ಕೆಲಸಗಳಿಗೆ ಪೋಸ್ ಕೊಡುವ ರಾಜಕಾರಣಿ ಮಾತ್ರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಟೀಕೆ

ಕುಷ್ಟಗಿ:- ನಾನು ಒಂದು ಬಾರಿ ಶಾಸಕನಾಗಿ ಕುಷ್ಟಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸವನ್ನು ಮಾಡಿದ್ದೇನೆ ಆದರೆ ನಾನು ಮಾಡಿರುವಂತ ಕೆಲಸವನ್ನು ನೋಡಿ ಪೋಸ್ ಕೊಡುವಂತ ಕೆಲಸವನ್ನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾಡುತ್ತಿದ್ದಾರೆ ಆದರೆ ಯಾರು ಎಷ್ಟು ಕೆಲಸವನ್ನು ಮಾಡಿದ್ದಾರೆ ಎನ್ನುವದನ್ನ ಜನರು ತೀರ್ಮಾನ ಕೊಡುತ್ತಾರೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಲಿ ಶಾಸಕರಿಗೆ ಟಾಂಗ್ ಕೊಟ್ಟರು. ಇಲ್ಲಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿ ಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು ತನ್ನ‌ ಸ್ವಾರ್ಥಕ್ಕಾಗಿ‌ ರಾಜಕೀಯ ಮಾಡುವ ಅಮರೇಗೌಡ್ರ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಆಗಾದರೆ ಏನು ಅಭಿವೃದ್ದಿ ಕೆಲಸವನ್ನು ಮಾಡಿದ್ದಾರೆ ಎನ್ನುವದನ್ನ ದಾಖಲು ಸಮೇತ ಈ ಕ್ಷೇತ್ರದ ಜನರ ಮುಂದೆ ಬಹಿರಂಗ ಪಡಿಸಲಿ ನಾನು ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ದಾಖಲು ಸಮೇತ ಜನರ ಮುಂದೆ ಬಹಿರಂಗ ಪಡಿಸುತ್ತೇನೆ ಎಂದರು. ಆದರೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ರವರು ಸಾಲ ಮಾಡಿದ್ದಾರೆ ಎಂದು‌ ಹೇಳಿಕೆ ಕೊಟ್ಟಿದ್ದು ನಿಜ ಆದರೆ ಅದೇ ಹೇಳಿಕೆಯನ್ನು ಮನಸ್ಸಿಗೆ ತೆಗೆದುಕೊಂಡು ಬೇಡವಾದ ವಿಷಯವನ್ನು ಮಾತನಾಡುವದು ಎಷ್ಟರ ಮಟ್ಟಿಗೆ ಸರಿ ಎಂದು ಟೀಕಿಸಿದರು. ಅವರ ಹಳೇ ಕ್ಷೇತ್ರದ ಕಾರ್ಯಕರ್ತರಾದ ಲಿಂಗಸೂರಿನ ಶರಣಗೌಡ ನಂದಿಹಾಳ‌ ಹತ್ತಿರ ಸಾಲ ಪಡೆದಿದ್ದಾರೆ ಎನ್ನುವ ಸತ್ಯವನ್ನು ಪೋನ್ ಮೂಲಕ ಮಾತನಾಡಿದ ಆಡಿಯೋವನ್ನ ಪ್ರೇಸ್ ಮಿಟ್ ನಲ್ಲಿ ಬಹಿರಂಗ ಪಡಿಸಿದರು.

