ಶೋಷಿತ ಸಮುದಾಯದ ಜಾಗೃತಿ ಸಮಾವೇಶ ಯಶಸ್ವಿಗೊಳಿಸೋಣ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಶೋಷಿತ ಸಮುದಾಯದ ಜನರನ್ನು ಎವ್ಲ ರೀತಿಯಿಂದ ಮೇಲೆತ್ತುವ ಕೆಲಸ ಆಗಬೇಕಿದೆ. ಶೋಷಿತ ಸಮುದಾಯಗಳ ಜನರ ಸಂಖ್ಯೆ, ಮುಖಂಡರ ಸಂಖ್ಯೆ ದೊಡ್ಡದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.

 

ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಶೋಷಿತರ ಪರವಾಗಿ ಇದೆ. ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶ ಯಶಸ್ವಿಗೆ ನಾವೆಲ್ಲ ಶ್ರಮಿಸಲಿದ್ದೇವೆ ಎಂದು ಅವರು ತಿಳಿಸಿದರು.

ಬಳ್ಳಾರಿ ಜಿಲ್ಲೆಯ ಐದೂ ಜನ ಶಾಸಕರ ಗೆಲುವಿನಲ್ಲಿ ಶೋಷಿತ ಸಮುದಾಯಗಳ ಜನರ ಪಾತ್ರ ದೊಡ್ಡದು ಇದೆ ಎಂದು ಹೇಳಿದ ಸಚಿವ ನಾಗೇಂದ್ರ ಅವರು ಜನವರಿ 28ರ ಸಮಾವೇಶಕ್ಕೆ ಎಲ್ಲ ನೆರವು ನೀಡುತ್ತೇವೆ ಎಂದರು.

 

ಬಳ್ಳಾರಿ ಜಿಲ್ಲೆಯಲ್ಲಿ ಶೋಷಿತ ಸಮುದಾಯಗಳ ನೆರವಿಗೆ ನಾವು ನಮ್ಮ ಶಾಸಕರು, ಸಂಸದರು ಬದ್ಧರಾಗಿದ್ದೇವೆ. ಸಮಯದ ಅಭಾವ ಇದ್ದರೂ ಕೂಡ ಸಮಾವೇಶವನ್ನು ಯಶಸ್ವಿಗೊಳಿಸುವ ಎಲ್ಲ ಪ್ರಯತ್ನ ಮಾಡೋಣ ಎಂದು ಬಿ.ನಾಗೇಂದ್ರ ಹೇಳಿದರು.

ಸಮುದಾಯದ ಜನರ ಜೊತೆಗೆ ಇತಿಹಾಸದಲ್ಲಿ ಹಾಗೂ ವರ್ತಮಾನದಲ್ಲಿ ನಡೆಯುವ ಕೆಲವು ಘಟನೆಗಳನ್ನು ನೆನದಾಗ ದಿಗ್ಭ್ರಾಂತಿ ಎನಿಸುತ್ತದೆ. ಇಂದಿಗೂ ಶೋಷಿತ ಸಮುದಾಯಗಳ ಸ್ಥಿತಿ ಬದಲಾಗಿಲ್ಲ. ಹೀಗಾಗಿ ದುರ್ಬಲ ಜನರ ಜಾಗೃತಿಗಾಗಿ ಚಿತ್ರದುರ್ಗದಲ್ಲಿ ಜ.28ರಂದು ಏರ್ಪಡಿಸಲಾಗಿರುವ ಸಮಾವೇಶ ಯಶಸ್ಸಿಗೆ ನಾವೆಲ್ಲ ಶ್ರಮಿಸೋಣ ಎಂದರು.

ಮತ್ತೋರ್ವ ಶಾಸಕ  ಮಾತನಾಡಿ; ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸಮಾವೇಶ ರಾಜಕೀಯ ಉದ್ಧೇಶ ಇಲ್ಲದ ಸಮಾವೇಶ, ಈ ಸಮಾವೇಶ ಯಶಸ್ವಿ ಆಗಬೇಕು ಎಂದರು.

 

ಸಿದ್ಧರಾಮೋತ್ಸವ ಯಶಸ್ವಿಯಾದಂತೆ ಈ ಸಮಾವೇಶ ಕೂಡ ಯಶಸ್ವಿಯಾಗಬೇಕು, ಸಚಿವ ಬಿ.ನಾಗೇಂದ್ರ ಅವರು ನೀಡುವ ಸೂಚನೆಗಳಂತೆ ನಾವೆಲ್ಲ ಶಾಸಕರು ಸಮಾವೇಶಕ್ಕಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ರಾಂಪ್ರಸಾದ್, ವೆಂಕಟೇಶ ಪ್ರಸಾದ್, ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತಾ, ಉಪಮೇಯರ್ ಜಾನಕಮ್ಮ, ಬಲಿಜ ಸಮುದಾಯದ ರಮೇಶ ಬುಜ್ಜಿ, ಗೊಲ್ಲರ ಸಂಘದ ಪಿ.ಗಾದೆಪ್ಪ, ಬಂಜಾರ ಸಮುದಾಯದ ಚಂಪಾ ಚವ್ಹಾಣ, ಮಂಜುಳಾ, ಕೆರಕೋಡಪ್ಪ, ದಲಿತ ಮುಖಂಡರಾದ ಎ.ಮಾನಯ್ಯ, ರೈತ ಮುಖಂಡ ವಿ.ಎಸ್.ಶಿವಶಂಕರ್, ಮುಂಡ್ರಿಗಿ ನಾಗರಾಜ್, ಎಲ್.ಮಾರೆಣ್ಣ, ಕಣೇಕಲ್ ಮೆಹಬೂಬಸಾಬ, ಕಲೀಂ ಹಾಶ್ಮಿ, ಬೋವಿ ಸಮಾಜದ ರಾಮಾಂಜನೇಯ, ತಳವಾರ ದುರ್ಗಣ್ಣ, ನರಸಪ್ಪ, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ್, ಪ್ರಭಂಜನಕುಮಾರ್, ಪೇರಂ ವಿವೇಕ್, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಬಿಆರ್ ಎಲ್ ಸೀನಾ, ಬಳ್ಳಾರಿ ಮುಸ್ಲಿಂ ಅಂಜುಮನ್‍ನ ಇಮಾಮ್ ಗೋಡೆಕಾರ, ಮಡಿವಾಳ ಸಮುದಾಯದ ಧನಂಜಯ ಹಮಾಲ್, ಕುಡಿತಿನಿ ರಾಮಾಂಜನೇಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top