ತೆಲಂಗಾಣ ವಿಧಾನಸಭೆ ಚುನಾವಣೆ ಕಣದಲ್ಲಿ ಸಚಿವ ಬಿ.ನಾಗೇಂದ್ರ

ಹೈದ್ರಬಾದ್:  ಕರ್ನಾಟಕ ದ ನೆರೆಹೊರೆಯ ರಾಜ್ಯ ತೆಲಂಗಾಣದಲ್ಲಿ ವಿಧಾನಸಭೆ  ಚುನಾವಣೆ ರಂಗೇರಿದೆ. ಕರ್ಣಾಟಕದ ನಂತರ ತೆಲಂಗಣಾ ದಲ್ಲಿಯೂ ಕಾಂಗ್ರೆಸ್ ನ ವಿಜಯ ಪತಾಕೆ ಹಾರಿಸುವ ಉದ್ದೇಶದಿಂದ ಕರ್ನಾಟಕದ ಘಟಾನುಘಟಿ ಕಾಂಗ್ರೆಸ್ ನಾಯಕರು ಚುನಾವಣಾ ಕಣದಲ್ಲಿ ಉತ್ಸಾಹದಿಂದ ಭಾಗವಾಹಿ ಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ಕೈ ಮುಖಂಡರು ಚುನಾವಣಾ ಕಣದಲ್ಲಿ ಪಾಲ್ಗೊಂಡಿದ್ದಾರೆ.   ಈಗ ತೆಲಂಗಾಣ ರಾಜ್ಯ ವಿಧಾನಸಭೆ  ಚುನಾವಣೆಯ ಕರೀಂ ನಗರದ

ಚೊಪ್ಪದಂಡಿ (ಎಸ್ಸಿ) ಮೀಸಲು ಕ್ಷೇತ್ರ.ಮಾನಕೊಂಡೂರು (ಎಸ್ಸಿ) ಮೀಸಲು ಕ್ಷೇತ್ರ ಹಾಗೂ ಹುಸ್ನಾಬಾದ್ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯಾಗಿ ಯುವ ಸಬಲೀಕರಣ ಕ್ರೀಡೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರನ್ನ

 

ಎಐಸಿಸಿ ನೇಮಕ ಮಾಡಿರುವ  ಹಿನ್ನಲೆಯಲ್ಲಿ  ಗುರುವಾರ  ಹೈದ್ರಬಾದ್ ನ ನಾಂಪಲ್ಲಿಯ ಗಾಂಧಿಭವನ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ  ವಸತಿ ಇಲಾಖೆ. ವಕ್ಫ್ ಮತ್ತು ಹಜ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್‌ ಅವರನ್ನ ಪಕ್ಷದ ಕಚೇರಿಯಲ್ಲಿ ಬೇಟಿ ಮಾಡಿ ಚುನಾವಣೆಯ ಕಾರ್ಯತಂತ್ರಗಳ  ಕುರಿತಂತೆ ಸುದೀರ್ಘ ಚರ್ಚೆ  ನಡೆಸಿದರು.

 

ಎಂಟರಿಂದ ಹತ್ತು ದಿನಗಳ ಕಾಲ  ತಂಗಲಿದ್ದು   ಕಾಂಗ್ರೆಸ್ ಅಭ್ಯರ್ಥಿಗಳ ಪರ‌ಬಿರುಸಿನ‌ ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ.ಟಿಪಿಸಿಸಿ ವಾರ್ ರೂಂ ಉಸ್ತುವಾರಿ ಮೆಹರೂಜ್ ಸೇರಿದಂತೆ ಇತರರು ಹಾಜರಿದ್ದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top