ್ದಾರೆ. ಅವರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಬಡವರು ಹಾಗೂ ಹುರ್ಬಲ ವರ್ಗದವರ ಪರವಾಗಿ ನಿಲ್ಲುವುದು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 10 ಪೈಸೆ ಬೆಲೆ ಏರಿಕೆಯಾದರೂ ಹೆಗಲ ಮೇಲೆ ಆಗಲಕಾಯಿ, ಸೋರೆಕಾಯಿ ಮಾಲೆ ಹಾಕಿಕೊಂಡು ಪ್ರತಿಭಟನೆ ಮಾಡುತ್ತಿದ್ದರು. ನಿನ್ನೆ ಅವರು ಬಾಂಬೆ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ನೆಟ್ಟಾ ಡಿಸೋಜಾ ಅವರು ಸ್ಮೃತಿ ಇರಾನಿ ಅವರಿಗೆ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಸ್ಮೃತಿ ಇರಾನಿ ತಪ್ಪಿಸಿಕೊಂಡು ಹೋಗಿದ್ದಾರೆ.
ಕೇವಲ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ನಾಯಕರಾದರೆ ಸಾಲುವುದಿಲ್ಲ. ಮೂಲಭೂತ ಜವಾಬ್ದಾರಿ, ಸಂವಿಧಾನದಲ್ಲಿ ಕೊಟ್ಟಿರುವ ಜವಾಬ್ದಿರಿಯಿಂದ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು. ನಮ್ಮ ಪೂರ್ವಜರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆ. ಅವರು ಹೇಡಿಗಳಲ್ಲ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಗಗನಕ್ಕೇರುವಾಗ ಈ ಬಗ್ಗೆ ಮೋದಿ, ಅಮಿತ್ ಶಾ ಮಾತನಾಡುತ್ತಿಲ್ಲ. ಅವರು ಹಿಂದಿ ಭಾಷೆ ಕಲಿಬೇಕು ಎಂತಿದ್ದಾರೆ. ನಾವು ತ್ರಿ ಭಾಷಾ ಸೂತ್ರ ಇಟ್ಟುಕೊಂಡಿರುವವರು. ನಾನು ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತೇನೆ. ಆದರೆ ನನ್ನ ಮೇಲೆ ಹಿಂದಿ ಹೇರಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಮಾತೃಭಾಷೆ ಕನ್ನಡ. ಅದೇ ಶಾಶ್ವತ, ಅಮಿತ್ ಶಾ ಏನು ಮಾಡಲಿಕ್ಕೆ ಸಾಧ್ಯವಿಲ್ಲ.
ತಡಿಪಾರ್ ಅಮಿತ್ ಶಾ ಗುಜರಾತ್ ಹೈಕೋರ್ಟ್ ಹಿಂಗಿ ರಾಷ್ಟ್ರ ಭಾಷೆ ಅಲ್ಲ ಎಂಬ ತೀರ್ಪನ್ನು ತಿಳಇಯಲಿ. ನಂತರ ಬೇರೆಯವರಿಗೆ ಹೇಳಲಿ. ಮೋದಿ ಅವರು ಅಚ್ಛೇದಿನ, ಗುಜರಾತ್ ಮಾಡೆಲ್ ಎಂದವರು ಈಗ ಮಾತನಾಡುತ್ತಿಲ್ಲ. ಮೊನ್ನೆಯ ಬಜೆಟ್ ನಲ್ಲಿ ಅಚ್ಛೇದಿನವನ್ನು ಅಮೃತ ಕಾಲ ಎಂದಿದ್ದಾರೆ. ಅಂದರೆ 25 ವರ್ಷ ಬಿಟ್ಟು ನೋಡಿ ಎಂದಿದ್ದಾರೆ. ದೇಶದಲ್ಲಿ ಬಿಜೆಪಿ ಎಲ್ಲಿವರೆಗೂ ಅಧಿಕಾರದಲ್ಲಿರುತ್ತದೋ ಅಲ್ಲಿಯವರೆಗೂ ಅಮೃತ ಕಾಲವನ್ನು, ‘ರಾಹು ಕಾಲ’ ಇರುತ್ತದೆ. ಕರ್ನಾಟಕ ರಾಜ್ಯದ ಕುವೆಂಪು, ಬಸವಣ್ಣ, ಶಿಶುನಾಳ ಶರೀಫರು, ದಾ.ರಾ ಬೇಂದ್ರೇ, ಗಂಗೂಬಾಯಿ, ಭೀಮಸೇನ ಜೋಷಿ, ಚಂಪಾಯಂತಹ ಮಹಾತ್ಮರು ಕೋಮುಸ್ವಾರಸ್ಯವನ್ನು ಹರಿಸಿ ಹೋಗಿದ್ದಾರೆ. ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಆದರೆ ಬಿಜೆಪಿ ಇವರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಎಷ್ಟು ಜನ ವಿದ್ವಾಂಸರು, ಸಾಹಿತಿಗಳು ಕಣವಿ, ಚಂಪಾ, ರಾಜಗುರು, ಪಾಟೀಲ ಪುಟ್ಟಪ್ಪ, ಕಾರ್ನಾಡರು, ಪಂಚಾಕ್ಷರಿ ಗವಿಗಳು ನಾಡಿನ ಸೌಹಾರ್ದತೆಗೆ ಶ್ರಮಿಸಿದವರು. