ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡೋಣ ಬನ್ನಿ

ಮೇಷ ರಾಶಿ: ನಿಮ್ಮ ಆರ್ಥಿಕ ಸಮಸ್ಯೆಯು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹೊಸ ಉದ್ಯಮಕ್ಕೆ ಸೇರಿಕೊಳ್ಳುವ ಆಸೆಯು ಬರಬಹುದು. ದೂರದಿಂದ ನೋಡಲು ಎಲ್ಲವೂ ಸುಂದರವೇ. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ಒಂದೇ ವಿಚಾರವನ್ನು ನಿಮಗೆ ಮತ್ತೆ ಮತ್ತೆ ನೆನಪಿಸಬೇಕಾದೀತು. ಮಾತಿನಲ್ಲಿ ನಿಖರತೆ ಇರಲಿ. ಅಸಭ್ಯವಾಗಿ ನಿಮ್ಮ ಬಗ್ಗೆ ಮಾತನಾಡಬಹುದು.

ವೃಷಭ ರಾಶಿ : ನಿಮಗೆ ಪ್ರೀತಿಕೊಟ್ಟವರ ಬಗ್ಗೆ ಕಾಳಜಿ ಇರಲಿ. ಹಠದ ಸ್ವಭಾವವು ನಿಮಗಷ್ಟೇ ಸಂತೋಷವನ್ನು ಕೊಟ್ಟೀತು. ಇಂದಿನ ನಿಮ್ಮ ವ್ಯವಹಾರವು ಗೌಪ್ಯತೆಯಿಂದ ಇರುವುದು. ಆರ್ಥಿಕ ಸಂಕಷ್ಟವನ್ನು ಯಾರ ಸಮೀಪವೂ ಹೇಳಿಕೊಳ್ಳುವುದು ಬೇಡ. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸುವಿರಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಸದ್ಯದ ಪರಿಹಾರ.

ಮಿಥುನ ರಾಶಿ : ಇಂದು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಆತ್ಮವಿಶ್ವಾಸದಿಂದ ಇರಬೇಕಾಗುವುದು. ಸಹೋದರರು ನಿಮ್ಮಿಂದ ಹಣವನ್ನು ಸಾಲವಾಗಿ ಪಡೆಯಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವು ಸಿಗಲಿದ್ದು ರಹಸ್ಯವಾಗಿ ಇಟ್ಟುಕೊಳ್ಳುವಿರಿ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಕಳ್ಳರ ಭೀತಿಯು ಕಾಡಬಹುದು.

ಕಟಕ ರಾಶಿ : ಆತ್ಮವಿಶ್ವಾಸದ ಕೊರತೆಯು ಅತಿಯಾಗಿ ಕಾಡುವುದು. ನಿಮ್ಮ ಸಂಕಟವನ್ನು ಯಾರ ಬಳಿಯೂ ಹೇಳಿಕೊಲ್ಳದೇ ಸುಮ್ಮನಾಗುವಿರಿ. ತಂದೆಯ ಕಡೆಯಿಂದ ಸಂಪತ್ತು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ ಮಕ್ಕಳ ಆಸೆಗಳನ್ನು ಪೂರೈಸುವತ್ತ ನಿಮ್ಮ ಗಮನ ಇರಲಿದೆ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಸಾವಧಾನದ ಚಿಂತನೆಗಳು ಪ್ರಯೋಜನಕ್ಕೆ ಬಾರದು.

ಸಿಂಹ ರಾಶಿ : ನಿಮ್ಮ ಸಹಾಯದ ಮನೋಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ನಿಮ್ಮಿಂದಾಗದ ಕೆಲಸಕ್ಕೆ ಕೈಹಾಕಿ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಯಾರದೋ ಮಾತನ್ನು ಕೇಳಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ನೀವು ಅಧಿಕವಾಗಿ ಮಾತನಾಡದೇ ಮೌನವಾಗಿರುವುದು ಉತ್ತಮ. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವನ್ನು ಚರ್ಚಿಸುವಿರಿ. ಮನೋಹರವಾದ ತಾಣಗಳಿಗೆ ಹೋಗುವ ಬಯಕೆಯಾಗುವುದು.

