ಸಂಸದ ಪ್ರಜ್ವಲ್ ರೇವಣ್ಣ  : ಸಂತ್ರಸ್ತೆಯರು ದೂರು ನೀಡಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಆರಂಭಿಸಿದ್ದ ಸಹಾಯವಾಣಿಗೆ ೩೦ಕ್ಕೂ ಹೆಚ್ಚು ಕರೆಗಳು

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧದ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಸಂಬಂಧ ಸಂತ್ರಸ್ತೆಯರು ದೂರು ನೀಡಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಆರಂಭಿಸಿದ್ದ ಸಹಾಯವಾಣಿಗೆ ಈವರೆಗೆ ೩೦ಕ್ಕೂ ಹೆಚ್ಚು ಕರೆಗಳು ಬಂದಿವೆ.

ಆದರೆ ಇದುವರೆಗೂ ಸಂತ್ರಸ್ತೆ ಮಹಿಳೆಯರು ದೂರು ನೀಡಿಲ್ಲ. ಹೀಗಾಗಿ ಹೆಲ್ಪ್‌ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮತ್ತೊಮ್ಮೆ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

ಸಹಾಯವಾಣಿ ೬೩೬೦೯೩೮೯೪೭ ಮೊಬೈಲ್ ಸಂಖ್ಯೆಸಂಪರ್ಕಿಸಿ ದೂರು ನೀಡಲು ಮನವಿ ಮಾಡಲಾಗಿದ್ದು, ದೂರು ನೀಡಿದರೆ ಮಾಹಿತಿ ಸಂಗ್ರಹಿಸಲು ಸಿದ್ದರಿದ್ದೇವೆ. ಗುರುತು, ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ನೇರವಾಗಿ ಅಧಿಕಾರಿಗಳನ್ನೂ ಸಂಪರ್ಕಿಸಿ ದೂರು ನೀಡಹುದು ಎಂದು ಎಸ್‌ಐಟಿ ಹೇಳಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಹೆಲ್ಪ್‌ಲೈನ್ ಮೂಲಕ ದಾಖಲಾಗುವ ಹೇಳಿಕೆಗಳನ್ನೂ ಎಸ್‌ಐಟಿ ಪರಿಗಣಿಸುತ್ತಿದೆ.

 

ಅಜಿತ್‌ಗೆ ೩ನೇ ನೋಟಿಸ್:

 

ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಭವಾನಿಯವರ ಕಾರು ಚಾಲಕ ಅಜಿತ್‌ಗೆ ಎಸ್‌ಐಟಿ ಅಧಿಕಾರಿಗಳು ೩ನೇ ಬಾರಿ ನೋಟಿಸ್ ನೀಡಿದ್ದಾರೆ, ಈಗಾಗಲೇ ನೀಡಿರುವ ೨ ನೋಟಿಸ್‌ಗೆ ಅಜಿತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

ಅಜಿತ್ ವಿಚಾರಣೆ ಮಾಡಿದರೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಂತ್ರಸ್ತೆ ವಶಕ್ಕೆ ಪಡೆಯುವ ಮುನ್ನ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆ ವಿಡಿಯೋ ವೈರಲ್? ಮಾಡಿದ್ದು ಅಜಿತ್ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಅಜಿತ್‌ಗೆ ನೋಟಿಸ್ ನೀಡಲಾಗಿದೆ.

 

 

ಅಜಿತ್ ವಿಡಿಯೋ ಮಾಡಿಕೊಂಡಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ಎಸ್‌ಐಟಿಗೆ ಮಾಹಿತಿ ದೊರೆತಿದೆ. ಹೀಗಾಗಿ ಐಪಿಸಿ ಸೆಕ್ಷನ್ ೧೨೦ ಬಿ ಅಡಿಯಲ್ಲಿ ತನಿಖೆ ನಡೆಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ. ಚಾಲಕ ಅಜಿತ್‌ಗಾಗಿ ಇದೀಗ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Facebook
Twitter
LinkedIn
Telegram
WhatsApp
Print
Facebook

Leave a Comment

Your email address will not be published. Required fields are marked *

Translate »
Scroll to Top