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಇಡೀ ರಾಜ್ಯದ ಜನತೆ ತಲೆತಗ್ಗಿಸಬಹುದು. ದೇವರ ಹೆಸರು ಹೇಳುತ್ತಾರೆ ಎಂದರೆ ಪರ್ವಾಗಿಲ್ಲ. ಆದರೆ, ಬಡ ವ್ಯಾಪಾರಿ ತನ್ನ ಹೊಟ್ಟೆಪಾಡಿಗೆ ವ್ಯಾಪಾರ ಮಾಡುವಾಗ ದಾಳಿ ಮಾಡುತ್ತಾರೆ ಎಂದರೆ ಇವರು ಯಾವ ಶೂರರು? ರಾಮಸೇನಾ ಅಧ್ಯಕ್ಷ ಮುತಾಲಿಕ್, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಲಭೆ ಮಾಡಿದ ವ್ಯಕ್ತಿ, ಅದರ ಲಾಭ ಪಡೆದು ಮಂತ್ರಿಯಾಗಿರುವುದು ಪ್ರಹ್ಲಾದ್ ಜೋಷಿ. ಮುತಾಲಿಕ್ ನಿನಗೆ ಏನು ಆಗುವುದಿಲ್ಲ. ಅವರನ್ನು ಉಪಯೋಗಿಸಿಕೊಂಡ ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡದಲ್ಲಿ ಸಂಸದರಾಗಿ ಹೋಗಿದ್ದಾರೆ. ಮುತಾಲಿಕ್ ಇದೇ ರೀತಿ ಮಾತನಾಡುತ್ತಿದ್ದರೆ ಬಿಜೆಪಿಯವರೇ ನಿಮ್ಮನ್ನು ಜೈಲಿಗೆ ಹಾಕುವ ದಿನ ದೂರ ಉಳಿದಿಲ್ಲ. ಅವರನ್ನು ನಂಬಿ ಏನನ್ನೂ ಮಾಡಬೇಡಿ. ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂತಿಲ್ಲ. ಯಾವುದೇ ವಿಚಾರ ಬರಲಿ, ಸಂವಿಧಾನಕ್ಕೆ ಧಕ್ಕೆಯಾಗುವುದಾದರೆ ತೀವ್ರವಾಗಿ ಎದುರಿಸುತ್ತೇವೆ.
ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ನೇರ ಉತ್ತರ ಕೊಡಲು ಆಗುತ್ತಿಲ್ಲ. ಅವರ ಸಂಪುಟದಲ್ಲಿರುವ ಅರೆ ಜ್ಞಾನ ಇರುವ ಜ್ಞಾನೇಂದ್ರ ಗೃಹ ಮಂತ್ರಿ ಯಾವ ಹೇಳಿಕೆ ನೀಡುತ್ತಾರೆ ಗೊತ್ತಿಲ್ಲ. ಅವರಿಗೆ ಹೆಂಡ, ಗಾಂಜಾ ಕುಡಿಯುವ ಅಭ್ಯಾಸ ಇರಬೇಕು, ಹೀಗಾಗಿ ಆ ರೀತಿ ಮಾತನಾಡುತ್ತಾರೆ. ಇಂಥಹವರು ಗೃಹಮಂತ್ರಿಯಾಗಿರುವುದು ದುರಾದೃಷ್ಟ. ಮಹಿಳೆಯರು, ಬೆಲೆ ಏರಿಕೆ, ಶಾಲಾ ಮಕ್ಕಳ ಮೇಲಿನ ದೌರ್ಜನ್ಯ ವಿಚಾರವಾಗಿ ಇವೆಲ್ಲಕ್ಕೂ ಉತ್ತರ ನೀಡಲು ಸಾಧ್ಯವಾಗದ ಕೆಲಸಕ್ಕೆ ಬಾರದ ಸರ್ಕಾರ ಇದ್ದರೆ ಅದು ಬಿಜೆಪಿ ಸರ್ಕಾರ. ಮೋದಿ ಅವರು ಹಸು ಸತ್ತರೆ ಟ್ವೀಟ್ ಮಾಡುತ್ತಾರೆ. ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಬಡವರ ಮೇಲೆ ಹಲ್ಲೆಯಾದರೆ ಮನ್ ಕಿ ಬಾತ್ ನಲ್ಲಿ ಮಾತನಾಡುವುದಿಲ್ಲ. ಹೀಗಾಗಿ ಕಾಂಗ್ರೆಸ್ ಹೆಚ್ಚಿನ ಜವಾಬ್ದಾರಿಯುತ ಪಕ್ಷವಾಗಿದೆ. ಆರ್ ಎಸ್ಎಸ್ ನವರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಬ್ರಿಟೀಷರ ಏಜೆಂಟ್ ಅಗಿದ್ದವರು. ಅಟಲ್ ಬಿಹಾರಿ ವಾಜಪೇಯಿ ಅರು ಬ್ರಿಟೀಷರಿಗೆ 1942ರಲ್ಲಿ ಮುಚ್ಚಳಿಕೆ ಪತ್ರ ಬರೆದು ಕ್ಷಮೆ ಕೇಳಿದ್ದರು. ಸಾರ್ವಕರ್ ಅವರು 3 ಬಾರಿ ಕ್ಷಮಾಪಣೆ ಪತ್ರ ಬರೆದವರು. ಇವರಿಗೆ ದೇಶದ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹಿಂದೂ, ಮುಸಲ್ಮಾನ, ಕ್ರೈಸ್ತ, ಸಿಖ್, ಬೌದ್ಧ ಎಲ್ಲ ಧರ್ಮದವರು ಬೇಧ ಭಾವ ಇಲ್ಲದೆ ತ್ಯಾಗ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದ ಸದಸ್ಯರಾಗಲು ನಾವೆಲ್ಲರೂ ಹೆಮ್ಮೆ ಇರಬೇಕು.
