ಆಧುನಿಕ ವೈದ್ಯ ಪದ್ಧತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ

ದೇವನಹಳ್ಳಿ: ನಗರ ಪ್ರದೇಶದಲ್ಲಿನ ಅತ್ಯಾಧುನಿಕ ವೈದ್ಯ ಪದ್ಧತಿಯಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದು ಹೆಚ್ಚಿನ ಹೊರೆಯಾಗದಂತೆ ಸುಲಭ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಗ್ರಾಮೀಣ ಭಾಗದ ಜನತೆ ಬೆಂಗಳೂರು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಿ ಅಲ್ಲಿನ ಚಿಕಿತ್ಸೆ ಇಲ್ಲಿಯೇ ನೀಡುವ ಸದುದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆ ಮಾನಸ ಆಸ್ಪತ್ರೆ ಪ್ರಾರಂಭ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡುತ್ತಿರುವುದಾಗಿ ಮಾನಸ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ನರಸಾರೆಡ್ಡ್ಡಿತಿಳಿಸಿದರು.

ಅವರು ದೇವನಹಳ್ಳಿ ಪಟ್ಟಣದ 11 ನೇ ವಾರ್ಡ್ ನ ಮರಳುಬಾಗಿಲು ರಸ್ತೆಯಲ್ಲಿನ ನ್ಯೂ ಮಾನಸ ಆಸ್ಪತ್ರೆ ಆವರಣದಲ್ಲಿ ಮೂರನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೂಳೆ ಮೂತ್ರಪಿಂಡ ಮತ್ತು ಹೆರಿಗೆ ಪ್ರಸೂತಿ ತಜ್ಞರಿಂದ ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸೆ ನೀಡಿ ಮಾತನಾಡಿ ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಸಿದರೂ ಕಡಿಮೆ ವೆಚ್ಚದಲ್ಲೇ ಮಾಡಲಾಗುತ್ತದೆ ಇಂದಿನ ಶಿಬಿರದಲ್ ಮಹಿಳೆಯರಿಗೆ ಸಂಭಂದಿಸಿದ ಹಲವು ಖಾಯಿಲೆಗಳಿಗೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ ನುರಿತ ತಜ್ಞ ವೈದ್ಯರು ನಮ್ಮ ಆಸ್ಪತ್ರೆಯಲ್ಲಿದ್ದಾರೆ ಯಾವುದೇ ಸಮಸ್ಯೆಗಲಿಗೆ ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು ಹಾಗೂ ಇಂದಿನ ಶಿಬಿರದ ಅನುಕೂಲವನ್ನು ತಾಲ್ಲೂಕಿನ ಜನತೆ ಪಡೆಯಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಳೆ ತಜ್ಞರಾದ ಡಾ.ಚೇತನ್, ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ.ಚೈತ್ರ, ಮೂತ್ರಪಿಂಡ ತಜ್ಞರಾದ ಡಾ.ಧರ್ಮಪ್ರಕಾಶ್, ಮುಖ್ಯ ಆಡಳಿತಾಧಿಕಾರಿ ಪ್ರಭಾಕರ್, ಮ್ಯಾನೇಜರ್‌ ಸೋಮಶೇಖರ್ ಹಾಗೂ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top