ಇನ್ವರ್ಟರ್, ಬ್ಯಾಟರಿ ಮತ್ತು ಸೌರಶಕ್ತಿ ಉತ್ಪನ್ನಗಳ ವ್ಯಾಪಕ ಶ್ರೇಣಿ ಬಿಡುಗಡೆ

ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಪರಿಹಾರಗಳ ಬ್ರ್ಯಾಂಡ್ 'ಅಮೇಜ್'ನ ಸ್ಥಾನ ಮತ್ತಷ್ಟು ಗಟ್ಟಿ

ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಉಪಸ್ಥಿತಿಯಲ್ಲಿ ಅನಾವರಣ

ಲುಮಿನಸ್ ಪವರ್ ಟೆಕ್ನಾಲಜೀಸ್ನ ಬ್ರ್ಯಾಂಡ್ ಆಗಿರುವ ಅಮೇಜ್, ಮುಂದಿನ 3 ವರ್ಷಗಳಲ್ಲಿ ತನ್ನ ಮಾರುಕಟ್ಟೆ ಪಾಲು ಮತ್ತು ಮಾರಾಟ ಮಳಿಗೆಗಳ ಸಂಖ್ಯೆಯನ್ನು ಸಂಖ್ಯೆ ದ್ವಿಗುಣಗೊಳಿಸುವ ಗುರಿ ಹೊಂದಿದೆ

ಸುಸ್ಥಿರತೆಯ ಕುರಿತು ಮುನ್ನಡೆ ಸಾಧಿಸುವ ಮೂಲಕ, ಕಂಪನಿಯು ಸೌರಶಕ್ತಿಯ ಮೇಲೆ ಗರಿಷ್ಠ ಗಮನ ಕೇಂದ್ರೀಕರಿಸಿದ್ದು, ತನ್ನ ಅತ್ಯುತ್ತಮ ಶ್ರೇಣಿಯ ಸೌರ ಪರಿಹಾರಗಳನ್ನು ಪ್ರದರ್ಶಿಸುತ್ತಿದೆ.

ಬ್ರ್ಯಾಂಡ್ನ ಉತ್ಪನ್ನಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಅಮೇಜ್ ಉತ್ಪನ್ನ ಶ್ರೇಣಿಯನ್ನು ಆಯ್ದ ಆನ್ಲೈನ್ ರಿಟೇಲ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರಾರಂಭಿಸಲಿದೆ