ಆರ್ ಎಸ್ಎಸ್ ನಾಯಕರು ಅಂಬೇಡ್ಕರ್ ಹೆಸರು ಹೇಳುತ್ತಾರೆ ಮಾಡುವುದು ಗೋಡ್ಸೆ ಹಾಗೂ ಸಾರ್ವಕರ್ ಅವರ ಕೆಲಸಗಳು. ಇವರ ಕೆಲಸಕ್ಕೂ ಹಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೂ ಧರ್ಮ ಪಾಲನೆ ಮಾಡಿದವರು, ಮಹಾತ್ಮಾ ಗಾಂಧಿ, ವಿವೇಕಾನಂದ, ನೆಹರೂ, ಇಂದಿರಾಗಾಂಧಿ. ಹಿಂದುತ್ವ ಮಾಡಿದವರು ಸಾರ್ವಕರ್, ಗೋಡ್ಸೆಯಂತಹವರು. ಹಿಂದೂ ಧರ್ಮದಲ್ಲಿ ಸಹಿಷ್ಣುತೆ, ಅಹಿಂಸೆ, ಸತ್ಯವನ್ನು ಹೇಳುವ ಧರ್ಮ. ಹಿಂದುತ್ವ ಎಂದರೆ ಹಿಂಸೆ, ಸುಳ್ಳು, ದೌರ್ಜನ್ಯವಾಗಿದೆ. ಈ ದೇಶಕ್ಕೆ ಪ್ರಜಾಪ್ರಭುತ್ವ, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಇದರ ಸದಸ್ಯರಾಗಿ ಇವುಗಳನ್ನು ಕಾಪಾಡುವ ಜವಾಬ್ದಾರಿ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂವಿಧಾನ ಇಲ್ಲದಿದ್ದಾಗ ಧರ್ಮ ಆಧಾರಿತ ರಾಜಕಾರಣ ನಡೆಯುತ್ತಿತ್ತು. ಆಗ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಧರ್ಮದ ಹೆಸರಲ್ಲಿ ದುರ್ಬಲರ ಶೋಷಣೆ ನಡೆಯುತ್ತಿತ್ತು. ಸಂವಿಧಾನ ಬಂದ ನಂತರ ಮಹಿಳೆಯರು, ದುರ್ಬಲರ ರಕ್ಷಣೆ ಆಗುತ್ತಿದೆ. ಹೀಗಾಗಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಕಾಪಾಡುವುದು ನಮ್ಮ ಜವಾಬ್ದಾರಿ. ಯಾವುದೇ ಮಂದಿರದಲ್ಲಿ ಮಹಿಳೆ ಪೂಜಾರಿಯಾಗಲು ಸಾಧ್ಯವಿಲ್ಲ, ಯಾವುದೇ ಮಸೀದಿಯಲ್ಲಿ ಮಹಿಳೆಯರು ಮೊಲ್ಲಾಗಳಾಗಲು ಸಾಧ್ಯವಿಲ್ಲ, ಗುರುದ್ವಾರದಲ್ಲಿ ಗ್ರಂಥಿಯಾಗಲು, ಚರ್ಚ್ ಗಳಲ್ಲಿ ಮಹಿಳೆಯರು ಫಾದರ್ ಆಗಲು ಸಾಧ್ಯವಿಲ್ಲ. ಆದರೆ ಸಂವಿಧಾನ ಬಂದ ನಂತರ ಮಹಿಳೆಯರು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಮಂತ್ರಿ, ಶಾಸಕಿಯಾಗಬಹುದು. ಮಹಿಳಾ ಶಕ್ತಿ ಹೆಚ್ಚಾಗಿದ್ದು, ಮನೆ ಮನೆಗೂ ಹೋಗಿ ಬೆಲೆ ಏರಿಕೆ ವಿರುದ್ಧ ಜಾಗೃತಿ ಮೂಡಿಸಬೇಕು.