 

ಕನ್ಯಾ ರಾಶಿ : ನಿಮ್ಮ ಆರೋಗ್ಯವು ಉತ್ತಮವಾಗುವ ನಿರೀಕ್ಷೆಯಲ್ಲಿ ಇರುವಿರಿ. ಈ ದಿನ ಪೂರ್ತಿ ಹಣಕಾಸಿನ ಚಿಂತೆಯಲ್ಲಿ ಇರುವಿರಿ. ನಿಮ್ಮ ನೇರ ನುಡಿಯಿಂದ ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಸತ್ಯವನ್ನು ಹೇಳಲು ಅಪಹಾಸ್ಯವಾಗಬಹುದು. ವ್ಯಾಪರದ ನಷ್ಟಕ್ಕೆ ಸಮಸ್ತ ತಂತ್ರವನ್ನು ಮಾಡುವಿರಿ. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ನಿಮ್ಮ ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಸ್ವಂತ ಉದ್ಯೋಗವು ಸಣ್ಣ ಪ್ರಮಾಣದ ಹಿನ್ನಡೆಯನ್ನು ಕಾಣಬಹುದು. ಔಷಧ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸುವರು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಹೆಚ್ಚಿನ ಮೌಲ್ಯವು ಸಿಗದೇಹೋಗಬಹುದು.

ತುಲಾ ರಾಶಿ : ನೂತನ ಗೃಹದ ಪ್ರವೇಶಕ್ಕೆ ನಿಮ್ಮ ಎಲ್ಲವೂ ಕೇಂದ್ರೀಕೃತವಾಗಿದೆ. ಸದ್ದಿಲ್ಲದೇ ನಿಮಗೆ ಅಗತ್ಯವಿರುವ ಕೆಲಸಗಳನ್ನುe ಮಾಡಿಸಿಕೊಳ್ಳುವಿರಿ. ಯಾರ ಜೊತೆಗೂ ವೈರವನ್ನು ಕಟ್ಟಿಕೊಳ್ಳದೇ ಹೊಂದಾಣಿಕೆಯಿಂದ ವ್ಯವಹರಿಸಿ. ಸುಲಭದ ಕೆಲಸವನ್ನು ಆದಷ್ಟು ಇಂದು ಮಾಡಿ ಮುಗಿಸಿಕೊಳ್ಳಿ. ತಂದೆ ಕಡೆಯ ಬಂಧುಗಳು ನಿಮ್ಮನ್ನು ಅಪಹಾಸ್ಯ ಮಾಡಬಹುದು. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು. ಹಳೆಯ ಖಾಯಿಲೆಗೆ ಔಷಧವು ಸಿಗದೇ ಹೋಗಬಹುದು. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ಸಂಕಷ್ಟಕ್ಕೆ ಈಡಾಗುವಿರಿ. ಆರ್ಥಿಕ ವೆಚ್ಚಕ್ಕೆ ನೀವು ಕಡಿವಾಣ ಹಾಕಿಕೊಳ್ಳಬೇಕಾದೀತು. ಹೊಸ ಯೋಜನೆಗಳನ್ನು ಹುಡುಕುವಿರಿ.

ವೃಶ್ಚಿಕ ರಾಶಿ : ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಮಾಡುವಷ್ಟು ಸಮಯವು ಇಂದು ನಿಮ್ಮ ಬಳಿ ಇಲ್ಲದೇ ಹೋಗಬಹುದು. ಕಾನೂನಾತ್ಮಕ ವಿಚಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಆತ್ಮೀಯ ಬಂಧಗಳಿಗೆ ಸಮಯ ಕೊಡಲು ಆಗದೇ ವ್ಯಕ್ತಿಗಳನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪೂರಕವಾದ ಜನರ ಗೆಳೆತನನ್ನು ಮಾಡಿಕೊಳ್ಳುವುದು ಉತ್ತಮ. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ಅಪರೂಪದ ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಇಂದು ನೀವು ಗಟ್ಟಿ ಮನಸ್ಸಿನಿಂದ ಹೋದರೂ ಕಛೇರಿಯಿಂದ ನಿಮಗೆ ಕೆಲವು ಕಹಿ ಅನುಭವವನ್ನು ಕೊಟ್ಟೀತು. ವ್ಯಾವಹಾರಿಕ ಮನಃಸ್ಥಿತಿಯಿಂದ ಎಲ್ಲವನ್ನೂ ಅಳೆಯುವುದು ಬೇಡ. ನಿಮ್ಮ ಅಸಹಜ ನಡೆಯನ್ನು ನಿಮ್ಮವರು ಒಪ್ಪಿಕೊಳ್ಳಲಾರರು.

