ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ನಾಯಕತ್ವ ಶೃಂಗಸಭೆ

ಹಣಕಾಸು ಉದ್ಯಮದ ಸವಾಲುಗಳನ್ನು ಎದುರಿಸಲು ಸಾಮೂಹಿಕ ಪ್ರಯತ್ನ ಅಗತ್ಯ – ಐಸಿಎಂಎ ಅಧ್ಯಕ್ಷ ಅಶ್ವಿನ್ ಜಿ ದಳವಾಡಿ

ಬೆಂಗಳೂರು : ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ [ಐಸಿಎಂಎಐ] ಉದ್ಯಮ ಸಮಿತಿಯ ಸದಸ್ಯರಿಂದ ನಗರದಲ್ಲಿಂದು  ಮೊಟ್ಟಮೊದಲ ಸಿಎಫ್ಒ   ನಾಯಕತ್ವ ಶೃಂಗಸಭೆ ಆಯೋಜಿಸಲಾಗಿತ್ತು.

ಐಸಿಎಂಎಐ ಹೊಸ ಅಧ್ಯಾಯದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಪ್ರಮುಖ ಕಾರ್ಪೊರೇಟ್‌ ಗಣ್ಯರಿಂದ ಸಿಎಫ್‌ಒಗಳು ಮತ್ತು ವಿಶೇಷ ಹಣಕಾಸು ವೃತ್ತಿಪರರ ಸಂವಾದಕ್ಕೆ ವೇದಿಕೆ ಕಲ್ಪಿಸಲಾಗಿತ್ತು.

 

ನಾಯಕತ್ವ ಶೃಂಗಸಭೆಯು ಚತುರ ಹಣಕಾಸು ವ್ಯವಸ್ಥೆಯನ್ನು ಮುನ್ನಡೆಸಲು  ಪ್ರಮುಖ ಒಳನೋಟಗಳು, ಕಾರ್ಯತಂತ್ರಗಳು ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಉದ್ಯಮ ವಲಯದ ನಾಯಕರಿಗೆ ಇದು ಪ್ರಧಾನ ವೇದಿಕೆಯಾಗಿತ್ತು. ಪಾಲುದಾರಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದನ್ನು ಕೇಂದ್ರೀಕರಿಸಿದ ಶೃಂಗಸಭೆಯು ಪರಿಣಾಮಕಾರಿ ವೆಚ್ಚ ನಿರ್ವಹಣೆಯ ಬೆಳಕಿನಲ್ಲಿ ತಮ್ಮ ಸಂಸ್ಥೆಗಳಲ್ಲಿ ಸಮರ್ಥನೀಯ ಬೆಳವಣಿಗೆ ಮತ್ತು ಯಶಸ್ಸನ್ನು ಹೆಚ್ಚಿಸಲು ಅಗತ್ಯವಾದ ಜ್ಞಾನ ಮತ್ತು ಸಾಧನಗಳೊಂದಿಗೆ ಹಣಕಾಸು ನಾಯಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ಶೃಂಗಸಭೆಯಲ್ಲಿ ಪರಿಣಿತರಿಂದ ಪ್ರಮುಖ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.  ಪ್ರಮುಖ ಚರ್ಚೆಗಳು ಮತ್ತು ಸಂವಾದಾತ್ಮಕ ರೀತಿಯಲ್ಲಿ ಸರಣಿ ಅಧಿವೇಶನಗಳು ನಡೆದವು. ಹಣಕಾಸಿನ ಅಪಾಯ ನಿರ್ವಹಣೆಯಿಂದ ಹಿಡಿದು ಹಣಕಾಸು ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ತಂತ್ರಜ್ಞಾನಗಳವರೆಗೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಇದು ಒಳಗೊಂಡಿತ್ತು. ಹೆಸರಾಂತ ತಜ್ಞರು ಮತ್ತು ಉದ್ಯಮದ ದಿಗ್ಗಜರು ಈ ಚರ್ಚೆಯಲ್ಲಿ ಪಾಲ್ಗೊಂಡು ಅಮೂಲ್ಯವಾದ ದೃಷ್ಟಿಕೋನಗಳು ಮತ್ತು ಕ್ರಿಯಾಶೀಲ ಒಳನೋಟಗಳನ್ನು ನೀಡಿದರು.