ಪ್ರಚಾರ ಸಮಿತಿ ಮುಖ್ಯಸ್ಥರಾದ ಎಂ.ಬಿ ಪಾಟೀಲ್: 2014ರಲ್ಲಿ ಮೋದಿ ಅವರು ಪ್ರಧಾನಿಯಾಗುವ ಮುನ್ನ ದೇಶದಲ್ಲಿ ದೊಡ್ಡ ಪ್ರಚಾರ ಪಡೆದರು. ಯುವ ಜನರಲ್ಲಿ ದೊಡ್ಡ ಬದಲಾವಣೆ ಕನಸು ಬಿತ್ತಿದರು. ಕಪ್ಪು ಹಣ ತಂದು ಎಲ್ಲರ ಖಾತೆಗೆ 100 ದಿನದಲ್ಲಿ 15 ಲಕ್ಷ ಹಾಕುತ್ತೇವೆ ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದರು. 8 ವರ್ಷಕ್ಕೆ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಕೋಜಟ್ಯಂತರ ಉದ್ಯೋಗ ನಾಶವಾಗಿದೆ. ಅಚ್ಛೇದಿನ ಬರುತ್ತದೆ ಎಂದರು. ಆದರೆ ಅಚ್ಛೇ ದಿನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ, ಕಬ್ಬಿಣ, ಸೀಮೆಂಟ್ ಎಲ್ಲವೂ ಬೆಲೆ ಹೆಚ್ಚಾಗಿದೆ. ಇದೇ ಮೋದಿಯವರ ಅಚ್ಛೇ ದಿನ. ಮಾತೆತ್ತಿದರೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರು. ಇಂದು ರಾಜ್ಯದಲ್ಲಿ ಒಂದು ವರ್ಗದ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಮಾಡಿ ಮತ ಧೃವಿಕರಣ ಮಾಡಲು ಹೊರಟಿದ್ದಾರೆ. ನೋಟು ರದ್ದತಿ ತಪ್ಪು ನಿರ್ಧಾರದಿಂದ ಅನೇಕ ಉದ್ದಿಮೆ ಬಂದ್ ಆದವು. ಕೊರೋನಾದಲ್ಲಿ ಪರಿಸ್ಥಿತಿಯಲ್ಲಿ ತಪ್ಪು ಹೆಜ್ಜೆ ಇಟ್ಟು, ಮೌಢ್ಯಗಳ ಮೂಲಕ ಪ್ರಚಾರ ಮಾಡಿಕೊಂಡು ದೊಡ್ಡ ಉದ್ದಿಮೆಗಳು, ಸಣ್ಣ ಉದ್ದಿಮೆ, ರೈತರು ಸಂಕಷ್ಟಕ್ಕೆ ಒಳಗಾದರು. ರೈತರ ಆದಾಯ ದ್ವಿಗುಣ ಎಂದರು. ಈಗ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನ ತತ್ತರಿಸಿದ್ದಾರೆ.
ಟೊಮೆಟೋ, ಆಲೂಗಡ್ಡೆ ಹೆಚ್ಚಾದರೆ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಇಂದು ಬೆಲೆ ಡಬಲ್ ಆದರೂ ಸುಮ್ಮನಿದ್ದಾರೆ. ಈಗ ಜನಸಾಮಾನ್ಯರು, ಮೋದಿಯವರೆ ನಿಮ್ಮ ಅಚ್ಛೇದಿನ ಹಂಪಡೆದು, ನಮಗೆ ಹಳೇಯ ಕೆಟ್ಟ ದಿನಗಳನ್ನೇ ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ. ಪೆಟ್ರೋಲ್, ಜೀಸೆಲ್, ಕಬ್ಬಿಣ, ಸೀಮೆಂಟ್ ದರಗಳನ್ನು ಹಳೇಯ ದರಕ್ಕೆ ತಂದುಕೊಡಿ ಸಾಕು ಎನ್ನುತ್ತಿದ್ದಾರೆ. ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯದಲ್ಲಿ ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಂತಹ ಅನಿಷ್ಟ ಪದ್ಧತಿ ತಂದು ಒಂದು ಧರ್ಮದವರನ್ನು, ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.
ಇನ್ನು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬೇಸತ್ತು, ಇಲ್ಲಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿಗಳು ರಾಷ್ಟ್ರಪತಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಸುಮ್ಮನಿದ್ದಾರೆ. ಆದರೆ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಇಡಿ, ಸಿಬಿಐ ದಾಳಿ ಆಗುತ್ತದೆ. ಶೇ40 ಕಮಿಷನ್ ಬಗ್ಗೆ ಮಾತನಾಡುವುದಿಲ್ಲ. ಈ ಕಮಿಷನ್ ಹಣ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಪದ್ಧತಿ. ಜನಸಾಮಾನ್ಯರ ಹಣ ಲೂಟಿ ಮಾಡಲಾಗುತ್ತಿದೆ. ನಮ್ಮ ಬೂತ್ ಸಮಿತಿ, ಸ್ಥಳೀಯ ನಾಯಕರು ಪ್ರತಿಭಟನೆ ಮಾಡಬೇಕು. ಮಹಿಳಾ ಕಾಂಗ್ರೆಸ್ ಯೂಥ್ ಕಾಂಗ್ರೆಸ್ ಬಿಜೆಪಿ ವೈಫಲ್ಯವನ್ನು ಜನರಿಗೆ ತಿಳಿಸಬೇಕು. ಆಗ ಮಾತ್ರ ಮತ್ತೆ ನಾವು 2023ರಲ್ಲಿ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನಡೆಸಲು ಸಾಧ್ಯ. ಅಧಿಕಾರಕ್ಕೆ ಬರುವುದು ಜನರ ಸೇವೆ, ಬದುಕು ಕಟ್ಟಲು. ಆದರೆ ಬಿಜೆಪಿ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಸಿದವನಿಗೆ ಅನ್ನ, ವಿದ್ಯಾರ್ಥಿಗಳಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ, ರಾಜ್ಯ ಅಭಿವೃದ್ಧಿಯಾಗಬೇಕು. ಆದರೆ ಇಂದು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೋಮು ಭಾವನೆ ಪ್ರಚೋದಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ, ಮುಂದೆ ಯಾವುದೇ ಉದ್ಯಮಿಗಳು ರಾಜ್ಯಕ್ಕೆ ಮರಳುವುದಿಲ್ಲ. ಆರ್ಥಿಕತೆ ತತ್ತರಿಸುತ್ತದೆ. ಆಗ ನಮಗೂ ಶ್ರೀಲಂಕಾ ಪರಿಸ್ಥಿತಿ ಬರುತ್ತದೆ. ನಾವೆಲ್ಲರೂ ಸೇರಿ ಈ ಸರ್ಕಾರದ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡುತ್ತೇನೆ.
ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್: ದೇಶ ಹಾಗೂ ರಾಜ್ಯಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮೋದಿ ಅವರ ಸರ್ಕಾರ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ಬಿಜೆಪಿ ಸರ್ಕಾರ ನಿರ್ಜೀವ ಸರ್ಕಾರವಾಗಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಒಂದು ಅವಕಾಶ ಕೊಡಿ ಸ್ವರ್ಗ ತೋರಿಸುತ್ತೇವೆ ಎಂದು ಹೇಳಿದ್ದರು. ಆದರೆ ಮೋದಿ ಅವರು ನರಕ ತೋರಿಸಿದ್ದಾರೆ. ಇದು ಅಯ್ಯೋಗ್ಯರ ಸರ್ಕಾರ. ಇವರಿಗೆ ಎಷ್ಟು ಹೇಳಿದರೂ ಪ್ರಯೋಜನವಿಲ್ಲ, ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಸಿದ್ಧಾಂತ, ವಿಚಾರಧಾರೆಗಳಿಲ್ಲ. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಜನ ಭ್ರಮನಿರಸನರಾಗಿದ್ದಾರೆ. ಈ ಸರ್ಕಾರ ಜನರಿಗೆ ಬೇಕಾಗಿಲ್ಲ. ಹಾನಗಲ್, ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಇದೊಂದು ಭ್ರಷ್ಟ ಹಾಗೂ 40% ಕಮಿಷನ್ ಸರ್ಕಾರ ಆಗಿದೆ. ಜನ ನಮ್ಮನ್ನು ಬೆಂಬಲಿಸುವುದಿಲ್ಲ ಎಂದು ತಿಳಿದು ಸಮಾಜದಲ್ಲಿ ಕೋಮುದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೋಮು ಸಾಮರಸ್ಯ ಹೊಂದಿದ್ದ ಸಮಾಜದಲ್ಲಿ ಹುಳಿ ಹಿಂಡುತ್ತಿದ್ದಾರೆ. ಈ ಎಲ್ಲ ವಿಚಾರವನ್ನು ಜನರಿಗೆ ಮುಟ್ಟಿಸಬೇಕು. ಮೋದಿ ಸರ್ಕಾರ ಬಂದು 8 ವರ್ಷವಾದರೂ ಅಭಿವೃದ್ಧಿ ಆಗಿಲ್ಲ, ಕಪ್ಪು ಹಣ ಬರಲಿಲ್ಲ, ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಚುನಾವಣೆ ಮುನ್ನ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರು. ಆದರೆ ಅವರು ಸಬ್ ಕಾ ವಿನಾಶ್ ಮಾಡಿದ್ದಾರೆ. ಬೆಲೆ ಏಱಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಜನರ ಮನೆ ಮನೆಗೆ ಹೋಗಿ ಈ ವಿಚಾರವನ್ನು ತಿಳಿಸಬೇಕಾಗಿರುವುದು ನಮ್ಮ ಜವಾಬ್ದಾರಿ.
ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ: 8 ವರ್ಷಗಳ ಹಿಂದೆ ಸುಳ್ಳು ಭರವಸೆ ನೀಡಿ, ಸುಳ್ಳು ಹೇಳಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬಂತು. ಇದುವರೆಗೂ ಒಂದು ಭರವಸೆ ಈಡೇರಿಸದೇ, ಜನರ ಮೇಲೆ ಬೆಲೆ ಏರಿಕೆ ಪ್ರಹಾರ ನಡೆಸಿದೆ. ಬೆಲೆ ಏರಿಕೆ ಎಲ್ಲೆ ಮೀರಿದೆ. ಹೀಗಾಗಿ ಜನ ತತ್ತರಿಸಿದ್ದು, ಮಹಿಳೆಯರು ಅಡುಗೆ ಮನೆಗೆ ಹೋದರೆ ಕಣ್ಣೀರು ಬರುವ ಪರಿಸ್ಥಿತಿ ಬಂದಿದೆ. ರಾಜ್ಯ ಹಾಗೂ ಕೇಂದ್ರದ ದುರಾಡಳಿತ, ಬ್ರಹ್ಮಾಂಡ ಭ್ರಷ್ಟಾಚಾರ, ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ 26 ಲಕ್ಷ ಕೋಟಿ ಸಂಗ್ರಹಿಸಿದ್ದಾರೆ. 40% ಗುತ್ತಿಗೆದಾರರಿಂದ ಪಡೆಯುತ್ತಿರುವುದು, ಈ ಸರ್ಕಾರ ಅನೇಕ ಇಲಾಖೆಗಳಲ್ಲಿ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಗಳಲ್ಲಿ ಶೇ.100ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯಕ್ಕೆ ಕಳಂಕ ತಂದಿರುವುದು ಬಿಜೆಪಿ. ನಾನು ಈ ದೇಶದ ಕಾವಲುಗಾರನಾಗಿರುತ್ತೇನೆ, ಯನಾನು ಲಂಚ ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದಿದ್ದರು. ಆದರೆ ಈಗ ಅವರ ಹೇಳಿಕೆ ಬದಲಿಸಿಕೊಳ್ಳಬೇಕು. ನಾನು ತಿಂತೀನಿ, ತಿನ್ನಲು ಬಿಡುತ್ತೇನೆ ಎಂದು ಬದಲಿಸಿಕೊಳ್ಳಬೇಕು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು, ಆದರೆ ರಸಗೊಬ್ಬರ ಸೇರಿದಂತೆ ಬೆಲೆ ಏರಿಕೆಯಿಂದ ಅವರ ವೆಚ್ಚ ದುಪ್ಪಟ್ಟಾಗಿದೆ. ನೀವು ಮಾಡಿದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ, ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. 2022ರವರೆಗೆ ಸೂರಿಲ್ಲದವರಿಗೆ ಸೂರು, ರೋಟಿ, ಕಪಡಾ, ಮಕಾನ್ ನೀಡುತ್ತೇವೆ ಎಂದಿದ್ದರು? ಯಾರಿಗೆ ಕೊಟ್ಟರು ಇದನ್ನೆಲ್ಲಾ? ಒಂದೇ ಒಂದು ಮನೆ ಇದುವರೆಗೂ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರು ಕೊಟ್ಟ ಮನೆಗೂ ಕಂತು ಪಾವತಿ ಮಾಡಿಲ್ಲ.
