ಗಂಗಾವತಿ,ಮಾ,16 : ನಗರದ ಹೊರವಲಯದ ವಿದ್ಯಾನಗರದ ಹೊಲದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಗಂಗಾವತಿ ನಗರದ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಲಾಗಿತ್ತು ಆರು ಜನರನ್ನು ವಶಕ್ಕೆ ಪಡೆದಿದ್ದು ಗಂಗಾವತಿ ನಗರದ ಜಿಲಾನ್ ಎನ್ನುವ ವ್ಯಕ್ತಿ ಇಸ್ಪೀಟ್ ಆಡಿಸುತ್ತಿದ್ದಾನೆ ಎಂದು ಮಾಹಿತಿ ತಿಳಿದ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದು ಮತ್ತು ಈತನ ಜೊತೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಂತಹ ಈರಪ್ಪ ಕಂಪ್ಲಿ ಸೋಮನಾಥ್ ಹನುಮಂತಪ್ಪ ಹುಸೇನ್ ಮೈಬೂಬ್ ನಗರ್ ಬಂಧಿಸಲಾಗಿದೆ ಎಂದು ಮಾಹಿತಿ ದೊರಕಿದ್ದು ಪೋಲಿಸರ ಕಾರ್ಯ ಶ್ಲಾಘನೀಯ ವಾಗಿದೆ.
ಇತ್ತೀಚೆಗಷ್ಟೇ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಕೊಪ್ಪಳ ಜಿಲ್ಲೆಯ ಹಲವು ಭಾಗಗಳಲ್ಲಿ ಇಸ್ಪೀಟ್, ಮಟಕಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪ ಮಾಡಿರುವುದನ್ನು ಗಮನಿಸಬಹುದು, ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಇವುಗಳಿಗೆ ಮಟ್ಟಹಾಕಲು ಮುಂದಾಗಿದ್ದರು ಸಹ ಗ್ರಾಮಾಂತರ ಪ್ರದೇಶಗಳಲ್ಲಿ ಗದ್ದೆ, ತೋಟ, ಹೊಲ, ಸೇರಿದಂತೆ ಮುಳ್ಳಿನ ತಗ್ಗುಪ್ರದೇಶಗಳಲ್ಲಿ ಅಡುಗೆ ಇಂತಹ ಜೂಜು ಧಂದೇ ಗಳನ್ನು ನಡೆಸಲಾಗುತ್ತಿತ್ತು ಖಚಿತ ಮಾಹಿತಿ ಪಡೆದು ದಾಳಿ ನಡೆಸುವ ಸಂದರ್ಭದಲ್ಲಿ ಜೂಜುಕೋರರು ತಪ್ಪಿಸಿಕೊಂಡು ಹೋದ ಘಟನೆಗಳು ಸಹ ಜರುಗಿವೆ ಒಟ್ಟಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ. ಕಟ್ಟುನಿಟ್ಟಿನ ಆದೇಶದ ಅನ್ವಯ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಡಿವೈಎಸ್ಪಿ ಉಜ್ಜನ್ ಕೊಪ್ಪ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಬಹುದು.