ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಬೆಂಗಳೂರು,ಜ,7 : ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಸಾಧ್ಯತೆಯ ಅಡಚಣೆಗಳನ್ನು ತಪ್ಪಿಸಲು ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿಗಳ ಸ್ಧಾಪನೆ ಕೋವಿಡ್ ಸಮಯದಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಸರಕು ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಡಿಪಿಐಐಟಿ ಸಹಾಯವಾಣಿ ಖಚಿತಪಡಿಸಲಿದೆ ಸಾಂಕ್ರಾಮಿಕ ಉಲ್ಬಣಗೊಂಡ ಸಮಯದಲ್ಲಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಬೆಂಬಲಿಸಲು ಡಿಜಿಎಫ್ ಟಿ ನಿಂದ ಕೋವಿಡ್ 19 ಸಹಾಯವಾಣಿ ತೆರೆಯಲಾಗಿದೆ ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆ ಮತ್ತು ವ್ಯಾಪಾರ ಉತ್ತೇಜನ ಇಲಾಖೆ [ಡಿಪಿಐಐಟಿ] ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹರಡುವಿಕೆ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಸಾಧ್ಯತೆಯ ಅಡಚಣೆಗಳನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ವಿಧಿಸಿರುವ ನಿರ್ಬಂಧಗಳಿಂದ [ಯಾವುದಾದರೂ ಇದ್ದರೆ] ಸರಕುಗಳು, ಅಗತ್ಯ ವಸ್ತುಗಳ ಸಾಗಾಣೆ ಸಮಯದಲ್ಲಿ ಎದುರಾಗುವ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು [ಯಾವುದಾದರೂ ಇದ್ದಲ್ಲಿ] ಮೇಲ್ವಿಚಾರಣೆ ಮಾಡಲಿದೆ. ಉತ್ಪಾದನೆ, ಸಾಗಾಣೆ, ಪೂರೈಕೆ, ಸಗಟು ಮಾರಾಟ ಅಥವಾ ಇ ವಾಣಿಜ್ಯ ಕಂಪೆನಿಗಳ ಸರಕುಗಳ ಸಾಗಾಣೆ ಮತ್ತು ಪೂರೈಕೆ ಅಥವಾ ಸಂಪನ್ಮೂಲ ಕ್ರೋಢೀಕರಣದಲ್ಲಿ ಯಾವುದಾದರೂ ಸಂಕಷ್ಟಗಳು ಎದುರಾದಲ್ಲಿ ಈ ಕೆಳಕಂಡ ದೂರವಾಣಿ/ಇ ಮೇಲ್ ಮೂಲಕ ಮಾಹಿತಿ ನೀಡಬಹುದು:-

