ಜಿಲ್ಲಾ ಗಾಣಿಗರ ಸಮುದಾಯ ಭವನ ಉದ್ಘಾಟನಾ ಸಮಾರಂಭ

ಕೊಪ್ಪಳ,ಫೆ,21 : ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಗಾಣಿಗರ ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳ ಹಮ್ಮಿಕೊಂಡ ಪ್ರಯುಕ್ತ , ದಿ:23-02-2022 ರ ಬುಧವಾರದಂದು ಪರಮ ಪೂಜ್ಯ ಡಾ.ಜಯಬಸವ ಕುಮಾರ ಸ್ವಾಮೀಜಿ ಗಾಣಿಗ ಗುರುಪೀಠ ವಿಜಯಪುರ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಜ್ಯೋತಿ ರಥಯಾತ್ರೆ ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಿಂದ ಲಿಂಗದಹಳ್ಳಿ ಗ್ರಾಮದವರಿಗೆ ಸಂಚರಿಸಲಿದೆ ಎಂದು ಕುಷ್ಟಗಿ ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು. ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಷ್ಟಗಿ ತಾಲೂಕು ಹಾಗೂ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನೆಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು ಜಿಲ್ಲಾ ಗಾಣಿಗ ಸಮುದಾಯ ಭವನವು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದು, ಸಮಾಜದ ಸರ್ವರ ಬಹುದಿನದ ಕನಸು ಮತ್ತು ಶ್ರಮದ ಪ್ರತಿಫಲವಾಗಿ ಅನಾವರಣಗೊಳ್ಳುತ್ತಿದೆ. ಭವನ ನಿರ್ಮಾಣವಾಗಲು ಶ್ರಮಿಸಿದ ಗಾಣಿಗ ಸಮಾಜದ ಎಲ್ಲಾ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು. ಆದರೆ ಮನ್ನೇರಾಳ, ಮಿಯಾಪುರ, ಮಲಕಾಪುರ, ಕಂದಕೂರ, ನಾಗರಾಳ ಗ್ರಾಮಗಳ ಮೂಲಕ ಲಿಂಗದಹಳ್ಳಿ ಗ್ರಾಮದವರಿಗೆ ಜ್ಯೋತಿ ರಥಯಾತ್ರೆ ಸಂಚರಿಸಲಿದೆ ಆದ್ದರಿಂದ ಸಮಾಜದ ಬಂಧುಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ತಾ. ಪಂ. ಸದಸ್ಯ ಮಹಾಂತೇಶ್ ಬದಾಮಿ ಮಾತನಾಡಿ, ಗಾಣಿಗ ಸಮುದಾಯವು ಶೈಕ್ಷಣಿಕ, ಆರ್ಥಿಕ ಸಮಾಜಿಕವಾಗಿ ತೀರಾ ಹಿಂದುಳಿದಿದೆ. ಸಂಘಟಿತರಾಗುವ ಮೂಲಕ ಪ್ರಗತಿ ಹೊಂದಲು ಜಿಲ್ಲಾಮಟ್ಟದಲ್ಲಿ ನೂತನವಾಗಿ ನಿರ್ಮಾಣವಾದ ಸಮುದಾಯಭವನ ಹಾಗೂ ಗಾಣದ ಕಣ್ಣಪ್ಪ ಪುತ್ಥಳಿ ಅನಾವರಣ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ದಿ:27-02-2022ರ ರವಿವಾರದಂದು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕುಷ್ಟಗಿ ತಾಲೂಕಿನ ಗಾಣಿಗ ಕುಲಬಾಂಧವರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪ್ರಭುರಾಜ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಭೀಮನಗೌಡ ಜಾಲಿಹಾಳ ಸೇರಿದಂತೆ ಹಿರಿಯ ಮುಖಂಡರಾದ ಶಂಕರಗೌಡ ಜಾಲಿಹಾಳ, ಸಂಗನಗೌಡ ನಿಲೋಗಲ್, ಡಾ. ಗುರುಸಿದ್ದಪ್ಪ ಶಿರೂರ, ಅಮರೇಗೌಡ ಪಾಟೀಲ್, ಬಸವರಾಜ ಕೋಳೂರ, ಶರಣಪ್ಪ ಗಂಜ್ಯಾಳ, ಕಿರಣ್ ಜ್ಯೋತಿ, ರಮೇಶ್ ತೂರಮರಿ ಮತ್ತು ರಮೇಶ್ ಮಲಕಾಪುರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top