ಧನು ರಾಶಿ : ಧನದ ಸಂಪಾದನೆಯು ಅನಿವಾರ್ಯವಾದ ಕಾರಣ ಬರುವ ಎಲ್ಲ ಕಾರ್ಯವನ್ನೂ ಬಿಡದೇ ಮಾಡುವಿರಿ. ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳಿ. ಸಾಲವು ನಿಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಪ್ರೀತಿಯನ್ನು ಹೇಳಿಕೊಳ್ಳಲು ನಿಮಗೆ ಮುಜುಗರವಾಗಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬಂದರೂ ಸಮಯೋಚಿತವಾಗಿರಲಿ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವಿರಿ.

ಮಕರ ರಾಶಿ : ನಿಮ್ಮ ದುರರ್ಭ್ಯಾಸದ ಬಗ್ಗೆ ನಿಮಗೆ ಅಸಮಾಧಾನವಾಗಬಹುದು. ಸಂಬಂಧಿಕರಿಂದ ಅನಿರೀಕ್ಷಿತ ಆನಂದವು ಸಿಗುವುದು. ಸರ್ಕಾರದ ಕೆಲಸದಲ್ಲಿ ಪೂರ್ಣವಾದ ಸಹಕಾರ ಸಿಗದು. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ. ಉತ್ತಮ ಭೂಮಿಯನ್ನು ಖರೀದಿಸಲು ನಿಮಗೆ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡಬೇಕಾದೀತು. ಒಂಟಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿನೆಯ ಕಾರಣ ನಿಮಗೆ ಎಲ್ಲರಿಂದ ಅಪಮಾನವಾಗಬಹುದು. ಕೆಲವು ಕೆಲಸಗಳನ್ನು ಕೈಬಿಡುವಿರಿ.

ಕುಂಭ ರಾಶಿ : ಬಹಳ ಚಂಚಲದಿಂದ ಇರುವ ಮನಸ್ಸಿಗೆ ಯಾವುದಾದರೂ ಇಷ್ಟವಾದ ವಿಷಯವನ್ನು ಕೊಟ್ಟು ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ದೂರದ ಊರಿಗೆ ಪ್ರಯಾಣ ಮಾಡುವ ಸಂದರ್ಭವು ಬರಲಿದ್ದು, ಅಲ್ಲಿ ಇಷ್ಟಮಿತ್ರರ ಸಹವಾಸವು ದೊರೆಯುವುದು. ನಿಮ್ಮವರನ್ನು ಕಳೆದುಕೊಳ್ಳುವ ಭೀತಿಯು ಬರಬಹುದು. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಸದೀತು. ಕಛೇರಿಯಲ್ಲಿ ನಿಮಗೆ ವಹಿಸಿದ ಕೆಲಸವನ್ನು ಮಾಡದೇ ಮೇಲಧಿಕಾರಿಗಳು ಸಿಟ್ಟುಗೊಂಡಾರು.

 

ಮೀನ ರಾಶಿ : ಇಂದು ನೀವು ಸಂತೋಷವಾಗಿ ಇರಲು ಹಠದ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕ ವಿಷಯದಲ್ಲಿ ಸಂಗಾತಿಯ ಜೊತೆ ವಾಗ್ವಾದವು ಹೊಸ ರೂಪವನ್ನು ಪಡೆಯಬಹುದು. ನಿಮ್ಮ ಬಳಿ ಸಂಘರ್ಷದ ಪರಿಹಾರಕ್ಕೆ ಬರಬಹುದು. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ. ಆಪ್ತರ ಜೊತೆ ಮಾತನಾಡಿ ನಿಮ್ಮ ಮನಸ್ಸಿನ ಭಾರವನ್ನೆಲ್ಲ ದೂರ ಮಾಡಿಕೊಳ್ಳುವಿರಿ. ನಿಮ್ಮ ನಿಯಮಗಳು ನಿಮಗೆ ತೊಂದರೆಯಾಗಬಹುದು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top