ಐಸಿಎಂಎಐ ಅಧ್ಯಕ್ಷ ಅಶ್ವಿನ್ ಜಿ ದಳವಾಡಿ ಮಾತನಾಡಿ, ಪ್ರಥಮ ಸಿಎಫ್ಒ ನಾಯಕತ್ವ ಶೃಂಗಸಭೆಗೆ ಅಗಾಧ ಪ್ರತಿಕ್ರಿಯೆ ದೊರೆತಿದೆ. ಹಣಕಾಸು ವೃತ್ತಿಪರರಿಗೆ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಹಣಕಾಸು ಉದ್ಯಮ ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳನ್ನು ಸಾಮೂಹಿಕವಾಗಿ ಪರಿಹರಿಸಲು ಇದು ಸಮರ್ಥ ವೇದಿಕೆಯಾಗಿದೆ ಎಂದರು.

 

ಸಿಎಂಎ ಟಿಸಿಎ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಹಣಕಾಸು ವಲಯದ ಮನಸ್ಸುಗಳನ್ನು ಒಂದೆಡೆ ಸೇರಿಸಿ ಸಂವಾದ ನಡೆಸಲು ಕೈಗೊಂಡಿರುವ ಪ್ರಯತ್ನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಸಿಎಫ್ಒ ನಾಯಕತ್ವ ಶೃಂಗಸಭೆಯು ಜ್ಞಾನ ಹಂಚಿಕೆಯನ್ನು ಸುಗಮಗೊಳಿಸಿದೆ. ಅರ್ಥಪೂರ್ಣ ಸಂಪರ್ಕಗಳನ್ನು ಹೊಂದಲು ಉತ್ತೇಜಿಸಿದೆ. ಇದು ಪ್ರದೇಶದಾದ್ಯಂತ ಹಣಕಾಸು ವೃತ್ತಿಪರರ ವೃತ್ತಿಯ ಅಭಿವೃದ್ಧಿ ಮತ್ತು ಪ್ರಗತಿಯನ್ನು ಬೆಂಬಲಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ನಾಯಕತ್ವ ಶೃಂಗಸಭೆಯ ಮುಂದಿನ ಆವೃತ್ತಿಗೆ ಈಗಾಗಲೇ ಯೋಜನೆ ರೂಪುಗೊಳ್ಳುತ್ತಿದ್ದು, ಹಣಕಾಸು ಸಮುದಾಯಕ್ಕೆ ಇನ್ನೂ ಹೆಚ್ಚಿನ ಒಳನೋಟಗಳು ಮತ್ತು ಸಹಯೋಗದ ಭರವಸೆ ದೊರೆಯುವ ನಿರೀಕ್ಷೆಯಿದೆ.

 

ಐಸಿಎಂಎಐ ಹಿರಿಯ ನಿರ್ದೇಶಕ ಡಿ ಪಿ ನಂದಿ, ಐಸಿಎಂಎಐ ಬೆಂಗಳೂರು ವಿಭಾಗದ ಅಧ್ಯಕ್ಷ ದೇವರಾಜುಲು ಬಿ, ಕಾರ್ಯದರ್ಶಿ ಅಭಿಜೀತ್ ಎಸ್ ಜೈನ್, ಮಾಜಿ ಅಧ್ಯಕ್ಷ ಎನ್ ರಾಮಸ್ಕಂದ, ಒಎಫ್ ಎಸ್ಎಸ್ ಎಲ್ ನ ನಿರ್ದೇಶಕ ಗೋಪಾಲ್ ರಮಣನ್ ಬಿ, ವಿವಿಧ ಕೈಗಾರಿಕೆಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top