ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಬೆಂಗಳೂರಿನಲ್ಲಿನ ಅಭಿಮಾನಿಗಳೊಂದಿಗೆ ಸ್ಟಾರ್ ಟಾಕ್ ಕಾರ್ಯಕ್ರಮ ಆಯೋಜಿಸಿದ ಪರಿಮ್ಯಾಚ್ ಸ್ಪೋರ್ಟ್ಸ್

ಬೆಂಗಳೂರು : ಜಗತ್ತಿನ ಅತ್ಯುನ್ನತ ಅಥ್ಲೆಟ್ ಗಳಿಂದ ಸ್ಫೂರ್ತಿ ಪಡೆದ ಕ್ರೀಡಾ ಉಡುಪುಗಳ ಬ್ರಾಂಡ್ – ಪರಿಮ್ಯಾಚ್ ಸ್ಪೋರ್ಟ್ಸ್ ಬೆಂಗಳೂರಿನ ಮಂತ್ರಿ ಸ್ಟೋರ್ ಮಾಲ್‌ನಲ್ಲಿ ಭಾನುವಾರ ಖ್ಯಾತ ಕ್ರಿಕೆಟಿಗೆ ದಿನೇಶ್ ಕಾರ್ತಿಕ ಅವರೊಂದಿಗೆ ಅಭಿಮಾನಿಗಳ ಪ್ರತ್ಯೇಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪರಿಮ್ಯಾಚ್ ಸ್ಪೋರ್ಟ್ಸ್ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿರುವ ದಿನೇಶ್ ಕಾರ್ತಿಕ್ ಅವರು ಅಭಿಮಾನಿಗಳೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡರಲ್ಲದೇ ಪ್ರಶೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಗೂ ಸಂವಾದ ನಡೆಸಿದರು.

 

ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ದಿನೇಶ್ ಕಾರ್ತಿಕ್ ಅವರ ಅಸಾಧಾರಣ ಕೌಶಲ್ಯಗಳಿಗೆ ಖ್ಯಾತಿ ಹೊಂದಿದ್ದಾರಲ್ಲದೇ ಅದರಲ್ಲೂ ಮುಖ್ಯವಾಗಿ ಪಂದ್ಯದ ಅಂತಿಮ ಓವರ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಹೆಸರಾಗಿದ್ದಾರೆ. ಭಾರರತದ ಅಂತಾರಾಷ್ಟ್ರೀಯ ಟಿ29 ತಂಡದಲ್ಲಿ ಕಾರ್ತಿಕ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಅವರ ಅಸಾಧಾರಣ ವೇಗ ಮತ್ತು ಸ್ವಿಂಗ್‌ಗಳು ಜಗತ್ತಿನ ಕೆಲವು ಅಗ್ರ ಬ್ಯಾಟ್ಸ್‌ಮನ್‌ಗಳಿಗೆ ಸತತವಾಗಿ ಸವಾಲೆಸೆಯುತ್ತಿವೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ದಿನೇಶ್ ಕಾರ್ತಿಕ ಅವರು ಮುಂಬರಲಿರುವ ಕ್ರಿಕೆಟ್ ಋತುವಿಗೆ ತಮ್ಮ ವೈಯಕ್ತಿಕ ಗುರಿಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಅಲ್ಲದೇ ಪ್ರದರ್ಶನದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಅಶ್ಲೀಟ್‌ಗಳು ಬಳಸಿಕೊಳ್ಳುವ ಕಾರ್ಯತಂತ್ರಗಳನ್ನು ಕುರಿತು ತಿಳಿಸಿದರು.

 

ಚರ್ಚೆಯ ಗಮನಾರ್ಹವಾದ ಮುಖ್ಯಾಂಶ ಎಂದರೆ ಅದು ಪರಿಮ್ಯಾಚ್ ಸ್ಪೋರ್ಟ್ಸ್ನೊಂದಿಗೆ ಅವರ ಪಾಲುದಾರಿಕೆ ಕುರಿತ ಚರ್ಚೆಯಾಗಿತ್ತು. ಇದರಲ್ಲಿ ಕಾರ್ತಿಕ್ ಅವರ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಬ್ರಾಂಡ್‌ನ ಅಚಲ ಬೆಂಬಲ ಕುರಿತು ಅವರು ಒತ್ತಿ ಹೇಳಿದರು. ತಮ್ಮ ಪ್ರತ್ಯೇಕವಾದ ಸ್ಪೋರ್ಟ್ಸ್ ವೇರ್ ಶ್ರೇಣಿಯಲ್ಲಿನ ಪೊಲೊ ಶರ್ಟ್ ಅನ್ನು ಕಾರ್ತಿಕ ಹೆಮ್ಮೆಯಿಂದ ಧರಿಸಿದ್ದರು. ಈ ಶ್ರೇಣಿ ಪರಿಮ್ಯಾಚ್ ಸ್ಪೋರ್ಟ್ಸ್ ನೊಂದಿಗೆ ಜಂಟಿ ಯೋಜನೆಯಾಗಿದೆ. ಕಾರ್ತಿಕ್ ಅವರಿಗೆ ಕ್ರೀಡೆ ಕುರಿತು ಇರುವ ಅಚಲ ಭಾವೋತ್ಸಾಹ ಮತ್ತು ಅವರ ಅನನ್ಯ ಶೈಲಿಯನ್ನು ಇದು ಬಿಂಬಿಸುತ್ತದೆ.

