ಕರ್ನಾಟಕ ನೀರಾವರಿ ನಿಗಮದಲ್ಲಿ ಅರ್ಹತೆ, ಜೇಷ್ಠತೆ, ನೀತಿ – ನಿಯಮ ಉಲ್ಲಂಘಿಸಿ ಬಡ್ತಿ : ಅನ್ಯಾಯಕ್ಕೊಳಗಾದ ಸಿಬ್ಬಂದಿಯಿಂದ ಕಾನೂನು ಹೋರಾಟಕ್ಕೆ ಸಜ್ಜು

ಬೆಂಗಳೂರು: ಕರ್ನಾಟಕ ನೀರಾವರಿ ನಿಗಮದಲ್ಲಿ ಮನಸ್ಸೋ ಇಚ್ಚೆ ಬಡ್ತಿ ನೀಡಿ, ಜೇಷ್ಠತೆ ಸೇರಿ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದು, ಇದನ್ನು ವಿರೋಧಿಸಿ ಕಾನೂನು ಹೋರಾಟ ನಡೆಸಲು ಅನ್ಯಾಯಕ್ಕೊಳಗಾದ ಸಿಬ್ಬಂದಿ ವರ್ಗ ಮುಂದಾಗಿದೆ.

ಬಡ್ತಿ ಮತ್ತು ವೇತನ ಬಡ್ತಿ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಜಲ ಸಂಪನ್ಮೂಲ ಇಲಾಖೆ ಮತ್ತು ನಿಗಮದ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೇ, ಈ ಹಿಂದೆ ಶಾಸನ ಸಭೆಗಳಲ್ಲಿ ಕೇಳಲಾದ ಪ್ರಸ್ತಾಪಗಳಿಗೂ ಉತ್ತರಿಸದೇ ಅಸಮರ್ಪಕ ಉತ್ತರಗಳನ್ನು ಹಿಂದಿನ ಸಚಿವರಿಂದ ಕೊಡಿಸಿ ತಪ್ಪಿಸಿಕೊಂಡು ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಕೂಗು ತೀವ್ರಗೊಂಡಿದೆ.

ನಿಗಮ ಮಂಡಳಿಗಳ ವಲಯದಲ್ಲಿ ಮಾದರಿಯಾಗಿರಬೇಕಾದ ಕರ್ನಾಟಕ ನೀರಾವರಿ ನಿಗಮದಲ್ಲಿ ನಿಷ್ಠಾವಂತ ನೌಕರರಿಗೆ ಭಾರೀ ಅನ್ಯಾಯವಾಗುತ್ತಿದೆ. ನೀತಿ, ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ.

 

ಕೆಲವು ಭಲಾಡ್ಯ ನೌಕರರಿಗೆ ಮಾತ್ರ ಹೊಸದಾಗಿ ತಮಗಿಷ್ಟ ಬಂದಂತೆ ಹುದ್ದೆ ಸೃಜಿಸಲಾಗಿದೆ. ಉದಾಹರಣೆಗೆ ಸ್ಪೆನೋಗ್ರಾಫರ್ ಅಂಡ್ ಆಪೀಸ್ ಅಸಿಸ್ಟೆಂಟ್ ಎಂದು ಎರೆಡೆರೆಡು ಪದನಾಮಗಳಿರುವ ಹುದ್ದೆಯನ್ನು ಸೃಷ್ಟಿಮಾಡಿಕೊಳ್ಳಲು ಸಿ ಅಂಡ್ ಆರ್ ಅನ್ನೇ ತಿದ್ದಿಸಿಕೊಂಡು ಬಡ್ತಿ ಕೊಟ್ಟು ಮೂಲ ವೇತನವನ್ನು ಜಿ.ಪಿ.ಎ ಎಂದು ರೂ.36950/-ರಿಂದ ರೂ.48900/-ಗಳಿಗೆ ಏರಿಕೆ ಮಾಡಲಾಗಿದೆ. ಇನ್ನುಳಿದ ನೌಕರರುಗಳಿಗೆ ಪದನಾಮ ಮಾತ್ರ ಬದಲಾಯಿಸಿ  ಪ್ರಸ್ತುತ ಚಾಲ್ತಿಯಿರುವ ವೇತನದಲ್ಲಿ ಒಂದೇ ಇಂಕ್ರಿಮೆಂಟ್  ನೀಡಲಾಗಿದೆ.

