ದೇವಾಲಯ ಆವರಣ ಅಚ್ಚ ಹಸಿರಾಗಿರಲಿ

ದೇವನಹಳ್ಳಿ,ಮಾ,8 : ದೇವಾಲಯಗಳ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವ ಮೂಲಕ ಬರುವ ಭಕ್ತರಿಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು ಎಲ್ಲರ ಕರ್ತವ್ಯವಾಗಿದೆ. ದೇವಾಲಯ ಆವರಣ ಅಚ್ಚ ಹಸಿರಾಗಿರಲಿ ಎಂದು ಕಾಂಗ್ರೆಸ್ ಮುಖಂಡ ಎಂ . ಸತೀಶ್ ಕುಮಾರ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಕೋಟೆಬೀದಿ ಯಲ್ಲಿರುವ ಸೋಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸಸಿಗಳು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇವಾಲಯಗಳು ಮನುಷ್ಯರ ಮನಸ್ಸಿನ ಮೇಲೆ ಎಷ್ಟು ಸಕಾರಾತ್ಮಕವಾದ ಪರಿಣಾಮವನ್ನು ಉಂಟು ಮಾಡುತ್ತವೋ , ಮರ- ಗಿಡಗಳೂ ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿ, ಆಮ್ಲಜನಕ ಪೂರೈಸಿ ಜನರ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಸಹಕಾರಿ ಯಾಗುತ್ತವೆ ಎಂದರು. ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಬಿ.ಕೆ.ದಿನೇಶ್, ರವಿ, ಮುನಿರುದ್ರಪ್ಪ, ಬಸವರಾಜ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top