ಬಿಜೆಪಿ ಎಂದಿಗೂ ಜನಪರ ಕಾಳಜಿ ಹೊಂದಿಲ್ಲ, ಇವರಲ್ಲಿ ಮೂಲಭೂತವಾದಿಗಳು, ಪಟ್ಟಬದ್ಧಹಿತಾಸಕ್ತಿಗಳು ಇದ್ದಾರೆ. ಇಂದು ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಇವರೇ ಗುತ್ತಿಗೆಗೆ ಪಡೆದಿರುವವರಂತೆ ಕಿರುಚಾಡುತ್ತಾರೆ. ಇವರ ಇತಿಹಾಸ ನೋಡಿದರೆ, ಇವರು ಎಂದೂ ರಾಷ್ಟ್ರಪ್ರೇಮಿಗಳಾಗಿರಲಿಲ್ಲ. ಇವರು ಆರಾಧಿಸುವ ನಾಯಕರು ಬ್ರಿಟೀಷರು ಹೇಳಿದಂತೆ ಕೇಳುತ್ತಿದ್ದರು. ಹುಸಿ ರಾಷ್ಟ್ರಭಕ್ತರು ಸುಳ್ಳು ಹೇಳುತ್ತಿದ್ದಾರೆ. ಅವರು ಬಡವರು, ಯುವಕರು, ಮುಗ್ಧ ಜನರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇವರ ಕುತಂತ್ರವನ್ನು ಜನರಿಗೆ ತಿಳಿಸಬೇಕು. ಯಾವುದೇ ಅಲ್ಪಸಂಖ್ಯಾತ ವರ್ಗವನ್ನು ಗುರಿಯಾಗಿಸಿ ಒಡೆದು ಆಳುವ ತಂತ್ರ ರೂಪಿಸಿದ್ದಾರೆ. ದೇಶದ ಏಕತೆ, ಅಖಂಡತೆಗೆ ಧಕ್ಕೆ ಬರುವ ಕೆಲಸ ಮಾಡುತ್ತಿದ್ದಾರೆ. ರೈತ ವಿರೋಧಿ, ಯುವ ವಿರೋಧಿ, ಕಾರ್ಮಿಕರ ವಿರೋಧಿ, ಶೋಷಿತರ ವಿರೋಧಿ ಈ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಮಾತ್ರವಲ್ಲ ದೇಶಕ್ಕೆ ಅವಶ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ, ದೇಶದ ಏಕತೆ ಉಳಿಸಬೇಕಾದರೆ ಬಿಜೆಪಿ ತೆಗೆದುಹಾಕಬೇಕು. ಬೆಲೆ ಏರಿಕೆ ಮುಕ್ತ ಅಭಿಯಾನ ಆಗಬೇಕಾದರೆ, ಬಿಜೆಪಿ ಮುಕ್ತ ಅಭಿಯಾನವಾಗಬೇಕು. ಪಂಚರಾಜ್ಯ ಚುನಾವಣೆ ಇದ್ದಾಗ ಬೆಲೆ ಏರಿಕೆ ಮಾಡಲಿಲ್ಲ, ಚುನಾವಣೆ ಮುಗಿದ ನಂತರ ಲೂಟಿ ಮಾಡುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ದುರ್ಬಲ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಇದೊಂದು ಚಕ್ರ ಇರುವಂತೆ ಕೆಲಗಿದ್ದವರು ಮೇಲೆ ಬರಬೇಕು. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬಂದೇ ಬರುತ್ತದೆ. ಒಂದು ವರ್ಷದ ಸಮಯದಲ್ಲಿ ನಿರಂತರವಾಗಿ ಶ್ರಮಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರೋಣ.
‘ಕಾರ್ಯಾಧ್ಯಕ್ಷರಾದ ಧೃವನಾರಾಯಣ:’
ಕಳೆದ 17 ದಿನಗಳಿಂದ 14 ಬಾರಿ ಇಂಧನ ದರ ಹೆಚ್ಚಾಗಿದೆ. ಪಂಚ ರಾಜ್ಯ ಚುನಾವಣೆ ನಂತರ ಈ ಬೆಲೆ ಏರಿಕೆ ಮಾಡಿದೆ. ನಾನು 10 ವರ್ಷ ಸಂಸದನಾಗಿದ್ದೆ. ಯುಪಿಎ ಅವಧಿ ಹಾಗೂ ಎನ್ ಡಿಎ ಅವಧಿಯಲ್ಲಿ ಸಂಸದನಾಗಿದ್ದೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಬೆಲೆ ನಿಯಂತ್ರಣದ ಜತೆಗೆ ಉತ್ತಮ ಕಾರ್ಯಕ್ರಮ ನೀಡುತ್ತಿದ್ದರು.