ನಿಗಮದ ವೃಂದ ಮತ್ತು ನೇಮಕಾತಿ ನಿಯಮಗಳು 2010 ರಲ್ಲಿ ಅನುಮೋದನೆಯಾಗಿದ್ದರೂ 2021 ನವೆಂಬರ್ ವರೆಗೂ ಬಡ್ತಿ ನೀಡಿರುವುದಿಲ್ಲ  ಅಲ್ಲಿಯವರೆಗೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ನಿಗಮದ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರುವುದಿಲ್ಲ. ಹಿಂದಿನ ಸಿ ಅಂಡ್ ಆರ್ ಮತ್ತು ಈಗಿನ ಸಿ ಅಂಡ್ ಆರ್ ನಿಯಮಗಳನ್ನು ತಾಳೆ ನೋಡಿದರೆ ವಾಸ್ತವ ತಿಳಿಯುತ್ತದೆ.  ವಿದ್ಯಾರ್ಹತೆಯಿಲ್ಲದಿದ್ದರೂ ಜಲಸಂಪನ್ಮೂಲ ಇಲಾಖೆ ಮತ್ತು ನಿಗಮದ ಅಧಿಕಾರಿಗಳ ಮೇಲೆ ಕೆಲವರು ಪ್ರಭಾವ ಬೀರಿ ತಾನು ಪದವಿ ಪಾಸಾಗಿದ್ದೇನೆ, 3ವರ್ಷಗಳ ಸ್ಟೆನೋಗ್ರಾಪರ್ ಕೋರ್ಸ್ ಮಾಡಿದ್ದೇನೆಂದು ಸುಳ್ಳು ಹೇಳಿ ಬಡ್ತಿ ಪಡೆದುಕೊಂಡಿದ್ದಾರೆ. ಡಿಪಿಸಿ ಮತ್ತು ಸ್ಕ್ರೀನಿಂಗ್ ಕಮಿಟಿ ಸಭೆಯ ವಿಷಯ ಸಿಬ್ಬಂದಿ ಗಮನಕ್ಕೆ ಬಾರದಂತೆ ಬಡ್ತಿ ನಿಯಮಾವಳಿಗಳನ್ನು ಪಾಲಿಸದೇ, ಸಿಬ್ಬಂದಿ/ಅಧಿಕಾರಿಗಳಿಗೆ ನೋಟೇಸ್ ನೀಡದೇ, ಪಾರದರ್ಶಕವಲ್ಲದ ರೀತಿಯಲ್ಲಿ ಡಿ.ಪಿ.ಸಿ ಮಾಡಿ  ಮುಂಬಡ್ತಿ ನೀಡಿರುವುದಾಗಿ ನೌಕರರು ಆರೋಪಿಸಿದ್ದಾರೆ.

