ಪ್ರಜಾಪ್ರಭುತ್ವ ಉಳಿವಿಗೆ, ಉತ್ತಮ ಜನಪ್ರತಿನಿಧಿ ಆಯ್ಕೆಗಾಗಿ ತಪ್ಪದೇ ಮತದಾನ ಮಾಡಿ-ವಾಸವಿ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ

ವಿಜಯನಗರ: ವಾಸವಿ ಸಮೂಹ ವಿದ್ಯಾಸಂಸ್ಥೆಯಿಂದ  ವಿದ್ಯಾರ್ಥಿಗಳ ಮೂಲಕ ಮತದಾನದ ಮಹತ್ವ ಮತ್ತು ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲು ಮತದಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

ವಾಸವಿ ಸಮೂಹ ಶಿಕ್ಷಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯ ಸಾರಥಿ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಜಯನಗರ ಸುತ್ತಮುತ್ತ 7 ಕಿಲೋ ಮೀಟರ್ ವರಗೆ ಜಾಥ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸಿದರು.

 ಡಿ.ಆರ್.ವಿಜಯ ಸಾರಥಿ ಮಾತನಾಡಿ ಬೆಂಗಳೂರುನಗರ ಪ್ರದೇಶದಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶೇ 50 ಕ್ಕಿಂತ ಕಡಿಮೆ ಮತದಾನವಾಗುತ್ತಿದೆ.

 

ವಿದ್ಯಾವಂತರು, ಜ್ಞಾನವಂತರು ಮತದಾನದಿಂದ ದೂರ ಉಳಿದರೆ ಉತ್ತಮ ಜನಪ್ರತಿನಿಧಿ ಆಯ್ಕೆಯಾಗುವುದಿಲ್ಲ , ಇದರಿಂದ ದುರಾಡಳಿತಕ್ಕೆ ನಾವೇ ಸವಕಾಶ ಮಾಡಿಕೊಟ್ಟಂತಾಗಲಿದೆ ಎಂದರು.

ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವ ಹಕ್ಕು ನೀಡಿದೆ. ಪವಿತ್ರವಾದ ಮತವನ್ನು ಹಣ, ಹೆಂಡ, ಅಮಿಷಕ್ಕೆ ಒಳಗಾಗಿ ಮಾರಿಕೊಳ್ಳಬಾರದು. ನನ್ನ ಮತ ಮಾರಟಕ್ಕೆ ಇಲ್ಲ ಎಂದು ಹೇಳಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ. ಪ್ರಜಾಪ್ರಭುತ್ವ ಉಳಿಯಲು ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.

ಕಾರ್ಯಕರ್ಮದಲ್ಲಿ ಕಾರ್ಯದರ್ಶಿಯಾದ  ಡಿ.ಆರ್.ವಿಜಯಸಾರಥಿರವರು ಮತ್ತು ಪ್ರಾಂಶುಪಾಲರಾದ  ಪದ್ಮ, ರಚನ, ಡಾ.ರಂಗಸ್ವಾಮಿ, ಸ್ವಾಭಾಗ್ಯ,  ಲೋಹಿತ್  ಮತ್ತು ಏನ್.ಎಸ್ .ಎಸ್ ವಿದ್ಯಾರ್ಥಿಗಳು ಮತ್ತು ವಿಜಯನಗರ  ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top