ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯಂತಹ ನಾಯಕಬೇಕು: ಪಾಕಿಸ್ತಾನಿ ಉದ್ಯಮಿ

ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಹಿಂದೆ ಪಾಕಿಸ್ತಾನದ ಸಂಸತ್ನಲ್ಲಿ ಹಾಡಿಹೊಗಳಲಾಗಿತ್ತು. ಇದೀಗ ಮೋದಿ ಅವರನ್ನು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಬಲ ನಾಯಕ ಹಾಗೂ ಮೂರನೇ ಅವಧಿಗೆ ದೇಶದ ಪ್ರಧಾನಿಯಲಾಗಿದ್ದಾರೆ ಎಂದು ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಸಾಜಿದ್ ತರಾರ್ ಹೇಳಿದ್ದಾರೆ. ಬಾಲ್ಟಿಮೋರ್ ಮೂಲದ ಪಾಕಿಸ್ತಾನಿ ಅಮೆರಿಕನ್ ಉದ್ಯಮಿ ಸಾಜಿದ್ ತರಾರ್ ಧಾನಿ ಮೋದಿ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಒಳ್ಳೆಯದು ಪಾಕಿಸ್ತಾನಕ್ಕೂ ಅವರಂತಹ ನಾಯಕ ಸಿಗಲಿ ಎಂದು ಹೇಳಿದ್ದಾರೆ.

ಮೋದಿ ಅವರು ಗಮನರ‍್ಹ ನಾಯಕ. ಅವರು ಸಹಜ ನಾಯಕ. ಪಾಕಿಸ್ತಾನಕ್ಕೆ ಸಂಕಷ್ಟ ಬಂದಾಗ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಎಲ್ಲ ರಾಜಕೀಯ ಗೊಂದಲಗಳನ್ನು ಬಿಟ್ಟು ನಮ್ಮ ದೇಶದ ಜತೆಗೆ ಮಾತುಕತೆ ಮತ್ತು ವ್ಯಾಪಾರವನ್ನು ಪ್ರಾರಂಭಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಸಾಜಿದ್ ತರಾರ್ ಹೇಳಿದ್ದಾರೆ.

ಭಾರತಕ್ಕೆ ಶಾಂತಿಯುತವಾದ ಪಾಕಿಸ್ತಾನದ ಅಗತ್ಯ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಮೂರನೇ ಭಾರಿ ಪ್ರಧಾನಿಯಾಗುವುದು ಖಂಡಿತ ಎಂದು ಹೇಳಿದ್ದಾರೆ. ಸಾಜಿದ್ ತರಾರ್ 1990ರ ದಶಕದಲ್ಲಿ USಗೆ ತೆರಳಿ, ಅಲ್ಲಿ ಪಾಕಿಸ್ತಾನಿ ಕಂಪನಿಯನ್ನು ಸ್ಥಾಪನೆ ಮಾಡಿ. ಹೆಸರು ಗಳಿಸಿದ್ದಾರೆ. ಭಾರತದಲ್ಲಿ 97 ಕೋಟಿ ಜನರು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿರುವುದು ಪವಾಡವಲ್ಲದೆ ಬೇರೇನೂ ಅಲ್ಲ, ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದರು.

ಅನೇಕ ಸಂರ‍್ಭದಲ್ಲಿ ಮೋದಿ ಅವರ ಜನಪ್ರಿಯತೆಯನ್ನು ನಾನು ಕಂಡಿದ್ದೇನೆ. ಭಾರತ ಈಗಾಗಲೇ ಅಭಿವೃದ್ಧಿಯಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ ಜಗತ್ತಿನ ಜನರಿಗೆ ಮಾದರಿಯಾಗಲಿದ್ದಾರೆ ಎಂದರು. ಪಾಕಿಸ್ತಾನದ ಬಗ್ಗೆ ಸಾಜಿದ್ ತರಾರ್ ಅವರಲ್ಲಿ ಕೇಳಿದಾಗ ಪಾಕಿಸ್ತಾನ ರ‍್ಥಿಕ ಬಿಕ್ಕಟ್ಟಿನಲ್ಲಿದೆ. ದರ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಾಮಾಜಿಕ ಅಶಾಂತಿ ಉಂಟಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಐಎಂಎಫ್ ತೆರಿಗೆಗಳನ್ನು ಹೆಚ್ಚಿಸಲು ಬಯಸಿದೆ. ವಿದ್ಯುತ್ ವೆಚ್ಚ ಹೆಚ್ಚಾಗಿದೆ. ನಮಗೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

 

ಪಿಒಕೆ ಜನರಿಗೆ ರ‍್ಥಿಕ ನೆರವು ನೀಡುವ ಪಾಕಿಸ್ತಾನದ ಪ್ರಧಾನಿಯ ನರ‍್ಧಾರವನ್ನು ಅವರು ಪ್ರಶ್ನಿಸಿದ್ದಾರೆ. ಹಣ ಎಲ್ಲಿಂದ ಬರಲಿದೆ? ಇದು Iಒಈ ನಿಂದ ಹೊಸ ನೆರವು ಪ್ಯಾಕೇಜ್ಗೆ ಬೇಡಿಕೆ ಇಟ್ಟಿದೆ. ದುರದೃಷ್ಟವಶಾತ್, ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಪಾಕಿಸ್ತಾನ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ರಫ್ತು ಹೆಚ್ಚಿಸುವುದು ಹೇಗೆ. ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ. ಪ್ರಸ್ತುತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅಶಾಂತಿ ಇದೆ ಮತ್ತು ರಾಜಕೀಯ ಅಸ್ಥಿರತೆ ಇದೆ. ಈ ಎಲ್ಲಾ ಸಮಸ್ಯೆಗಳಿಂದ ನಮ್ಮನ್ನು ಮುಕ್ತಿಗೊಳಿಸುವ ನಾಯಕತ್ವ ಬೇಕು ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top