ಮಂಗಳೂರು – ಬೆಂಗಳೂರು ಗ್ರೀನ್ ಫೀಲ್ಡ್ ಹೈಸ್ಪೀಡ್ ಕಾರಿಡಾರ್ ಬಗ್ಗೆ ಸಚಿವ ದಿನೇಶ್ ಗುಂಡೂರಾವ್, ಹೆಬ್ಬಾಳ್ಕರ್ ಮಹತ್ವದ ಚರ್ಚೆ

ಬೆಂಗಳೂರು : ಬೆಂಗಳೂರು – ಮಂಗಳೂರು ಇಂಟಗ್ರೆಟೇಡ್ ‌ಗ್ರೀನ್ ಫೀಲ್ಡ್ ಹೈ ಸ್ಪಿಡ್ ಕಾರಿಡಾರ್ ನಿರ್ಮಾಣ ಕುರಿತಂತೆ ಯೂರೋಪಿಯನ್ ಬ್ಯುಸಿನೆಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥರು ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು.. 

ಮಂಗಳೂರು – ಬೆಂಗಳೂರು ಹಸಿರುವ ವಲಯ ಹೈ ಸ್ಪೀಡ್ ಕಾರಿಡಾರ್ ಮಂಗಳೂರು ಅಭಿವೃದ್ದಿಯ ಜೊತೆಗೆ ಮಾರ್ಗ ಮಧ್ಯ ಬರುವ ಇತರ ನಗರಗಳ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ. 6 ರಿಂದ 8 ಲೈನ್ ಹೈಸ್ಪೀಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜಿಸಲಾಗಿದ್ದ, ಪ್ರಾರಂಭಿಕ ಹಂತವಾಗಿ ಇಂದು ಸಚಿವರೊಂದಿಗೆ ಸಂಸ್ಥೆಯವರು ಚರ್ಚೆ ನಡೆಸಿದರು. 

ಬೆಂಗಳೂರಿನಿಂದ ಮಂಗಳೂರಿಗೆ ಹೈ ಸ್ಪೀಡ್ ಕಾರಿಡಾರ್ ಮಂಗಳೂರಿಗೆ ಹೆಚ್ಚುನ ಬಂಡವಾಳವನ್ನ ತರುವಲ್ಲಿ ಹೆಚ್ಚು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರಿಡಾರ್ ಮಂಗಳೂರು ಪೊರ್ಟ್ ಗೂ ಕನೆಕ್ಟ್ ಮಾಡುವುದರಿಂದ ವ್ಯಾಪಾರ ಉದ್ಯಮಗಳ ಬೆಳವಣಿಗೂ ನೆರವಾಗಲಿದೆ ಎಂದರು.‌

 

ಕಾರಿಡಾರ್ ರೋಟ್ ಮ್ಯಾಪ್ ಸಮೇತ ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಲೋಕೊಪಯೋಗಿ ಸಚಿವರು ಹಾಗೂ ಸಿಎಂ ಜೊತೆ ಮಾತುಕತೆ ನಡೆಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ಭರವಸೆ ನೀಡಿದರು. ಮಂಗಳೂರು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುವ ಇಂತಹ ಯೋಜನೆಗಳನ್ನ ರಾಜ್ಯ ಸರ್ಕಾರ ಪ್ರೋತ್ಸಾಹಿಸಲಿದೆ.. ಇಂತಹ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಸಹಭಾಗಿತ್ವವೂ ಬೇಕಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Facebook
Twitter
LinkedIn
Telegram
WhatsApp
Email
Print

1 thought on “ಮಂಗಳೂರು – ಬೆಂಗಳೂರು ಗ್ರೀನ್ ಫೀಲ್ಡ್ ಹೈಸ್ಪೀಡ್ ಕಾರಿಡಾರ್ ಬಗ್ಗೆ ಸಚಿವ ದಿನೇಶ್ ಗುಂಡೂರಾವ್, ಹೆಬ್ಬಾಳ್ಕರ್ ಮಹತ್ವದ ಚರ್ಚೆ”

Leave a Comment

Your email address will not be published. Required fields are marked *

Translate »
Scroll to Top