ಇಲ್ಲಿನ 25 ಮಂದಿ ಸಿಬ್ಬಂದಿ 2000 ರಿಂದಲೂ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2007ರಲ್ಲಿ ನಿಗಮಕ್ಕೆ ಅಧಿಕೃತವಾಗಿ ಖಾಯಂ ಆಗಿ ನೇಮಕಗೊಂಡಿರುತ್ತಾರೆ.   2010 ರಲ್ಲಿ ಸಿ ಅಂಡ್ ಆರ್ ನಿಯಮಗಳು ಜಾರಿಗೆ ಬಂದಿವೆ.  ಸರ್ಕಾರದಲ್ಲಿ ಇಲ್ಲದೇ ಇರುವ ನೀತಿ ಇಲ್ಲಿ ಪಾಲಿಸಲಾಗಿದೆ. ಉದಾ: ಗ್ರೂಪ್ ಡಿ ನೌಕರರಿಗೆ ಎರೆಡು ಮುಂಬಡ್ತಿ ನೀಡಿ, ಕಚೇರಿ ಸಹಾಯಕರನ್ನಾಗಿ ಮಾಡಿದ್ದಾರೆ ಆದರೆ ಇವರ್ಯಾರೂ ಪಿ.ಯು.ಸಿ ಯಾಗಲೀ ತತ್ಸಮಾನ ವಿದ್ಯಾರ್ಹತೆ ಹೊಂದಿರುವುದಿಲ್ಲ.  ಕಿರಿಯ ಸಹಾಯಕ, ಕಚೇರಿ ಸಹಾಯಕ ನಂತರ ಹಿರಿಯ ಸಹಾಯಕ ನಂತರದ  ಹುದ್ದೆಗಳಿಗೆ ಮುಂದೆ ಯಾವುದೇ  ಬಡ್ತಿ ನೀಡದೇ ಹುದ್ದೆಗಳು ಖಾಲಿ ಇಲ್ಲ ಎಂದು ಕುಂಟು ನೆಪ ಹೇಳಿಕೊಂಡು ಒಳಗೊಳಗೇ ನಿಗಮದ ಲೆಕ್ಕ ಶಾಖೆಯಲ್ಲಿನ ಹಿಂದಿನ ಮತ್ತು ಈಗಿನ ಕೆಲ ಸಿಬ್ಬಂದಿಗಳು ತಮಗೆ ಬೇಕಾದ ರೀತಿ ಬಡ್ತಿ ಮತ್ತು ವೇತನ ನಿಗದಿ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹಿರಿಯ ಸಹಾಯಕರಾಗಿ ಬಡ್ತಿ ಪಡೆದ ಕೆಲವು ನೌಕರರು ಮುಂದಿನ 3 ವರ್ಷದಲ್ಲಿ ಮುಂದಿನ ಹುದ್ದೆಗೆ ಪದೋನ್ನತಿ ಹೊಂದಲು ಆಸ್ಪದ ಕಲ್ಪಿಸದೇ ಹುದ್ದೆಯೇ ಇಲ್ಲದಂದೆ ಅಥವಾ ಸೃಜನೇ ಮಾಡದೇ ನಿವೃತ್ತಿಯಾಗುವವರೆಗೂ ಒಂದೇ ಹುದ್ದೆಯಲ್ಲಿರಬೇಕಾದ ಸನ್ನಿವೇಶ ಉಂಟು ಮಾಡಿರುತ್ತಾರೆ.  ಆದರೆ ಜಿ.ಪಿ.ಎ ಎಂಬ ಹೊಸ ಹುದ್ದೆಯನ್ನು ಸೃಜಿಸಿ ಅರ್ಹತೆಯಿಲ್ಲದವರಿಗೆ ಕಾನೂನು ಬಾಹಿರವಾಗಿ ಮುಂಬಡ್ತಿ ನೀಡಿರುತ್ತಾರೆ. ಜಿ.ಪಿ.ಎ ಎಂಬ ಹುದ್ದೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಸರ್ಕಾರದ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುವ(ಸ್ಟೆನೋ) ಸಿಬ್ಬಂದಿಗಳಿಗೆ ನೀಡಲಾಗುತ್ತಿತ್ತು ಆದರೆ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಬಿಟ್ಟರೆ ಬೇರೆ ಯಾವ ಅಧಿಕಾರಿಗಳಿಗೂ ಅವಶ್ಯಕತೆಯಿಲ್ಲದ ಈ ಜಿಪಿಎ ಹುದ್ದೆಗಳ ಅವಶ್ಯಕತೆ ಏನು ಇವರ ಕೆಲಸವೇನು. ಪ್ರಸ್ತುತ 80ಕ್ಕೂ ಹೆಚ್ಚು ಇರುವ ನಿಗಮಗಳಲ್ಲಿ ಎಲ್ಲೂ ಕಾಣದ ಈ ಜಿ.ಪಿ.ಎ ಹುದ್ದೆ ಈ ಕರ್ನಾಟಕ ನೀರಾವರಿ ನಿಗಮಕ್ಕೆ ಹೇಗೆ ಬಂತು ಇದರ ಹಿಂದೆ ಇರುವ ಕಾಣದ ಕೈಗಳು ಯಾವುವು ಎಂಬ ತನಿಖೆಯಾಗಬೇಕಿದೆ. 

