ಪವರ್ ಸ್ಟಾರ್ ಯುವಕರ ಪಾಲಿನ ಕಣ್ಮಣಿ: ಬಿ.ಶ್ರೀರಾಮುಲು

ಬಳ್ಳಾರಿ : ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಸ್ಯಾಂಡಲ್‌ವುಡ್‌ನ ಹೈವೋಲ್ಟೇಜ್ ಕರೆಂಟ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದವರು ಪುನೀತ್ ರಾಜ್‌ಕುಮಾರ್ ಎಂದು ಬಳ್ಳಾರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಹೇಳಿದರು.

 

ಬಳ್ಳಾರಿಯ ಅವಂಭಾವಿಯಲ್ಲಿರುವ ಅವರ ನಿವಾಸದಲ್ಲಿ ಇಂದು ಅವರ 49 ನೇಯ ಜನ್ಮದಿನವನ್ನು ಕೇಕ್ ಕತ್ತರಿಸಿ ಪಾರಿವಾಳ ಹಾರಿ ಬಿಡುವ ಮೂಲಕ ಆಚರಿಸಿ ಮಾತನಾಡಿದರು. ಪುನೀತ್ ಹುಟ್ಟಿದ ಸಂದರ್ಭದ ಕ್ಷಣ ಕೂಡ ಪವರ್‌ಫುಲ್ ಆಗಿತ್ತು. ಪ್ರೇಮದ ಕಾಣಿಕೆ’ ಈ ಚಿತ್ರದಲ್ಲಿ ಅಪ್ಪು ನಟಿಸಿದ್ದರು. ಆಗ ಅವರ ವಯಸ್ಸು 6 ತಿಂಗಳು ಅಷ್ಟೇ. ಅಲ್ಲಿಂದ ಅಪ್ಪು ಚಿತ್ರಯಾತ್ರೆ ಶುರುವಾಯಿತು. ಹಲವಾರು ಚಿತ್ರದಲ್ಲಿ ಅಭಿನಯಿಸಿದ ಅವರು ಯುವಕರ ಪಾಲಿನ ಕಣ್ಮಣಿಯಾದರು ಎಂದರು.

ಭಕ್ತ ಪ್ರಹ್ಲಾದ ಚಿತ್ರದಲ್ಲಿ ಎಲ್ಲಿರುವನು ಹರಿ? ಎಂದು ಹಿರಣ್ಯ ಕಶ್ಯಪು ಪಾತ್ರಧಾರಿ ರಾಜ್ ಕುಮಾರ್ ಜೊತೆಗೆ ಮನೋಜ್ಞವಾಗಿ ಅಭಿನಯಿಸಿದ್ದರು. ಅದು ಈಗಲೂ ನನಗೆ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ. ಪುನೀತ್ ಅವರ ಜೊತೆಗೆ ಇದ್ರೆ  ದೇವತಾ ಮನುಷ್ಯನ ಜತೆ ಇದ್ದಂತೆ ಭಾಸವಾಗುತ್ತಿತ್ತು. ಅವರ ಶಕ್ತಿಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅವರ ಚೈತನ್ಯ, ಸ್ಫೂರ್ತಿ ಈಗಲೂ ನನ್ನ ಮನಸ್ಸಿನಲ್ಲಿದೆ ಎಂದರು.

 

ಪುನೀತ್ ಅವರು  ಅಭಿಮಾನಿಗಳನ್ನು ತಮ್ಮ ನೃತ್ಯದ ಮೂಲಕವೂ ಗಳಿಸಿಕೊಂಡಿದ್ದರು. ಎಂತಹ ನೃತ್ಯಪಟುಗಳು ಪುನೀತ್ ಅವರ ಜತೆ ನೃತ್ಯ ಮಾಡಿದರೂ ಅಪ್ಪು ಅವರ ನೃತ್ಯ ನೋಡುಗರನ್ನು ಸೆಳೆಯುತ್ತಿತ್ತು. ಪುನೀತ್ ಅವರ ಡ್ಯಾನ್ಸ್‌ ಅನ್ನು ಇಷ್ಟಪಡದ ಚಿಕ್ಕ ಮಕ್ಕಳು ಇಲ್ಲವೇ ಇಲ್ಲ. ಅವರ ನೃತ್ಯ ಅಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು ಎಂದು ಕೊಂಡಾಡಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಕೊಟ್ಟರು ಶಕ್ತಿ ಕೇಂದ್ರದ ಅಧ್ಯಕ್ಷ ಭರಮಗೌಡ ಪಾಟೀಲ್, ಬಳ್ಳಾರಿ ಮಹಿಳಾ ನಗರ ಘಟಕದ ಅಧ್ಯಕ್ಷೆ ನಾಗವೇಣಿ ಟಿ.ಜಿ. ಸೇರಿದಂತೆ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಹಾಗೂ ಇತರರು ಇದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top