ಬೆಂಗಳೂರು:  ಭಾರತದಲ್ಲಿ ವಿದ್ಯುತ್‌ ಬ್ಯಾಕಪ್ ಪರಿಹಾರಗಳ ಪ್ರಮುಖ ಪೂರೈಕೆದಾರ ಅಮೇಜ್, ಇಂದು ತನ್ನ ವ್ಯಾಪಕ ಶ್ರೇಣಿಯ ವಿದ್ಯುತ್‌ ಪರಿಹಾರಗಳನ್ನು ಅನಾವರಣಗೊಳಿಸಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇನ್ವರ್ಟರ್ ಮತ್ತು ಬ್ಯಾಟರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಮೇಜ್, ದೀರ್ಘ ಸಮಯದವರೆಗೆ ಮತ್ತು ಮೇಲಿಂದ ಮೇಲೆ ವಿದ್ಯುತ್ ಕಡಿತ ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ ಇನ್ವರ್ಟರ್‌ಗಳು, ಬ್ಯಾಟರಿಗಳು ಮತ್ತು ಸೌರ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ನೀಡುತ್ತದೆ. ಭಾರತದಾದ್ಯಂತ ತನ್ನ ಅಸ್ತಿತ್ವ ಬಲಪಡಿಸುವ ಗುರಿಯೊಂದಿಗೆ, ಕಂಪನಿಯು ಆಯ್ದ ಆನ್‌ಲೈನ್ ರಿಟೇಲ್‌ ವ್ಯಾಪಾರದಲ್ಲಿ ತನ್ನ ಉತ್ಪನ್ನ ಶ್ರೇಣಿಯನ್ನು ಪರಿಚಯಿಸುತ್ತಿದೆ. ದೇಶದ 2 ಮತ್ತು 3ನೇ ಹಂತದ ನಗರಗಳಲ್ಲಿ ತನ್ನ ಸಂಭಾವ್ಯ ಗ್ರಾಹಕರಿಗೆ ಅಮೇಜ್‌ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡಲಿದೆ. ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸಮಾರಂಭದಲ್ಲಿ ಖ್ಯಾತ ಕ್ರಿಕೆಟ್‌ ಆಟಗಾರ ವಿರಾಟ್ ಕೊಹ್ಲಿ, ಲುಮಿನಸ್‌ ಪವರ್‌ ಟೆಕ್ನಾಲಜೀಸ್‌ನ ತಂಡವು – ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಪ್ರೀತಿ ಬಜಾಜ್ ಸೇರಿದಂತೆ  ಹಿರಿಯ ಉಪಾಧ್ಯಕ್ಷೆ ಮತ್ತು ಮುಖ್ಯ ಕಾರ್ಯತಂತ್ರ, ಪರಿವರ್ತನೆ ಮತ್ತು ಮಾರುಕಟ್ಟೆ ಅಧಿಕಾರಿ ನೀಲಿಮಾ ಬುರ್ರಾ, ವಿದ್ಯುತ್‌ ಪರಿಹಾರಗಳ ವಹಿವಾಟಿನ ಹಿರಿಯ ಉಪಾಧ್ಯಕ್ಷ ಮತ್ತು ಕಂಟ್ರಿ ಹೆಡ್ ಅಮಿತ್ ಶುಕ್ಲಾ ಹಾಗೂ ಅಮೇಜ್‌ ಎನರ್ಜಿ ಸೊಲುಷನ್ಸ್ ಬಿಸಿನೆಸ್‌ನ ಉಪಾಧ್ಯಕ್ಷ  ರಾಜೇಶ್ ಕಲ್ರಾ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಲುಮಿನಸ್ ಪವರ್ ಟೆಕ್ನಾಲಜೀಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪ್ರೀತಿ ಬಜಾಜ್ ಅವರು, ‘ಅಮೇಜ್ ತನ್ನನ್ನು ಗರಿಷ್ಠ-ಕಾರ್ಯನಿರ್ವಹಣೆಯ,  ಇಂಧನ ದಕ್ಷತೆ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಸ್ಥಾಪಿಸಿಕೊಂಡಿದೆ. ನಿರಂತರ ವಿದ್ಯುತ್ ಪೂರೈಕೆಯೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಶಕ್ತಿ ತುಂಬಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ರಿಟೇಲ್‌ ಮತ್ತು ವಿದ್ಯುತ್‌ ವಲಯದ ಬೆಳವಣಿಗೆಯ ಮುಂದಿನ ಅಲೆಗೆ ಗ್ರಾಹಕರ ಹೆಚ್ಚಿನ ಖರೀದಿ ಶಕ್ತಿಯ ನೆರವಿನಿಂದ 2 ಮತ್ತು 3ನೇ ಶ್ರೇಣಿಯ ನಗರಗಳು ಸಾಕ್ಷಿಯಾಗುತ್ತಿವೆ.  ನಾವೀನ್ಯತೆ, ಸುಸ್ಥಿರತೆ ಮತ್ತು ವಿಸ್ತರಣೆಯ ಮೇಲೆ ಕಾರ್ಯತಂತ್ರದ ಗಮನ ಕೇಂದ್ರೀಕರಿಸಿರುವ ಅಮೇಜ್, ಭಾರತದಲ್ಲಿನ ವಿದ್ಯುತ್‌ ಶಕ್ತಿ ಬಳಕೆಗೆ ಸಂಬಂಧಿಸಿದಂತೆ  ಗಮನಾರ್ಹ ಪರಿಣಾಮ ಬೀರಲು ಸಿದ್ಧವಾಗಿದೆ. ಮುಂದಿನ 3 ವರ್ಷಗಳಲ್ಲಿ ನಮ್ಮ ಮಾರುಕಟ್ಟೆ ಪಾಲು ಮತ್ತು ಮಾರಾಟ ಮಳಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ನಮ್ಮ ಗುರಿಯಾಗಿದೆ.  ವಿಸ್ತಾರವಾದ ವಿತರಣಾ ಜಾಲ ಬಳಸಿಕೊಂಡು, ಹೆಚ್ಚಿನ ಸಾಮರ್ಥ್ಯದ ಇನ್ವರ್ಟರ್‌ಗಳು ಮತ್ತು ಸೌರಶಕ್ತಿ ಪರಿಹಾರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದರೊಂದಿಗೆ ನಮ್ಮ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