 ಆದರೆ ಸಾಕಷ್ಟು ಮಂದಿಗೆ ಒಂದೇ ಒಂದು ಇಂಕ್ರಿಮೆಂಟ್ ಕೊಟ್ಟು ಅನ್ಯಾಯ ಮಾಡಲಾಗಿದೆ. ತನಿಖೆ ನಡೆಸಿ ಕಾನೂನು ಬಾಹಿರವಾಗಿ ಪದವಿ. ಪೂರ್ಣಾವಧಿಯ ಪದವಿ ಅಥವಾ ಸ್ಟೆನೋಗ್ರಾಫರ್ ಕೋರ್ಸ್ ನ ಪ್ರಮಾಣ ಪತ್ರ ಇದೆ ಎಂದು ಸುಳ್ಳು ಹೇಳಿ ನೌಕರಿ ಮತ್ತು ಬಡ್ತಿ ಪಡೆದಿರುವವರನ್ನು ಕೆಲಸದಿಂದ ವಜಾಗೊಳಿಸಿ ಅವರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಪಡೆದ ನೌಕರಿ, ವೇತನವನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗಿದೆ ಮತ್ತು ಎಲ್ಲಾ ನೌಕರರಿಗೂ ನ್ಯಾಯ ಸಿಗುವಂತೆ ಮಾಡಬೇಕಾಗಿದೆ. ಇದೀಗ ನೀಡಿರುವ ಮುಂಬಡ್ತಿ ಕುರಿತಂತೆ ತನಿಖೆ ನಡೆದರೆ ವಸ್ತುಸ್ಥಿತಿ ಮಾಹಿತಿ ಹೊರ ಬರಲಿದೆ.  ವಯಸ್ಸು, ವಿದ್ಯಾರ್ಹತೆ, ಅನುಭವದ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದರೆ ಸುಳ್ಳು ಹೇಳಿ ಮುಂಬಡ್ತಿ ಪಡೆದಿರುವವರರು ಪತ್ತೆಯಾಗುತ್ತಾರೆ. ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬುದು ಅನ್ಯಾಯಕ್ಕೊಳಗಾದ ನೌಕರರ ಅಳಲು.

