ವಿಕಲಚೇತನರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಪಡೆಯಲಿ

ಕಾರಟಗಿ : ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ವಿಕಲಚೇತನರು ಯುಡಿಐಡಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಅವರು ಹೇಳಿದರು. ತಾಲೂಕಿನ ಮರ್ಲಾನಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ 7 ಜನರಿಗೆ ಯುಡಿಐಡಿ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು. ವಿಕಲಚೇತನರೆಂದು ಗುರುತಿಸಲು ಕಾರ್ಡ್ ಅತ್ಯಶ್ಯಕವಾಗಿದೆ. ಕಾರ್ಡ್ ಇದ್ದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ದೊರೆಯಲಿವೆ. ಬಸ್ ಪಾಸ್, ಮಾಶಾಸನ, ಸಾಲ ಸೌಲಭ್ಯ, ವಿದ್ಯಾರ್ಥಿ ವೇತನ, ಸಾಧನಾ ಸಲಕರಣೆಗಳು (ತ್ರೀ ಚಕ್ರ ವಾಹನ, ವ್ಹೀಲ್ ಚೇರ್ ) ಸೇರಿ ಇತರೆ ಸೌಲಭ್ಯ ಪಡೆಯಲು ಕಾರ್ಡ್ ಅಗತ್ಯವಾಗಿದೆ ಎಂದು ತಿಳಿಸಿದರು. ನರೇಗಾ ಯೋಜನೆಯಡಿ ವಿಕಲಚೇತನರಿಗೆ ಪ್ರತ್ಯೇಕ ಜಾಬ್ ಕಾರ್ಡ್ ಪಡೆಯಲು ಅವಕಾಶವಿದೆ. ಕೆಲಸದಲ್ಲಿ ಶೇ.50 ರಿಯಾಯಿತಿ ಸೌಲಭ್ಯವೂ ಇರುತ್ತದೆ. ಅರ್ಧ ಕೆಲಸ ಮಾಡಿ ಪೂರ್ತಿ ಕೂಲಿ ಪಡೆಯಬಹುದು. ಅಂಗವಿಕಲರಿಗೆ ಎಲ್ಲ ಗ್ರಾಪಂಗಳಲ್ಲಿ ಪ್ರತ್ಯೇಕ ಎನ್ ಎಂಆರ್ ತೆಗೆದು ಕೆಲಸ ನೀಡಲಾಗುವುದು. ಎಲ್ಲರೂ ನರೇಗಾ ಯೊಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸಲ್ಮಾಬೇಗಂ, ಕಾರ್ಯದರ್ಶಿ ಮಹೆಬೂಬ್, ತಾಂತ್ರಿಕ ಸಂಯೋಜಕರಾದ ಅಕ್ಷಯ್ ಅರ್ಲೂರು, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ,ಎಂಆರ್ ಡಬ್ಲ್ಯು ಮಂಜುಳಾ ಪುರಾಣಿಕಮಠ, ವಿಆರ್ ಡಬ್ಲ್ಯುಗಳಾದ ಸೋಮಶೇಖರಗೌಡ, ಪಂಪಣ್ಣ, ವಿಜಯಲಕ್ಷ್ಮೀ, ಸಾವಿತ್ರಮ್ಮ, ನಾಗರಾಜ, ಲಿಂಗೇಶ, ಶಿವಕುಮಾರ್, ವೀರೇಶ ಸೇರಿ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top