ಡೇರ್ ಟು ಬಿ ಎ ಚಾಂಪಿಯನ್” ಎಂಬ ಹೊಸ ಬ್ರಾಂಡ್ ಅಭಿಯಾನಕ್ಕೆ ಸಮರ್ಪಿತವಾದ ಇತ್ತೀಚಿನ ಪರಿಮ್ಯಾಚ್ ಕ್ರೀಡಾ ಬ್ರಾಂಡ್ ವಿಡಿಯೋಗಾಗಿ ಚಿತ್ರೀಕರಣದ ಸಂದರ್ಭದಲ್ಲಿನ ತಮ್ಮ ಅನುಭವವನ್ನು ಕೂಡ ಅವರು ಹಂಚಿಕೊಂಡರು.

ಪರಿಮ್ಯಾಚ್ ಸ್ಪೋರ್ಟ್ಸ್ ಕುರಿತು : ಜಗತ್ತಿನ ಆಗ್ರಮಾನ್ಯ ಅಶ್ಲೀಟ್‌ಗಳಿಂದ ಸ್ಪೂರ್ತಿ ಪಡೆದ ಅತ್ಯುನ್ನತ ಗುಣಮಟ್ಟದ ಕ್ರೀಡಾ ಉಡುಪುಗಳ ಬ್ರಾಂಡ್ ಪರಿಮ್ಯಾಚ್ ಸ್ಪೋರ್ಟ್ಸ್ ಆಗಿದೆ. ಪ್ರತಿ ಧೈರ್ಯಶಾಲಿ ಆಥೀಟ್‌ಗಳು ತಮ್ಮ ಗೆಲುವಿನ ಮಾರ್ಗದಲ್ಲಿ ಸಜ್ಜಾಗಿ ಇರುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಮೂಲವಾಗಿ ಕ್ರೀಡೆ ಕುರಿತ ಭಾವೋತ್ಸಾಹದೊಂದಿಗೆ ಪರಿಮ್ಯಾಚ್ ಸ್ಪೋರ್ಟ್ಸ್ ಪ್ರೊ-ಆನ್-ಫೀಲ್ಡ್ ಕಿಟ್‌ಗಳನ್ನು ಫುಟ್ಬಾಲ್ ಮತ್ತು ಕ್ರಿಕೆಟ್ ತಂಡಗಳಿಗಾಗಿ ಸೃಷ್ಟಿಸುತ್ತಿದೆ. ಜೊತೆಗೆ ಫ್ಯಾನ್‌ಗಳಿಗೆ ಪ್ರತಿದಿನದ ವರ್ಕ್‌ ಔಟ್ ಉಡುಪುಗಳ ಸಮಗ್ರ ಶೈಲಿಯನ್ನು ಸಾದರಪಡಿಸುತ್ತಿದೆ. ಇದರ ಪ್ರತ್ಯೇಕ ವಿನ್ಯಾಸದೊಂದಿಗೆ ಈ ಉಡುಪುಗಳು ಗುಂಪಿನಲ್ಲಿ ಪ್ರತ್ಯೇಕವಾದ ಸ್ಥಾನ ಕಂಡುಕೊಳ್ಳುತ್ತವೆ. ಜಗತ್ತಿನ ಅಗ್ರ ಅಥ್ಲೆಟ್‌ಗಳು ಮತ್ತು ಅವರು ಕ್ರೀಡಾಂಗಣದಲ್ಲಿ ಗಳಿಸಿದ ವಿಜಯಗಳಿಂದ ಈ ಶ್ರೇಣಿ ಸ್ಫೂರ್ತಿ ಪಡೆದಿದೆ. ಕ್ರೀಡೆ ಕುರಿತಂತೆ ಭಾರತದ ಪ್ರೀತಿಯನ್ನು ವಿಸ್ತರಿಸುವ ಮತ್ತು ಅದನ್ನು ಸಂಪೂರ್ಣ ನೂತನ ಮಟ್ಟಕ್ಕೆ ತರುವ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವ ಮಾರ್ಗದಲ್ಲಿ ಪರಿಮ್ಯಾಚ್ ಸ್ಪೋರ್ಟ್ಸ್ ಸಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪೆಪ್ಪರ್ ಇಂಟರಾಕ್ಟಿವ್ ಕಮ್ಯುನಿಕೇಷನ್ಸ್,

karishma@pepperinteractive.in। +91 98333 28499

 

– gl janaki@pepperinteractive.in +91 97414 10688

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top