ವಿಶೇಷಚೇತನರಿಗಾಗಿ ಎಪಿಎಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ

ಬೆಂಗಳೂರು: ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ದಿವ್ಯಾಂಗರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ನೂರಾರು ಮಂದಿ ಉದ್ಯೋಗ ಪಡೆದರು.

ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ಎಪಿಎಸ್ ಶಿಕ್ಷಣ ಕ್ಷೇತ್ರದಲ್ಲಿ 89 ವರ್ಷಗಳ ಸೇವೆ ಸಲ್ಲಿಸಿದೆ. ಪ್ರಸ್ತುತ ಸಿಟಿ ಕ್ಯಾಂಪಸ್ ಮತ್ತು ಸೋಮನಹಳ್ಳಿ, ಕ್ಯಾಂಪಸ್‌ನಲ್ಲ 11 ಸಂಸ್ಥೆಗಳನ್ನು ನಡೆಸುತ್ತಿದೆ. ನರ್ಮದಾ -ವಿಕಲಚೇತನರಿಗಾಗಿ ಸ್ವಾಪಿತಗೊಂಡಿರುವ ವಿಶೇಷ ಘಟಕವಾಗಿದೆ. ವಿಶೇಷಚೇತನರಿಗಾಗಿ ಉದ್ಯೋಗ ಮೇಳ, ನಮ್ಮ ಜೋಬಾಥನ್ -2024 ಆಯೋಜಿಸಲಾಗಿತ್ತು.

ಆಚಾರ್ಯ ಪಾಠ ಶಾಲಾ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಎಬಿಲಿಟೀಸ್,ಬೆಂಗಳೂರು, ಸಾಹಿರ ಜಾಬ್.ವಿನ್ ವಿನ್ಯಾಸ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ವಿಶೇಷಚೇತನಾರಿಗಾಗಿ ಉದ್ಯೋಗ ಮೇಳ ವನ್ನು ಎಪಿಎಸ್ ವಾಣಿಜ್ಯ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿತ್ತು.

 ಸಂಸ್ಥೆಯ ಅಧ್ಯಕ್ಷ ಸಿಎ. ಡಾ.ವಿಷ್ಟು ಭರತ್ ಆಲಂಪಲ್ಲಿ ಮಾತನಾಡಿ, ಐಪಿಎಸ್ ಶಿಕ್ಷಣ ಸಂಸ್ಥೆ ವಿಕಲಾಂಗ ವ್ಯಕ್ತಿಗಳಿಗೆ ದೊಡ್ಡ ವೇದಿಕೆಯನ್ನು ಒದಗಿಸಿದೆ, ಪ್ರಸ್ತುತ 64 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು ಮತ್ತು ವಿಶೇಷ ಸವಾಲು ಹೊಂದಿರುವ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರೆಲ್ಲರಿಗೆ ವಿಷೇಶ ಸೌಲಭ್ಯಗಳನ್ನು ಒದಗಿಸಲಾಗಿದೆ, ಮಧ್ಯಾಹ್ನದ ಊಟ, ಬೃಹತ್ ಬೈಲ್ ಗ್ರಂಥಾಲಯ, ಕಂಪ್ಯೂಟರ್ ತರಬೇತಿ,ಕನಿಷ್ಠ ಕಾಲೇಜು ಶುಲ್ಕ,ಮುಂತಾದ ಸೌಲಭ್ಯ ಕಲ್ಪಿಸಲಾಗಿದೆ.

ಹೀಗಾಗಿ ನಮ್ಮ ಸಂಸ್ಥೆಯು ವಿಕಲಾಂಗ ವ್ಯಕ್ತಿಗಳಿಗೆ ಶಿಕ್ಷಣವನ್ನು ಒದಗಿಸುವ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ ಎಂದರು.

 

ಪದವಿ,ಪದವಿ ಪೂರ್ವ,ಹತ್ತನೇ ತರಗತಿ ಪಾಸಾದ ವಿಶೇಷಚೇತನ ಅಭ್ಯರ್ಥಿಗಳು, ಕಿವುಡ, ಮೂಗ, ಅಂಧ್ರ,ದೈಹಿಕ ಅಂಗ ನ್ಯೂನತೆ ಇರುವ ವ್ಯಕ್ತಿಗಳು ಈ ಉದಮೇಳದಲ್ಲಿ ಭಾಗವಹಿಸಿದ್ದರು.

Facebook
Twitter
LinkedIn
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top