ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ ಗಳ ಪಾತ್ರ

ನವದೆಹಲಿ : ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ *ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ ಗಳ ಪಾತ್ರ * ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾನ್ಯ ಗೌರವಾನ್ವಿತ ಉಪರಾಷ್ಟ್ರಪತಿಗಳಾದ *ಶ್ರೀ ವೆಂಕಯ್ಯನಾಯ್ಡು ರವರೊಂದಿಗೆ * ಮಾನ್ಯ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ *ಶ್ರೀ ಕೆ ಎಸ್ ಈಶ್ವರಪ್ಪರವರು * ಉಪಸ್ಥಿತರಿದ್ದರು. ಸಭೆಯ ಉದ್ಘಾಟಿಸಿದ ನಂತರ ಮಾನ್ಯ ಸಚಿವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ವಿವರ ಈ ಕೆಳಗಿನಂತಿದೆ.

ಭಾರತಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ದಿನಾಂಕ: 11.04.2022ರಿಂದ 17.04.2022ರವರೆಗೆ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು 75ನೇ ಸ್ವಾತಂತ್ರ್ಯಾಚರಣೆ ಸಂಬಂಧ ನವದೆಹಲಿಯಲ್ಲಿ ಆಯೋಜಿಸುತ್ತಿದೆ. ವಿವಿಧರಾಜ್ಯಗಳ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಾಲಯಗಳಿಗೆ ಸಂಬಂಧಿಸಿದಂತೆ ಈ ಕಾರ್ಯಾಗಾರದಲ್ಲಿ ಆಯಾ ರಾಜ್ಯಗಳು ಸಾಧಿಸಿರುವ ಪ್ರಗತಿಯನ್ನು ಹಂಚಿಕೊಳ್ಳುವ ಉದ್ದೇಶ ಹೊಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ 17 ಗುರಿಗಳನ್ನು ಅಂತಿಮಗೊಳಿಸಿದೆ. ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಸದರಿ ಗುರಿಗಳನ್ನು ಸ್ಥಳೀಕರಿಸಿ 9 ಗುರಿಗಳಿಗೆ ಪ್ರಾಮುಖ್ಯತೆ ನೀಡಿ ಇದಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಹಂತದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಿರುವುದು ಸ್ವಾಗತಾರ್ಹವಾಗಿದೆ. ಯಾವುದೇ ಹಳ್ಳಿ ಅಥವಾ ವ್ಯಕ್ತಿ ಅಭಿವೃದ್ಧಿ ಪಥದಿಂದ ಹಿಂದುಳಿಯಬಾರದೆಂಬುದು ಇದರ ಪ್ರಮುಖ ಉದ್ದೇಶವಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳನ್ನು ಈ ನಿಟ್ಟಿನಲ್ಲಿಕೈಗೊಂಡಿದೆ. 73ನೇ ಸಂವಿಧಾನತಿದ್ದುಪಡಿಯ 29 ವಲಯಗಳನ್ನು ಪಂಚಾಯತ ರಾಜ್ ಸಂಸ್ಥೆಗಳಿಗೆ ಹಸ್ತಾಂತರಿಸುವುದು ಇವುಗಳಲ್ಲಿ ಅನೇಕ ಚಟುವಟಿಕೆಗಳು ನೇರವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಇವುಗಳಲ್ಲಿ ಪ್ರಮುಖವಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯವು ಆರೋಗ್ಯಗ್ರಾಮ, ಮಕ್ಕಳಸ್ನೇಹಿ ಪಂಚಾಯತ್ ಮತ್ತು ಮಹಿಳಾ ಸ್ನೇಹಿ ಪಂಚಾಯತಿಗಳಿಗೆ ಒತ್ತುಕೊಟ್ಟಿದ್ದು ಗ್ರಾಮಪಂಚಾಯಿತಿಗಳು ಇವುಗಳಿಗೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ.


