ಬೆಂಗಳೂರು,ಜ,10 : ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಏಕೆ ಅನುಮತಿ ಕೊಡುತ್ತಿಲ್ಲ ತಾಂತ್ರಿಕ ವಿಷಯ ನೀರಿನ ಲಭ್ಯತೆ ವಿಷಯ
ಕ್ಲಿಯರ್ ಆಗಿದೆ. ಹೀಗಿರುವಾಗ ಆಣೆಕಟ್ಟು ಕಟ್ಟಿ ಎಂದು ಹೇಳಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹೇಳುತ್ತಿಲ್ಲ,ರಾಜ್ಯ ಸರ್ಕಾರಕ್ಕೆ ಬಾಯಿಲ್ಲ ಇಂತಹ ಕಾಲದಲ್ಲಿ ಅನಿವಾರ್ಯವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಬೇಕಿದ್ದರೆ ಇವರು ನಮ್ಮನ್ನು ಬಂಧಿಸಲಿ ಬೆಂಗಳೂರಿನ ಜನ,ಕಾವೇರಿ ಪಾತ್ರದ ಜನ ಮುಂದೇನು ಮಾಡಬೇಕು ಅಂತ ನಿರ್ಧಾರ ಮಾಡುತ್ತಾರೆ. ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.