ದೂರವಾಣಿ: + 91 11 23063554, 23060625

ಇ ಮೇಲ್ : dpiit-controlroom@gov.in

ಈ ಮೇಲಿನ ದೂರವಾಣಿ ಸಂಖ್ಯೆ 05.01.2022 ರಿಂದ ಪ್ರಾರಂಭವಾಗಿದ್ದು, ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ. ಈ ನಿಯಂತ್ರಣ ಕೊಠಡಿ ಮೂಲಕ ವಿವಿಧ ಪಾಲುದಾರರು ಗಮನಕ್ಕೆ ತರುವ ಸಮಸ್ಯೆಗಳನ್ನು ಸಂಬಂಧಪಟ್ಟ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಬಗೆಹರಿಸಲಾಗುತ್ತಿದೆ. ಆದ್ದರಿಂದ ಮೇಲೆ ತಿಳಿಸಿದ ಸಮಸ್ಯೆಗಳನ್ನು ನಿಯಂತ್ರಣ ಕೊಠಡಿಗೆ ವರದಿ ಮಾಡುವಂತೆ ಪಾಲುದರಾರಿಗೆ ಮನವಿ ಮಾಡಲಾಗಿದೆ. ಕೋವಿಡ್ – 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಇಲಾಖೆ ಮತ್ತು ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ರಫ್ತು ಮತ್ತು ಆಮದು ವಲಯದಲ್ಲಿ ಪಾಲುದಾರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ನಿಗಾವಹಿಸಲಿದೆ. ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸಲು ಕೈಗೊಳ್ಳುವ ನಿರ್ಣಯಗಳನ್ನು ಬೆಂಬಲಿಸಲು ಡಿಜಿಎಫ‍್ ಟಿ ಕೋವಿಡ್ 19 ಸಹಾಯವಾಣಿಯನ್ನು ಕಾರ್ಯಗತಗೊಳಿಸಿದೆ. ಕೋವಿಡ್ 19 ಸಹಾಯವಾಣಿಯು ವಾಣಿಜ್ಯ ಇಲಾಖೆ/ ಡಿಜಿಎಫ್ ಟಿ ಗೆ ಸಂಬಂಧಿಸಿದ್ದಾಗಿದ್ದು, ಆಮದು, ರಫ್ತು ವಿಷಯಗಳ ಪರವಾನಗಿ ನವೀಕರಣ, ಕಸ್ಟಮ್ಸ್ ಕ್ಲಿಯರೆನ್ಸ್ ವಿಳಂಬಗಳು ಮತ್ತು ಇದರಿಂದ ಉಂಟಾಗುವ ಸಂಕಿರ್ಣತೆಗಳು, ಆಮದು/ ರಫ್ತು ದಾಖಲಾತಿ ಸಮಸ್ಯೆಗಳು, ಬ್ಯಾಂಕಿಂಗ್, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪರಿಹಾರ ಸೂಚಿಸುತ್ತದೆ. ಸಹಾಯವಾಣಿ ಮೂಲಕ ಸಂಗ್ರಸುವ ಮಾಹಿತಿ, ವಿವಿಧ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳಿಂದ ವ್ಯಾಪಾರ ಸಂಬಂಧಿತ ಸಮಸ್ಯೆ ಕುರಿತಾದ ವಿಷಯಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಾಧ್ಯತೆಯ ಪರಿಹಾರ ಒದಗಿಸಲಿದೆ.

ರಫ್ತು – ಆಮದು ವಲಯ ಡಿಜಿಎಫ್ ಟಿ ವೆಬ್ ಸೈಟ್ ಗೆ ಸೂಕ್ತ ಮಾಹಿತಿಯನ್ನು ಸಲ್ಲಿಸಬೇಕು ಮತ್ತು ಸಲ್ಲಿಕೆಯಾದ ವಿವರಗಳ ಆಧಾರದ ಮೇಲೆ ಕೆಳಕಂಡ ಹಂತಗಳ ಮೂಲಕ ಬಗೆಹರಿಸಲು ಕ್ರಮ ಕೈಗೊಳ‍್ಳಲಾಗುವುದು.

i. ಡಿಜಿಎಫ್ ಟಿ ವೆಬ್ ಸೈಟ್ (https://dgft.gov.in ) — > ಸೇವೆಗಳು — > ಡಿಜಿಎಫ್ ಟಿ ಸಹಾಯವಾಣಿ

ii. ಹೊಸ ಮನವಿ ವಿಭಾಗ ಸೃಜನೆ ಮತ್ತು ಕೋವಿಡ್ 19 ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು

iii. ಉಪ ವಿಭಾಗಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಜೊತೆಗೆ ಇತರೆ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು.

ಪರ್ಯಾಯ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಇ ಮೇಲ್ ವಿಳಾಸಕ್ಕೆ ಸಲ್ಲಿಸಬೇಕು dgftedi@nic.in ವಿಷಯದ ಶೀರ್ಷಿಕೆಯೊಂದಿಗೆ: ಕೋವಿಡ್ 19 ಸಹಾಯವಾಣಿ ಅಥವಾ ಶುಲ್ಕ ರಹಿತ ದೂರವಾಣಿ ಸಂಖ್ಯೆ 1800-111-550 ಗೆ ಕರೆ ಮಾಡಬೇಕಾಗುತ್ತದೆ. ಡಿಜಿಎಫ್ ಟಿ ಸಹಾಯವಾಣಿ ಸೇವೆಗಳಡಿ ವಸ್ತುಸ್ಥಿತಿಯ ಅನುಸರಣೆಯನ್ನು ಬಳಸಿಕೊಂಡು ಪರಿಹಾರ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇ ಮೇಲ್ ಮತ್ತು ಎಸ್.ಎಂ.ಎಸ್ ಗಳ ಮೂಲಕ ವಸ್ತುಸ್ಥಿತಿಯ ಮಾಹಿತಿ ನೀಡಲಾಗುತ್ತದೆ. ಕಲ್ಪಿಸಿರುವ ಸೌಲಭ್ಯವನ್ನು ವ್ಯಾಪಾರ ಸಮುದಾಯ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಕೋರಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top