ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಕಾಂಗ್ರೆಸ್ ಎ.ಸಿ.ಶ್ರೀ ನಿವಾಸ್

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ಸೋಲೂರು ಗ್ರಾಮದ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯಾಗಿ ಮರು ಆಯ್ಕೆಯಾದ ಎ.ಸಿ.ಶ್ರೀನಿವಾಸ್ ರವರಿಗೆ ಕುಂದಾಣ ಹೋಬಳಿಯ ಕುರುಬ ಸಮುದಾಯದ ವತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಎರಡು ಶಕ್ತಿಯಿದ್ದಂತೆ ಇವರ ಒಗ್ಗಟ್ಟಿನ ಮಂತ್ರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಬಲಗೊಳ್ಳುತ್ತಿರುವುದನ್ನು ವಿರೋದ ಪಕ್ಷ ಸಹಿಸದೇ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ರವರ ಶಕ್ತಿ ಮತ್ತು ಸಿದ್ದರಾಮಯ್ಯನವರ ಯುಕ್ತಿಯಿಂದ ರಾಜ್ಯದಲ್ಲಿ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲಾ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಭವಿಷ್ಯ ನುಡಿದರು.

ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಂಡಿತ ಅದಕ್ಕೆ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಶ್ರಮಿಸಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಬೇಕು. ಕಳೆದ 10 ವರ್ಷದಿಂದ ನಮ್ಮ ಕ್ಷೇತ್ರ ಯಾವುದೇ ಅಭಿವೃದ್ಧಿ ಕಾಣದೇ ಸೊರಗಿದೆ. ಯಾವುದೇ ಅಭಿಯಾಗಬೇಕಾದರೆ ರಾಜ್ಯದಲ್ಲಿ ಮತ್ತು ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದರೆ ಮಾತ್ರ ಎಂದು ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ತಿಳಿಸಿದರು.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಯಾಗಿ ಸಮರ್ಥವಾಗಿ ಆಡಳಿತ ಮಾಡಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದನ್ನು ಒಂದನ್ನೂ ಬಿಡದೇ ಪೂರೈಸಿದ್ದನ್ನು ಬಿಟ್ಟರೇ ಈಗಿನ ಸರ್ಕಾರ ಹೆಣಗಳ ಮೇಲೆ ಹಣ ಮಾಡಿ ಕಮೀಷನ್ ದಂಧೆಯಲ್ಲಿ ಹಾಗೂ ಹಲವು ಸ್ಕ್ಯಾಂಗಳಲ್ಲಿ ಭಾಗಿಯಾಗಿ ಅಭಿವೃದ್ಧಿ ಕಡೆ ಗಮನ ಹರಿಸದೇ ಹಣ ಮಾಡುತ್ತಿದ್ದಾರೆ ಅದನ್ನು ಹೋಗಲಾಡಿಸಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮುನಿರಾಜು , ಮುಖಂಡರಾದ ಮಾರೇಗೌಡ, ಕೋದಂಡರಾಂ, ಶಶಿಕಲಾ, ಮಂಜುಳಾ ನರಸಿಂಹಮೂರ್ತಿ, ನಾಗೇಗೌಡ, ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top