ಬಳ್ಳಾರಿ: ತಾಲೂಕಿನ ಹೊನ್ನಾಳಿ ಗ್ರಾಮದಲ್ಲಿ ಇಂದು 17ನೇ ವರ್ಷದ ಶ್ರಾವಣ ಮಾಸದ 2ನೇ ಸೋಮವಾರ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಅಜ್ಜಯ್ಯ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ ಪೂಜಾ ಕಾರ್ಯಕ್ರಮವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಉದ್ಘಾಟನೆ ಮಾಡಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ, ಸಚಿವ ಬಿ.ನಾಗೇಂದ್ರ ಅವರು ಅಜ್ಜಯ್ಯ ತಾತನವರ ಪವಾಡ ದೊಡ್ಡದು. ಏಕೆಂದರೆ ನನ್ನ ಮನೆಯ ಕಾರ್ಯಕ್ರಮ ಇದ್ದರೂ ಸಹಿತ ಇಂದು ನಾನು ಹೆಲಿಕ್ಯಾಪ್ಟರ್ ಮೂಲಕ ಅಜ್ಜಯ್ಯನ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಬಹಳ ಅದೃಷ್ಟ ಎಂದು ಹೇಳಿದರು.

ನಂತರ ಜನರನ್ನು ಉದ್ದೇಶಿಸಿ ಮಾತನಾಡಿ , ನಾನು ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ಚುನಾವಣೆ ಸಮಯದಲ್ಲಿ ನನ್ನ ಕೈ ಹಿಡಿದು ನನ್ನ ಈ ಸ್ಥಾನಕ್ಕೆ ತಂದಿದ್ದಿರಿ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿರುತ್ತೇನೆ. ನಮ್ಮ ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ನಾನು ಶ್ರಮವಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಗ್ರಾಮದ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.