ದೇವನಹಳ್ಳಿ: ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ 5 ಹೋಬಳಿಗಳಿಗೂ ತಲಾ 60 ಲಕ್ಷ ರೂಗಳ ಕಾಮಗಾರಿಗೆ ಇಂದು ಕುಂದಾಣ ಹೋಬಳಿಯ ಗ್ರಾಮಗಳಿಗೆ ಸಿ.ಸಿ.ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ್ದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ದಾಸರಹಳ್ಳಿ, ಮಾಯಸಂದ್ರ, ಮನುಗೊಂಡನಹಳ್ಳಿ, ಶಾನಪ್ಪನಹಳ್ಳಿ, ದೊಡ್ಡಗೊಳಹಳ್ಳಿ , ಸೀಕಾಯನಹಳ್ಳಿ, ಸೋಲೂರು, ಬ್ಯಾಡ್ರಹಳ್ಳಿ, ಬಿದಲೂರು, ಅಣಿಘಟ್ಟ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ. ಇದರ ಜೊತೆಯಲ್ಲಿ 5 ಕೋಟಿ ಹಣ ಮಂಜೂರಾಗಿದ್ದು ಎಲ್ಲವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಿ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳು ಗುಂಡಿ ಮುಕ್ತ ಮಾಡುವುದಾಗಿ ತಿಳಿಸಿ ಇವೆಲ್ಲವು ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಬೇಕಿತ್ತು ನಂತರ ಬಂದ ಸರ್ಕಾರ ಹಣ ತಡೆಹಿಡಿದಿದ್ದರಿಂದ ತಡವಾಗಿದೆ. ಇನ್ನು ಮುಂದೆ ಕಾಮಗಾರಿಗಳು ನಡೆಯುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಜನಪ್ರತಿನಿಧಿಗಳು ಹಾಜರಿದ್ದರು.
