ಬಳ್ಳಾರಿ: ಹುಬ್ಬಳ್ಳಿಯ ನೇಹಾ ಹೀರೆಮಠ ಅವರ ಕೊಲೆ ಖಂಡಿಸಿ ಹಿಂದು ಜಾಗರಣ ವೇದಿಕೆಯಿಂದ ಶನಿವಾರ ಬೃಹತ್ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ಮೆರವಣಿಗೆಯು ನಗರದ ಕಾಗೆ ಪಾರ್ಕ್ ನಿಂದ ಪ್ರಾರಂಭವಾಗಿ ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಕ್ಕೆ ತಲುಪಿತು.
ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮುಖ್ಯ ಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಂತರ ಹಿಂದು ಜಾಗರಣ ವೇದಿಯ ಜಿಲ್ಲಾ ಅಧ್ಯಕ್ಷ ಶ್ರೀರಾಮ ಅವರು ಮಾತನಾಡಿ, ರಾಜ್ಯ ಸರ್ಕಾರ ಹಿಂದು ವಿರೋಧಿ ಎನ್ನುವುದನ್ನು ಮತ್ತೋಮ್ಮೆ ಸಾಭಿತು ಪಡಿಸಿದೆ. ಹಿಂದುಗಳ ರಕ್ಷಣೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಅವರು ಆರೋಪಿಗಳನ್ನು ಬಂಧಿಸಿವುಸುದು ಅವರ ರಕ್ಷಣೆ ಮಾಡುಲು ಅವರಿಗೆ ಯಾವುದೇ ಶಿಕ್ಷೆಗೆ ಗುರು ಪಡಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳು ಹುನುಮಾನ್ ಚಾಲಿಸ್ ಓದಿದರೆ ಅವರನ್ನು ಅರೆಸ್ಟ್ ಮಾಡುತ್ತಾರೆ, ಪಾಕ್ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾರೆ ಅಂದರೆ ಇವರು ಹಿಂದು ವಿರೋಧಿಗಳಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಸ್ವಾಮೀಜಿ, ಮಹೇಶ್ವರ ಸ್ವಾಮಿ ಸೇರಿದಂತೆ ಹಿಂದು ಜಾಗರಣ ವೇದಿಕೆ ಸದಸ್ಯರು ಮತ್ತು ನಗರದ ಸಾರ್ವಜನಿಕರು ಹಾಜರಿದ್ದರು.