ರಾಜ್ಯ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ

ದೇವನಹಳ್ಳಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ವಿನಃ ಬಡವರ ಪರವಾಗಿ ಮಾಡುತ್ತಿಲ್ಲಾ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ ಸಾಮಾನ್ಯ ಜನರ ಕೈಗೆಟುಕದ ಕಬ್ಬಿಣದ ಕಡಲೆಯಾಗಿದೆ ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಗ್ಯಾಸ್ ಇನ್ನಿತರೆ ವಸ್ತುಗಳ ಬೆಲೆ ದುಬಾರಿಯಾಗಿ ಮಧ್ಯಮ ಮತ್ತು ಸಾಮಾನ್ಯ ಜನ ಬದುಕಲು ಪರದಾಡುವಂತಾಗಿದೆ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಹೊಸಬಸ್ ನಿಲ್ದಾಣದ ಹಿಂಭಾಗದ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್ ರವರ ಕಚೇರಿಯಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಿ.ಜಗನ್ನಾಥ್ ರವರನ್ನು ಅಭಿನಂದಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ದಂಧೆಯಲ್ಲಿ ಮುಳುಗಿ ರಾಜ್ಯದ ಅಭಿವೃದ್ಧಿ ಮರೆತು ಹಿಂದೂ ಯುವಕನ ಆತ್ಮಹತ್ಯೆಗೆ ಕಾರಣವಾಗಿರುವುದೇ ಇವರ ಸಾಧನೆಯಾಗಿದೆ, ಕೋಮುಗಲಭೆ ಸೃಷ್ಟಿ ಮಾಡಿ ಜಾತಿ ಜಾತಿಗಳ ಧರ್ಮ ಧರ್ಮಗಳ ಬಗ್ಗೆ ವಿಷ ಬೀಜ ಬಿತ್ತಿ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಸಾಧನೆ ಹೇಳಲು ಏನೂ ಇಲ್ಲವಾದ್ದರಿಂದ ಹಿಜಬ್, ಹಲಾಲ್ ಕಟ್, ಇಂತಹ ವಿಚಾರಗಳ ಬಗ್ಗೆ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಇವೆಲ್ಲವನ್ನು ರಾಜ್ಯದ ಜನ ಗಮನಿಸುತ್ತಿದ್ದು ಮುಂದೆ ಸೋಲಿನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು.

ದೇವನಹಳ್ಳಿ ಬ್ಲಾಕ್ ಉಪಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ಗುತ್ತಿಗೆದಾರರ ಬಳಿ 40./. ಹಣ ಲಪಟಾಯಿಸುವ ಹಗಲು ದರೋಡೆ ಮಾಡುವ ಪ್ರವೃತ್ತಿ ಬಿಜೆಪಿ ಪಕ್ಷದ ಮುಖಂಡರದ್ದಾಗಿದೆ.ಇದಕ್ಕೆ ಸಾಕ್ಷಿಯಂತೆ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ ಕೇಳಿದ ಕಮೀಷನ್ ದಂಧೆ ಕಾರಣವಾಗಿದೆ ದೇಶಾದ್ಯಂತ ಇದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಪಕ್ಷದ ವರಿಷ್ಟರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತಿದ್ದು ಕೂಡಲೇ ಈಶ್ವರಪ್ಪರವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಮುಖಂಡರಾದ ಮುನಿರಾಜು, ಶೆಟ್ಟಿಗೆರೆ ರಾಜಣ್ಣ, ಇನ್ನು ಹಲವು ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top