ದೇವನಹಳ್ಳಿ: ನಮ್ಮ ನಗರ ಸ್ವಚ್ಛವಾದರೆ ದೇಶ ತನ್ನಂತಾನೇ ಸ್ವಚ್ಛವಾಗುತ್ತದೆ ಎಂದು ವಿಜಯಪುರ ಪಟ್ಟಣ ಪುರಸಭೆಯ ಅಧ್ಯಕ್ಷೆ ರಾಜೇಶ್ವರಿಎಸ್.ಭಾಸ್ಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೂಬಿ ಪ್ರೌಢಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ,ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ,ಪುರಸಭೆ ವಿಜಯಪುರ,ರೂಬಿ ಆಂಗ್ಲ ಪ್ರೌಢಶಾಲೆ ವಿಜಯಪುರ, ಇನ್ಸ್ ಪೈರ್ ಇನ್ಸ್ ಸ್ಟಿಟೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ಕಾ ಲೇಜು ವಿಜಯಪುರ, ಸ್ವಾಮಿ ವಿವೇಕಾನಂದ ಐಟಿಐ ಕಾಲೇಜು ವಿಜಯಪುರ ಹಾಗೂ ಸರ್ವಿಸ್ ಸಿವಿಲ್ ಇಂಡಿಯಾ ಇಂಟರ್ ನ್ಯಾಷನಲ್ ಕರ್ನಾಟಕ ಗ್ರೂಪ್ ಇವರ ಸಂಯುಕ್ತ ಆಶ್ರಯದಲ್ಲಿ ಕ್ಲೀನ್ ಇಂಡಿಯಾ,ಸ್ವಚ್ಚ ಭಾರತದ ಈ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಪದಾರ್ಥಗಳ ನಿರ್ಮೂಲನೆ ಅಡಿಯಲ್ಲಿ ವಿಶೇಷ ಶ್ರಮದಾನ ಕಾರ್ಯಕ್ರಮ ಹಾಗೂ ಜನಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ ಮೊದಲು ನಾವು ಜನತೆಗೆ ಆರೋಗ್ಯ ಮತ್ತುನೈರ್ಮಲೀಕರಣದ ಬಗ್ಗೆ ಅರಿವು ಮೂಡಿಸ ಬೇಕು. ಸ್ವಚ್ಛತೆ ಇದ್ದಲ್ಲಿ ಆರೋಗ್ಯವು ಇರುತ್ತದೆ ಆದ್ದರಿಂದ ನಾವು ಆರೋಗ್ಯವಂತರಾಗಿ ಗಾಂಧೀಜಿಯವರು ಕಂಡ ಸ್ವಚ್ಛ ಭಾರತ ಕನಸನ್ನು ನನಸು ಮಾಡುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕೆಂದರು.
ಪಟ್ಟಣ ಪುರಸಭೆಯ ಉಪಾಧ್ಯಕ್ಷ ಎಂ.ಕೇಶವಪ್ಪ ಮಾತನಾಡಿ ಪ್ರಕೃತಿಗೂ ಮಾನವನಿಗೂ ಗಾಢ ವಾದ ಸಂಬಂಧವಿದೆ. ಅವನು ಪ್ರಕೃತಿಯಲ್ಲಿ ಹುಟ್ಟಿ, ಪ್ರಕೃತಿಯಲ್ಲಿ ಬದುಕಿ, ಪ್ರಕೃತಿ ಎಲ್ಲಿಯೇ ಮಣ್ಣ್ ನಾ ಗುತ್ತಾನೆ. ಆದ್ದರಿಂದ ತನಗೆ ಬೇಕಾದ ಎಲ್ಲ ಪ್ರತಿಫಲಗಳನ್ನು ಪ್ರಕೃತಿಯಿಂದ ಪಡೆಯುವ ಮಾನವ ತನ್ನಲ್ಲಿರುವ ಒಂದೇ ಪ್ರಕೃತಿ ಎನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯ ಹರಿವಿನ ಬಗ್ಗೆ ಜಾಥಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತ ಯುವಜನತೆಗೆ ಡಾನ್ ಗುಡ್ ಯಾನ್ ಸಂಸ್ಥೆಯವತಿಯಿಂದ ಉಚಿತ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಪಟ್ಟಣ ಪುರಸಭಾ ಸದಸ್ಯರುಗಳಾದ ಎಂ.ಬೈರೇಗೌಡ,ಸಲ್ಮಾಖಾನಮ್ ಗೌಸ್ ಖಾನ್, ನಂದಕುಮಾರ್, ಇಕ್ಬಾಲ್, ರಾಧಮ್ಮ ಪ್ರಕಾಶ್, ತಾಜ್ ಉನ್ನಿಸ ಮುಬಾರಕ್ ಪಾಷಾ, ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ಪಟ್ಟಣ ಪುರಸಭೆಯ ಪರಿಸರ ಅಭಿಯಂತರ
ಎಚ್.ಆರ್.ಮಹೇಶ್ , ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ವಿಶೇಷಾಧಿಕಾರಿ ಎಂ.ಎನ್. ಸುಂದರಮ್ಮ, ರೂಬಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೈಯದ್ ರಫೀಕ್, ರೂಬಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ನಿಖ್ಹತ್ ಸಲ್ಮಾ ,ಇನ್ಸ್ ಪೈರ್ ಇನ್ಸ್ ಸ್ಟಿಟೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್
ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಮೂರ್ತಿ, ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಶ್ರೀನಾಥ್, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕರುಡಾ.ವಿ ಪ್ರಶಾಂತ ,ಯುವ ಮುಖಂಡರಾದ ಎನ್.ನರಸಿಂಹ, ಎನ್. ಚಂದನ್ ನಾಯಕ, ಹೆಚ್.ಎಂ. ತೇಜಸ್ ಎನ್ಎಸ್ಎಸ್ ಸ್ವಯಂಸೇವಕ ಎ.ಎಂ. ಪುನೀತ್ ಹಾಗೂ ದೇವನಹಳ್ಳಿ ತಾಲೂಕಿನ ಯುವಕ ಸಂಘ ಹಾಗೂ ಯುವತಿ ಮಂಡಲಗಳ ಪದಾಧಿಕಾರಿಗಳು ಹಾಜರಿದ್ದರು.