ಪರಿಸರ ಉಳಿಸೋಣ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸೋಣ

ಭಾಂದವ ಸಂಸ್ಥೆಯ ವತಿಯಿಂದ 5000 ಸಾವಿರ ಕೆರೆ ಜೇಡಿ ಮಣ್ಣಿನ ಗೌರಿ- ಗಣೇಶ ಮೂರ್ತಿ  ಗಣೇಶ ಹಬ್ಬದ ಪ್ರಯುಕ್ತ  ಜಯನಗರ ಎಲ್ಐಸಿ ಕಾಲೋನಿ ಅಮ್ಮ ಮಕ್ಕಳ ಪಾರ್ಕ್ ಹತ್ತಿರ ಸಾರ್ವಜನಿಕರಿಗೆ 5000 ಉಚಿತವಾಗಿ ಕೆರೆ ಜೇಡಿ ಮಣ್ಣಿನ ಗೌರಿ-ಗಣೇಶ ಮೂರ್ತಿಗಳ ವಿತರಣಾ ಕಾರ್ಯಕ್ರಮ .*ಶ್ರೀಮತಿ ಸೌಮ್ಯ ರೆಡ್ಡಿ* ಶ್ರೀ ಎನ್.ನಾಗರಾಜು ಮಾಜಿ ಆಡಳಿತ ಪಕ್ಷದ ನಾಯಕರು ಚಾಲನೆ ನೀಡಲಿದ್ದಾರೆ.

ಜಯನಗರ : ಎಲ್.ಐ.ಸಿ.ಕಾಲೋನಿಯಲ್ಲಿ ಅಮ್ಮ ಮಕ್ಕಳ ಪಾರ್ಕ್ ಬಳಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಜೇಡಿ ಮಣ್ಣಿನ ಪರಿಸರ ಸ್ನೇಹಿ 5000ಗೌರಿ ಗಣೇಶ ಮೂರ್ತಿಗಳನ್ನು ವಿತರಿಸುವ ಕಾರ್ಯಕ್ರಮ. ಸಾರಿಗೆ ಮತ್ತು ಮುಜಾರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿರವರು, ಮಾಜಿ ಶಾಸಕಿ ಸೌಮ್ಯರೆಡ್ಡಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜುರವರು ಪರಿಸರ ಸ್ನೇಹಿ ಮಣ್ಣಿನ ಗೌರಿ,ಗಣೇಶ ಮೂರ್ತಿಗಳನ್ನು ವಿತರಿಸಿದರು.

ಎನ್.ನಾಗರಾಜುರವರು ಮಾತನಾಡಿ ಪರಿಸರ ಉಳಿದರೆ ನಾಡು ಉಳಿಯುತ್ತದೆ, ಪರಿಸರ ನಾಶವಾದರೆ ಮಾನವ ಕುಲ ನಾಶವಾಗುತ್ತದೆ.ಪರಿಸರ ಉಳಿಸಬೇಕು ಎಂಬ ನಿಟ್ಟಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 5000ಸಾವಿರ ಜೇಡಿ ಮಣ್ಣಿನ ಗೌರಿ,ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ.ರಾಸಯನಿಕ ಬಳಸಿದ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ ಮತ್ತು ಕೆರೆ ನೀರು ಕಲುಷಿತಗೊಂಡು ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾಯ ಮತ್ತು ಮನುಷ್ಯರಿಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಪರಿಸರ ಉತ್ತಮವಾಗಿದ್ದರೆ, ಮನುಷ್ಯ ಆರೋಗ್ಯ ಉತ್ತಮವಾಗಿರುತ್ತದೆ ಅದ್ದರಿಂದ ಬಾಂದವ ಸಂಸ್ಥೆಯ ಸಹಯೋಗದಲ್ಲಿ ಕಳೆದ 11ವರ್ಷಗಳಿಂದ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸೋಣ, ಸುಂದರ ಸ್ವಚ್ಚ ಜಯನಗರ ಕ್ಷೇತ್ರ ನಿರ್ಮಾಣ ಮಾಡೋಣ ಎಂದ ಹೇಳಿದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top