ದೇವನಹಳ್ಳಿ:ಸಭೆ ಸಮಾರಂಭಗಳಲ್ಲಿ ಪಕ್ಷದ ಎಲ್ಲ ಮುಖಂಡರು ಭಾಗವಹಿಸಿದಾಗ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ವಿಚಾರ ವಿನಿಮಯ, ಸೂಚನೆ ಸಲಹೆಗಳು ಬರುತ್ತವೆ. ಇಂತಹ ಒಗಟ್ಟು ಇದ್ದಾಗ ಮಾತ್ರ ತಾಲ್ಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳಿಯೂರು ಗ್ರಾಮದ ವಸುಂಧರಿ ರೆಸಾರ್ಟ್ ನಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಹೆಚ್.ಎಂ.ರಮೇಶ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿ, ಪಕ್ಷದ ಸಿದ್ಧಾಂತ ಹಾಗೂ ಪಕ್ಷದಲ್ಲಿ ನಿಷ್ಠೆ ಇಂದ ಇದ್ದಾಗ ಪಕ್ಷವನ್ನು ಬಲವಾಗಿ ಮಾಡಬಹುದು. ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬಹುದು. ಜೆಡಿಎಸ್ ಶಾಸಕರು, ಮುಖಂಡರು ಇರುವ ಕ್ಷೇತ್ರಗಳಲ್ಲಿ ಯಾವುದೇ ಚುನಾವಣೆಗಳಾದರೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವಂತೆ ಮಾಡುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ ಎಂಬುದನ್ನು ಸಾಬೀತು ಪಡಿಸಲು ಶ್ರಮಿಸಬೇಕಿದೆ.
ರಾಜಕೀಯ ಭವಿಷ್ಯಕ್ಕೆ ಗಾಡ್ ಫಾದರ್ ಬೇಕಿಲ್ಲ: ಪಕ್ಷದ ನಿಷ್ಠೆ ಸಿದ್ಧಾಂತಗಳಿಗೆ ನಾನು ಬದ್ಧನಾಗಿ ಕೆಲಸ ಮಾಡುತ್ತಿದ್ದು, ಮೊದಲ ಬಾರಿ ರಾಜಕೀಯ ಪ್ರವೇಶ ಮಾಡಿದರೂ ಶಿಸ್ತಿನ ಸಿಪಾಯಿಯಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿರುವುದೇ ನನಗೆ ಶ್ರೀ ರಕ್ಷೆಯಾಗಿ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದಂತಾಗಿದೆ. ಇತರೆ ಪಕ್ಷಗಳು ಬಹಳಷ್ಟು ಆಸೆ ಆಮಿಷಗಳು ಒಡ್ಡಿದರೂ ನಾನು ಇತರರ ಪಿತೂರಿಗೆ ಬಲಿಯಾಗಿಲ್ಲ.
ಅರ್ಹ ಅಭ್ಯರ್ಥಿಯ ಆಯ್ಕೆ:
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಯಾಗಿರುವ ಹೆಚ್. ಎಂ. ರಮೇಶ್ ಗೌಡ ಜಾತ್ಯಾತೀತ ನಾಯಕರು, ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಎಲ್ಲರಿಗೂ ಸ್ಪಂದಿಸುವ ಗುಣ ಹೊಂದಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ರಾಗಿರುವುದೇ ಉತ್ತಮ ಗುಣ ಎಂದು ಹೇಳಿದರೆ ತಪ್ಪಿಲ್ಲ. ಹಂತ ಹಂತವಾಗಿ ಎಲ್ಲ ಚುನಾವಣೆಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಪಕ್ಷದ ಬಲ ಪ್ರದರ್ಶಿಸಿ ಮುಂದಿನ ಮುಖ್ಯಮಂತ್ರಿ ಕುಮಾರಣ್ಣನವರನ್ನು ಮಾಡುವ ಆಶಯ ಈಡೇರುವ ಕಾಲ ಹತ್ತುರವಾಗಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಹೆಚ್. ಎಂ. ರಮೇಶ್ ಗೌಡ ಮಾತನಾಡಿ, ವಿಧಾನ ಪರಿಷತ್ ಸದಸ್ಯನಾಗಿ, ಸೆಂಟ್ರಲ್ ಬೋರ್ಡ್ ಗೆ ಮೂರು ಸಲ ನಿರ್ದೇಶಕನಾಗಿ, ಯಲಹಂಕ ಕ್ಷೇತ್ರಕ್ಕೆ ಯುವ ಘಟಕದ ಅಧ್ಯಕ್ಷನಾಗಿ, ಬೆಂಗಳೂರು ನಗರ ಘಟಕದ ಅಧ್ಯಕ್ಷ, ಜಿಲ್ಲೆಗೆ ಉಪಾಧ್ಯಕ್ಷನಾಗಿ ದೇವೇಗೌಡರ ಸಲಹೆ, ಸೂಚನೆಗಳನ್ನು ಪಾಲಿಸುತ್ತಾ ಜೆಡಿಎಸ್ ಕಾರ್ಯಕರ್ತರ ಜೊತೆ ಒಳ್ಳೆಯ ಒಡನಾಟ ಹೊಂದಿ ಪಕ್ಷದಲ್ಕು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಕುಮಾರಣ್ಣನವರ ಆಶಯದ ಮೇರೆಗೆ ಅವರ ಮಾರ್ಗದರ್ಶನ ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿ ಸಿದ್ದು, ಗೆಲ್ಲುವ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ವಿಜಯಪುರ ಹೋಬಳಿ ಅಧ್ಯಕ್ಷ ವೀರಪ್ಪ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು, ವಿಜಯಪುರ ಟೌನ್ ಅಧ್ಯಕ್ಷ ಭಾಸ್ಕರ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ವಿಜಯಪುರ ಪುರಸಭೆ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಕೇಶವಪ್ಪ, ವೆಂಕಟಗಿರಿಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಮಂಡಿಬೆಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬಿಕಾ, ಬಿಜ್ಜವಾರ ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಸ್ವಾಮಿ, ಯಲಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೊಣ್ಣೇಗೌಡ, ಐಬಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮೇಗೌಡ, ಹಾಗೂ ಪುರಸಭೆ ಮತ್ತು ಗ್ರಾಮ ಪಂಚಾಯತಿ ಗಳ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಇದ್ದರು.