ಬಳ್ಳಾರಿ: ಬೆಂಗಳೂರಿನ ಖ್ಯಾತ ಸಂಗೀತ ವಿದುಷಿ ವಿದ್ವಾನ್ ವೃಂದಾ ಆಚಾರ್ಯ ಇವರು ಇದೇ ಜುಲೈ 23ರಂದು ಭಾನುವಾರ ಇಲ್ಲಿನ ಡಾ.ರಾಜಕುಮಾರ್ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ, ಹಿಂದೂಸ್ಥಾನಿ ಸಂಗೀತ, ಭಕ್ತಿ ಸಂಗೀತದ ಕುರಿತು ವಿವಿಧ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬಳ್ಳಾರಿ ಮ್ಯೂಸಿಕ್ ಕ್ಲಬ್ ಇವರು ಅಂದು ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಸಂಘಟಿಸಿದ್ದಾರೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ವೃಂದಾ ಆಚಾರ್ಯ ಸಂಗೀತ ಕಲಿಯುವಲ್ಲಿ ಆಸಕ್ತಿ ಇರುವವರಿಗೆ ಉಚಿತ ತರಬೇತಿ ನೀಡಲಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕಂತ ಜನ್ಯ ಸಂಕೀರ್ತನೆಗಳು, ಹರಿದಾಸರ ಕೀರ್ತನೆಗಳು, ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ತೆಲುಗಿನ ಅನ್ನಮಾಚಾರ್ಯ ಸಂಕೀರ್ತನೆ, ಕನ್ನಡದ ಹರಿದಾಸರಾದ ಪುರಂದರ, ಕನಕರು, ಶ್ರೀಜಗನ್ನಾಥದಾಸರು ಆದಿಯಾಗಿ ಅನೇಕ ಕೀರ್ತನಕಾರರ ಭಕ್ತಿ ಹಾಡುಗಳನ್ನು ಸಂಗೀತಾಸಕ್ತರಿಗೆ ಹೇಳಿಕೊಡಲಿದ್ದಾರೆ.
ಬೆಳಿಗ್ಗೆ 10-30ರಿಂದ ಮಧ್ಯಾಹ್ನ 12-30ರವರೆಗೆ ಜರುಗಲಿರುವ ಸಂಗೀತ ಕಾರ್ಯಾಗಾರದಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ಭಕ್ತಿಗೀತೆಗಳ ಹಾಡುಗಾರಿಕೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಇದೇ ಜು.20ರ ಗುರುವಾರದೊಳಗೆ ಮಾಯಾ ಪಿ.ರಾವ್-97390 97388, ಭ್ರಮರ ವಿನೋದ್-94492 79110 ಮತ್ತು ಡಾ.ವೀಣಾ ಕಬ್ಬಿನದ-94800 12300 ಇವರನ್ನು ಸಂಪರ್ಕಿಸಬಹುದು.