ನರೇಗಾ ಯೋಜನೆ ಮೂಲಕ ಉದ್ಯೋಗ ಕೊಟ್ಟು 50 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದರು. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ದೇಶದಾದ್ಯಂತ ಗೋಧಿ ಮತ್ತು ಅಕ್ಕಿಯನ್ನು ಪ್ರತಿ ಕೆ.ಜಿಗೆ 3 ರೂ.ನಂತೆ ನೀಡುವ ಕೆಲಸ ಮಾಡಿದರು. ಇದಕ್ಕಾಗಿ ವರ್ಷಕ್ಕೆ 1.50 ಲಕ್ಷ ಕೋಟಿ ಇಟ್ಟರು. ಕಡ್ಡಾಯ ಮತ್ತು ಉಚಿತ ಶಿಕ್,ಮಕ್ಕಾಗಿ 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು 1.25 ಲಕ್ಷ ಕೋಟಿ ಇಟ್ಟರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಮೂಲಕ 40 ಸಾವಿರ ಕೋಟಿ ಕೊಟ್ಟರು. ಹೀಗೆ ಎಲ್ಲ ಸಮಾಜದವರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳ ಜತೆಗೆ ಬೆಲೆಯನ್ನು ನಿಯಂತ್ರಣ ಮಾಡಿದ್ದರು. ಆಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಹೆಚ್ಚಾಗಿದ್ದು, ಆಗ ಇಂಧನ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಇಂದು ಕಚ್ಛಾತೈಲ ಬೆಲೆ ಕಡಿಮೆ ಇದ್ದರೂ ಅಬಕಾರಿ ಸುಂಕ ಹೆಚ್ಚಿಸಿ ಬೆಲೆ ಹೆಚ್ಚಿಸಿದ್ದಾರೆ. ಕೋವಿಡ್ ನಿಂತರೂ ತೈಲ ಬೆಲೆ ಹೆಚ್ಚುತ್ತಿದೆ. ಕಾಂಗ್ರೆಸ್ ಇದನ್ನು ಎಚ್ಚರಿಕೆ ಗಂಟೆಯಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿಳಿಸಬೇಕು.
ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾದರೂ ಒಂದೇ ಒಂದು ಜನಪರ ಯೋಜನೆ ಜಾರಿ ಮಾಡಿಲ್ಲ. ನಾವು ಕೊಟ್ಟ ಆಹಾರ ಭದ್ರತೆ, ಶಿಕ್,ಮ, ಆರೋಗ್ಯ, ಉದ್ಯೋಗ ಯೋಜನೆ ಬಡವರಿಗೆ ಅನುಕೂವಾಗುತ್ತಿತ್ತು. ಇಂತಹ ಯೋಜನೆ ಬಿಜೆಪಿ ಕೊಟ್ಟಿಲ್ಲ. ಅವರು ಜನರ ಮೇಲೆ ಹೊರೆ ಹೆಚ್ಚಿಸುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಸಮಯ ವ್ಯರ್ಥ ಮಾಡದೇ ಹಗಲು ರಾತ್ರ ಪ್ರತಿ ಗ್ರಾಮದಲ್ಲಿ ನಿರಂತರ ಹೋರಾಟ ಮಾಡಬೇಕು. ಅಲ್ಪಸಂಖ್ಯಾತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಿರಂತರವಾಗಿ ಒಂದು ಧರ್ಮವನ್ನು ಬಿಜೆಪಿ ಅವಹೇಳನ ಮಾಡುತ್ತಿದೆ. ಕಾಂಗ್ರೆಸ್ ಒಂದು ಧರ್ಮ, ಜಾತಿ, ಭಾಷೆಗೆ ಸೀಮಿತವಾಗಿಲ್ಲ. ಎಲ್ಲರ ಏಳಿಗೆಗಾಗಿ ದುಡಿಯುವ ಏಕೈಕ ಪಕ್ಷ ಕಾಂಗ್ರೆಸ್, ಬಸವಣ್ಣನವರ ಅನುಭವ ಮಂಟಪವನ್ನು ನೋಡಬೇಕಾದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ. ಬಿಜೆಪಿಯವರು ಹೆಸರಿಗೆ ಬಸವಣ್ಣನವರನ್ನು ಹೇಳುತ್ತಾರೆ. ಆದರೆ ಬಸವಣ್ಣನವರ ತತ್ವ ಸಿದ್ಧಾಂತ, ಸಂವಿಧಾನದ ಆಶಯ ಪಾಲಿಸುತ್ತಿರುವುದು ಕಾಂಗ್ರೆಸ್ ಮಾತ್ರ. ನಾವೆಲ್ಲರೂ ಜನರ ಜಾಗೃತಿ ಮೂಡಿಸುವ ಕೆಲಸ ಮುಂದುವರಿಸೋಣ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ : ದೇಶ ಬಡತನದಿಂದ ಬಳಲುತ್ತಿದ್ದು, ಬೆಲೆ ಏರಿಕೆಯಿಂದ ತತ್ತರಿಸಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಯಶಸ್ವಿಯಾಗಿ ಜನರನ್ನು ಎಚ್ಚರಿಸಿ, ಜನರ ಪರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದೆ. 