ನಾನು ಶಾಸಕನಾಗಿದ್ದಾಗ ಮೊರಾರ್ಜಿ ಸ್ಕೂಲ್,RMSA ಸ್ಕೂಲ್, ಅತಿ ಹೆಚ್ಚು ವಾಲ್ಕೀಕಿ ಭವನ, ಮತ್ತು ಬೇರೆ ಬೇರೆ ಕೆಲಸವನ್ನು ಮಾಡಿ ಈ ತಾಲೂಕನ್ನು ಅಭಿವೃದ್ದಿ ಪಡಿಸಿ ಕುಷ್ಟಗಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಒಂದಾಲ್ಲ ಒಂದು ಕಾಮಗಾರಿಯನ್ನು ಮಾಡಿಸಿ ಅತಿ ಹೆಚ್ಚು ಅನುದಾನ ತಂದು ನಮ್ಮ ತಾಲೂಕನ್ನು ಅಭಿವೃದ್ಧಿ ಪಡಿಸಿದ್ದೇನೆ. ಆದರೆ ನಾನು ಶಾಸಕನಾಗಿದ್ದಾಗ ಪಕ್ಷಾತೀತವಾಗಿ ಕುಷ್ಟಗಿ ಪಟ್ಟಣದ ಅಭಿವೃದ್ಧಿಗೆ ಪಟ್ಟಣದ ಪ್ರಮುಖ ಎರಡು ಬೀದಿಗಳ ರಸ್ತೆಗಳಿಗೆ ಸುಮಾರು ಒಂದು ಕೋಟಿಗೂ ಹೆಚ್ಚು ಅನುದಾನವನ್ನು ನೀಡಿ ಹಾಗೂ ಪ್ರತಿವಾರ್ಡನಲ್ಲಿ ಕೆಲಸವನ್ನು ಮಾಡಿದ್ದೇನೆ ಆದರೆ ಇವತ್ತು‌ ಶಾಸಕರು ರಾಜಕೀಯ ಮಾಡುತ್ತಾ ಕುಷ್ಟಗಿ ಪಟ್ಟಣದ ಅಭಿವೃದ್ಧಿ ಮರೆತು ತಮ್ಮ ಪಕ್ಷದ ಸದಸ್ಯರಿಗೆ ಮಾತ್ರ ಅನುದಾನವನ್ನು ಕೊಟ್ಟು ಬರಿ ರಾಜಕೀಯ ಕೆಲಸವನ್ನು ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಮತ್ತು ಧೂಳು ಹರಡುತ್ತಿದೆ.ಆದರೆ ನಾನು ನಮ್ಮ ತಂದೆಯ ಕಾಲದಿಂದ ರಾಜಕೀಯವನ್ನು ಮಾಡುತ್ತಾ ಬಂದಿದ್ದೇನೆ ನಿಜ ನಾನು ಮಾನವಿಯತೆಯನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೇನೆ ಹೊರತು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರಂಗ ಮಾನವೀಯತೆ ಮರೆತು ರಾಜಕೀಯ ಮಾಡುತ್ತಿಲ್ಲ ಮತ್ತು ಯಾವುದೇ ಕಾಮಗಾರಿ ನಡೆಸಲಿ ಬರಿ ತಮ್ಮ ಕುಟುಂಬಕ್ಕೆ ಸಂಬಂಧಿಸಿದವರಿಗೆ ಟೆಂಡರ್ ಕೊಡಿಸಿ ಬರಿ ಕಳಪೆ ಕಾಮಗಾರಿ ಮಾಡಿ ಪರ್ಸೆಂಟೇಜ್ ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಾರೆ ಯಾವ ಒಬ್ಬ ತಮ್ಮ ಕಾರ್ಯರ್ತನಿಗೂ ಕೆಲಸವನ್ನು ಕೊಡದೆ ತಾವೇ ಕೆಲಸ ಮಾಡಿಸಿ ಬೀಲ್ ಒತ್ತುವಳಿ ಮಾಡುತ್ತಾರೆ ಎಂದು ಆರೋಪಿಸಿದರು.

ಆದರೆ ಕೃಷ್ಣಾ ಬೀ ಸ್ಕೀಂ ಯೋಜನೆ ನಾನು ಒಂದು ವರ್ಷದಲ್ಲಿ ಮುಗಿಯುತ್ತದೆ ಎಂದು ಹೇಳಿಲ್ಲ ಅಂತ ಅಂತವಾಗಿ ಆಗುತ್ತದೆ ಎಂದು ಹೇಳಿದ್ದೇನೆ ಆದರೆ ಕೃಷ್ಣಾ ಬೀ ಸ್ಕೀಂ ಬಗ್ಗೆ ಶಾಸಕರಿಗೆ ಎಳ್ಳಷ್ಟು ಕಾಳಜಿ ಅವರಿಗಿಲ್ಲ ಆದರೆ ಏನೇ ಇರಲಿ ಮುಂದಿನ ವಿಧಾನಸಭೆ ಚುನಾವಣೆ ಬಂದಾಗ ಶಾಸಕರಿಗೆ ಈ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು.ಪುರಸಭೆ ಅಧ್ಯಕ್ಷ ಕೆ.ಗಂಗಾಧರಯ್ಯ ಹಿರೇಮಠ, ಬಿಜೆಪಿ ಮುಖಂಡರಾದ ಅಮರೇಗೌಡ ಪಾಟೀಲ ನಾಗೂರ, ಚಂದ್ರಕಾಂತ ವಡಗೇರಿ, ಉಮೇಶ ಯಾದವ್, ವಿಜಯ ಕುಮಾರ ಹಿರೇಮಠ, ತೇಜಯ್ಯ ಗುರುವಿನ್ , ಸಂಗನಗೌಡ ಜೈನರ್, ದುರಗಪ್ಪ ವಡಗೇರಿ, ಶರಣಪ್ಪ ಚೂರಿ, ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top