ಕರ್ನಾಟಕ ರಾಜ್ಯವು ಮಹಾತ್ಮ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮೀಣಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಉತ್ತಮಸಾಧನೆ ಮಾಡಿದೆ. ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧಕುಡಿಯುವ ನೀರಿನ ಸೌಲಭ್ಯಕಲ್ಪಿಸಿದ್ದು, ಮನೆ-ಮನೆಗೆನಳಿಗಳ ಮೂಲಕ ನೀರನ್ನು ಪೂರೈಸಲು ಕ್ರಮವಹಿಸುತ್ತಿದ್ದು ಭಾರತಸರ್ಕಾರದ ‘ಜಲಜೀವನ್ ಮಿಷನ್’ ಇದಕ್ಕೆಉತ್ತೇಜನೆ ನೀಡಿದೆ. ರಾಜ್ಯವು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿದ್ದು, ಘನ ಮತ್ತು ದ್ರವತ್ಯಾಜ್ಯ ಘಟಕಗಳನ್ನು ಪಂಚಾಯತಿಗಳ ಹಂತದಲ್ಲಿ ಸ್ಥಾಪಿಸಲು ಹೆಚ್ಚಿನ ಕ್ರಮವಹಿಸುತ್ತಿದೆ. ನೈಸರ್ಗಿಕ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ 48 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, 608 ಕಲ್ಯಾಣಿ ಮತ್ತು ಪುಷ್ಕರಣಿಗಳಿಗೆ ಪುನರ್ಜೀವ ನೀಡಿದೆ. ಅಂದಾಜು 300 ಹೊಸಕೆರೆಗಳನ್ನು ನಿರ್ಮಿಸಲು ಸಹ ಕ್ರಮವಹಿಸಿದ್ದು ಇವುಗಳಿಂದ ಅಂತರ್ಜಲ ಮಟ್ಟವು ಮುಂದಿನದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುವುದನ್ನು ಅಭಿಪ್ರಾಯಿಸಿದೆ. ಕರ್ನಾಟಕದ ಗ್ರಾಮಪಂಚಾಯಿತಿಗಳು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ತಡೆಗಟ್ಟಲು ಹಾಗೂ ಪಟ್ಟಣ ಪ್ರದೇಶಗಳಿಂದ ಗ್ರಾಮಗಳಿಗೆ ವಲಸೆ ಬಂದವರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಕಳೆದ 2 ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿವೆ. ಇದರಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರಚಿಸಿದ ಗ್ರಾಮಪಂಚಾಯಿತಿ ಟಾಸ್ಕ ಫೊರ್ಸ್ ಮಹತ್ವದ್ದಾಗಿದೆ. ರಾಜ್ಯದ ಗ್ರಾಮಪಂಚಾಯಿತಿಗಳು ಶಿಕ್ಷಣ ಕ್ಷೇತ್ರದಲ್ಲಿಯೂ ಸಹ ಹೆಚ್ಚಿನ ಸಾಧನೆ ಮಾಡುತ್ತಿವೆ. ಪ್ರಮುಖವಾಗಿ ಗ್ರಾಮಪಂಚಾಯಿತಿ ಹಂತದ ಗ್ರಂಥಾಲಯಗಳನ್ನು ಡಿಜಿಟಲಿಕರಣ ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಪಡೆಯಲು ಸಹಕರಿಸುತ್ತಿವೆ. ಕರ್ನಾಟಕರಾಜ್ಯದಲ್ಲಿಸುಮಾರು 90 ಸಾವಿರ ಗ್ರಾಮಪಂಚಾಯಿತಿ ಸದಸ್ಯರುಗಳು ನೂತನವಾಗಿ ಆಯ್ಕೆಯಾಗಿದ್ದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡಿದ್ದು ಅಭಿನಂದನಾರ್ಹವಾಗಿದೆ. ಕರ್ನಾಟಕ ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಮತ್ತು ಅವುಗಳ ಸಾಧನೆ ಮಾಡುವಲ್ಲಿ ಭಾರತ ಸರ್ಕಾರವು ಪಂಚಾಯರಾಜ್ ಮಂತ್ರಾಲಯದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದೆಂದು ತಿಳಿಸಲು ಹರ್ಷಿಸುತ್ತೇನೆ.

Leave a Comment

Your email address will not be published. Required fields are marked *

Translate »
Scroll to Top