2014ರಲ್ಲಿ ಮೋದಿ ಸರ್ಕಾರಕ್ಕೆ ಜನ ಮತ ಹಾಕುವಾಗ ಆಶಾವಾದ ಇತ್ತು. ಅಚ್ಛೇದಿನ ಕೋಡುತ್ತೇನೆ, ಬೆಲೆ ಇಳಿಸುತ್ತೇನೆ, ಸ್ವರ್ಗ ಧರಗಿಳಿಸುತ್ತೇವೆ ಎಂದಿದ್ದರು. 8 ವರ್ಷ ಆದರೂ ಒಂದು ಭರವಸೆ ಈಡೇರಿಸಿಲ್ಲ. ನೋಟು ರದ್ದತಿಯಿಂದ ಬೆಲೆ ಏರಿಕೆವರೆಗೂ ಜನರ ಜೀವ ಹಿಂಡುತ್ತಿದ್ದಾರೆ. ನಾವು ಕೂಡ ಜನರ ಮನೆ ಮನೆಗೆ ಹೋಗಿ ಜನರನ್ನು ಎಚ್ಚರಿಸಿ, ಅಱಿವು ಮೂಸಬೇಕು. ನಿಮ್ಮ ಮನೆಗೆ ಬಿಜೆಪಿ ನಾಯಕರು ಬಂದಾಗ ಅವರ ಭರವಸೆ ಏನಾಯ್ತು ಎಂದು ಕೇಳಬೇಕು. ಭೇಟಿ ಬಚಾವೋ ಭೇಟಿ ಪಟಾವೋ ಎಂಬ ಹೇಳಿಕೆಯನ್ನು ಬಿಜೆಪಿ ಸುಳ್ಳು ಮಾಡಿದೆ. ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕೆಟ್ಟ ದಿನಗಳನ್ನು ಕೊಟ್ಟಿದೆ. ಅಂದು 10 ರೂ. ಬೆಲೆ ಹೆಚ್ಚಾದರೆ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದರು. ಜನರಿಗೆ ಬೊಮ್ಮಾಯಿ ಹಾಗೂ ಮೋದಿ ಸರ್ಕಾರ ಬೇಡವಾಗಿದೆ. ಜನರಿಗೆ ಕಾಂಗ್ರೆಸ್ ಸರ್ಕಾರ ಬೇಕಾಗಿದೆ. ಕೊಟ್ಟ ಭರವಸೆ ಈಡೇರಿಸಿ ಅನ್ನ ಭಾಗ್ಯ ಯೋಜನೆ ಕೊಟ್ಟಿದ್ದಾರೆ. ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಮುಂದಿನ ಒಂದು ವರ್ಷ ಸಂಘರ್ಷದ ವರ್ಷ ಮಹಿಳಾ ಕಾಂಗ್ರೆಸ್ ನಾಯಕಿಯರು, ಎಲ್ಲ ನಾಯಕರ ಮಾರ್ಗದರ್ಶನ ತೆಗೆದುಕೊಂಡು ಈ ಎಲ್ಲ ವಿಚಾರವನ್ನು ಮನೆ ಮನೆಗೆ ತಲುಪಿಸುತ್ತೇವೆ ಎಂದು ಭರವಸೆ ನೀಡುತ್ತೇವೆ.
ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ; 2014ರಲ್ಲಿ ಮೋದಿ ಅರ ಸರ್ಕಾರ ಬಂದಾಗ ಅವರ ಟ್ಯಾಗ್ ಲೈನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಬಹುತ್ ಹೋಗಯಿ ಮೆಹಂಗಾಯಿ ಮಾರ್ ಇಸ್ ಬಾರ್ ಮೋದಿ ಸರ್ಕಾರ ಎಂದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಎಲ್ಲಾದರೂ ಮೋದಿ ಅಥವಾ ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಧ್ಯಮಗಳು ಪ್ರಚಾರ ಮಾಡಿದಂತೆ ಈಗ ಮಾಡುತ್ತಿದ್ದಾರಾ? ಯುವ ಕಾಂಗ್ರೆಸ್ ನಿಂದ 9ರಂದು ಯುವ ಆಕ್ರೋಶ ಎಂಬ ಕಾರ್ಯಕ್ರಮದಡಿ ಎಲ್ಲ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. 10ರಂದು ಬ್ಲಾಕ್ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಬಿಜೆಪಿ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಹಿಜಾಬ್, ಹಲಾಲ್ ವಿಚಾರಗಳು ತರುತ್ತಿದ್ದಾರೆ. ಇದು ಬಿಜೆಪಿ ವಿಷಯಾಂತರ ರಾಜಕೀಯ. ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ನಾವು ಮೊದಲು ಭಾರತೀಯರು, ನಂತರ ಕನ್ನಡಿಗರು ನಮ್ಮನ್ನು ಯಾರಿಂದಲೂ ಹೊಡೆಯಲು ಸಾಧ್ಯವಿಲ್ಲ. ಕನ್ನಡಿಗರು ನಾವೆಲ್ಲರೂ ಒಂದು ಎಂದು ಭಾವಿಸಿ ಬೆಲೆ ಏರಿಕೆ ವಿರುದ್ಧ ಬೆಲೆ ಏರಿಕೆ ವಿರುದ್ಧ ಹೋರಾಟ ಮುಂದುವರಿಸಬೇಕು. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಅದಕ್ಕಾಗಿ ಯುವ ಕಾಂಗ್ರೆಸ್ ಶ್ರಮಿಸಲಿದೆ ಎಂದು ಭರವಸೆ ನೀಡುತ್ತೇನೆ.