ಹಿನ್ನೆಲೆ: ಕರ್ನಾಟಕ ನೀರಾವರಿ ನಿಗಮ, ನೋಂದಾಯಿತ ಕಛೇರಿ, ಬೆಂಗಳೂರು ಇಲ್ಲಿ ಸುಮಾರು 25 ನೌಕರರು ನಿಗಮದಲ್ಲಿ 2000 ದಿಂದ 2007 ರವರೆಗೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದರು. 2007 ರಲ್ಲಿ ನಿಗಮದ ಮಂಡಳಿ ಸಭೆಯ ಅನುಮೋದನೆ ಪಡೆದು ಖಾಯಂ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡು 2010 ರಲ್ಲಿ ನಿಗಮದ ಖಾಯಂ ನೌಕರರಾಗಿ ಸೇವೆಗೆ ಸೇರಿಕೊಂಡರು.  ಆಗ  ವೇತನ ನಿಗದಿ ಮಾಡುವಾಗ ಯಾವುದೇ ವಿದ್ಯಾರ್ಹತೆ, ಅನುಭವ, ವಯಸ್ಸು ಇತರೆ ಮಾನದಂಡಗಳನ್ನು ಪರಿಗಣಿಸದೆ ತಮಗಿಷ್ಟ ಬಂದಂತೆ ರೀತಿಯಲ್ಲಿ ಪದವಿ, ಎರೆಡೆರೆಡು ಪದನಾಮಗಳನ್ನು ಹಂಚಿಕೊಂಡು  ಹಿರಿತನ ಹಾಗೂ ಇತರೆ ವಿಷಯಗಳನ್ನು  ಪರಿಗಣಿಸಿರಲಿಲ್ಲ. 2021 ರ ನವೆಂಬರ್ ನಲ್ಲಿ ಹಣಕಾಸು ಶಾಖೆಯಲ್ಲಿ ಕೆಲವು ನೌಕರರು ತಮಗೆ ಇಷ್ಟ ಬಂದಂತೆ ಹುದ್ದೆಯನ್ನು ಸೃಷ್ಟಿಸಿ ತಮಗೆ ಇಷ್ಟ ಬಂದಂತೆ ಬೇಕಾದವರಿಗೆ ಸುಮಾರು 12000 ಗಳ ವರೆಗೆ ಮೂಲ ವೇತನ ಹೆಚ್ಚಿಸಿಕೊಂಡಿದ್ದಾರೆ.  ಸ್ಟೆನೋ ಕಂ ಆಫೀಸ್ ಅಸಿಸ್ಟೆಂಟ್ ಹುದ್ದೆಯಲ್ಲಿದ್ದವರು personnal secretary  ಪ್ರಬಾರ ಹುದ್ದೆಯಲ್ಲಿ ವರ್ಷಾನುಗಟ್ಟಲೆ  ಹೆಚ್ಚಿನ ಭತ್ಯೆ ಪಡೆದುಕೊಂಡಿದ್ದಾರೆಕೇವಲ 45-90ದಿನಗಳು ಮಾತ್ರ ಅವಕಾಶವಿದೆ. ಇದೇರೀತಿ ಲೆಕ್ಕಶಾಖೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಅಸಿಸ್ಟೆಂಟ್ ಅಕೌಂಟ್ ಮ್ಯಾನೇಜರ್ ಅಂತಲೂ ವರ್ಷಗಳ ಕಾಲ ಕಾನೂನು ಬಾಹಿರವಾಗಿ ಪ್ರಭಾರ ಭತ್ಯೆ ನುಂಗಿದ್ದಾರೆ.. ಇಲ್ಲಿ ಯಾವುದೇ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಿಲ್ಲ. ಸ್ಟೆನೋ ಹುದ್ದೆಯಲ್ಲಿ ಕೆಲಸ ಮಾಡ ಬೇಕಾದರೆ ಸಂಪೂರ್ಣ ಜೂನಿಯರ್, ಮಧ್ಯಂತರ ಮತ್ತು ಸೀನಿಯರ್  ಶಾರ್ಟ್ ಹ್ಯಾಂಡ್(ಸ್ಟೆನೋ) ಅಧ್ಯಯನ ಮಾಡಿರಬೇಕು. ಪದವಿಧರರಾಗಿರಬೇಕು. ಆದರೆ ಇಂತಹ ವಿದ್ಯಾರ್ಹತೆಯೆ ಇಲ್ಲದೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇವರಿಗೆ ಬೇಕಾದಂತೆ ವೇತನ ನಿಗದಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

 

ಕರ್ನಾಟಕ ನೀರಾವರಿ ನಿಗಮದ ಬಡ್ತಿ, ವೇತನ ಬಡ್ತಿ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಈ ವರೆಗೆ ಉತ್ತರ ಬಂದಿಲ್ಲ. ನೀತಿ, ನಿಯಮಗಳನ್ನು ಉಲ್ಲಂಘಿಸಿ ಅರ್ಹರಿಗೆ ಅನ್ಯಾಯ ಮಾಡಲಾಗಿದೆ.

 

ಡಿ. ಬಾಬು, ಮಾಹಿತಿ ಹಕ್ಕು ಕಾರ್ಯಕರ್ತ  

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top