 

‘ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ಭಾರತವು ಸುಸ್ಥಿರ ವಿದ್ಯುತ್ ಜಾಲ ನಿರ್ಮಿಸುವ ಹಾದಿಯಲ್ಲಿದೆ. ಸುಸ್ಥಿರ ಶಕ್ತಿಯು ಅಗತ್ಯವಾಗುತ್ತಿರುವ ಸದ್ಯದ ಜಗತ್ತಿನಲ್ಲಿ, ಮನೆಮಾಲೀಕರಿಂದ ಹಿಡಿದು ಸಣ್ಣ ಉದ್ಯಮಗಳವರೆಗೆ ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು  ಸೌರಶಕ್ತಿ ಪರಿಹಾರಗಳನ್ನೂ ಅಮೇಜ್ ಅಭಿವೃದ್ಧಿಪಡಿಸಿದೆ. ಭೂಮಿಯ ಪರಿಸರ ರಕ್ಷಣೆಗೆ ಕೊಡುಗೆ ನೀಡುವಾಗ ತಮ್ಮ  ವಿದ್ಯುತ್‌  ಬಳಕೆಯ ಬಗ್ಗೆ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಲು ನಾವು ನಮ್ಮ ಗ್ರಾಹಕರನ್ನು  ಸಬಲೀಕರಣ ಮಾಡುತ್ತಿದ್ದೇವೆ” ಎಂದೂ ಪ್ರೀತಿ ಬಜಾಜ್ ಅವರು ಹೇಳಿದ್ದಾರೆ.

ಅಮೇಜ್ ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು,  ‘ನಾನು ಅಮೇಜ್ ಕುಟುಂಬದ ಭಾಗವಾಗಲು ತುಂಬಾ ಸಂತೋಷಪಡುತ್ತೇನೆ. ಉತ್ಸಾಹ ಮತ್ತು ವಿಶ್ವಾಸಾರ್ಹತೆ ನಾನು ಬ್ರ್ಯಾಂಡ್‌ ಜೊತೆಗೆ ಹಂಚಿಕೊಳ್ಳುವ ಸಾಮಾನ್ಯ ಸಂಗತಿಗಳಾಗಿವೆ. ಯಾವಾಗಲೂ ಒಳ್ಳೆಯದಕ್ಕೆ ಶ್ರಮಿಸುವುದು ಇದರ ಉದ್ದೇಶವಾಗಿದೆ. ಭಾರತದಲ್ಲಿನ ಮನೆಗಳು ಮತ್ತು  ಉದ್ದಿಮೆಗಳಿಗೆ ವಿಶ್ವಾಸಾರ್ಹ ಮತ್ತು ದಕ್ಷ ಪವರ್ ಬ್ಯಾಕ್-ಅಪ್ ಅನ್ನು ಅಮೇಜ್ ನೀಡುವುದನ್ನು ಮುಂದುವರಿಸಲಿದ್ದು, ಅದರಿಂದ  ಅವರೆಲ್ಲ ತಮ್ಮ ಕೆಲಸ – ಕಾರ್ಯಗಳನ್ನು ಅಡೆತಡೆಯಿಲ್ಲದೆ ಮುಂದುವರಿಸಬಹುದು ಎನ್ನುವುದು ನನ್ನ ಅನಿಸಿಕೆಯಾಗಿದೆ’ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು, 2018ರಿಂದ ಅಮೇಜ್ ಬ್ರ್ಯಾಂಡ್‌ ಜೊತೆಗೆ ಸಂಬಂಧ ಹೊಂದಿದ್ದಾರೆ.  ವರ್ಷಗಳಿಂದ ಕಂಪನಿಯ  ಮಾರುಕಟ್ಟೆ ಮತ್ತು ಸಾಮಾಜಿಕ ಪ್ರಚಾರಗಳ ಅವಿಭಾಜ್ಯ ಅಂಗವಾಗಿದ್ದಾರೆ.  ನಂಬಿಕೆ ಮತ್ತು ಕಾರ್ಯಕ್ಷಮತೆಗೆ ಬ್ರ್ಯಾಂಡ್ ಅಮೇಜ್ ಇನ್ನೊಂದು ಹೆಸರಾಗಿದೆ.  ಇದು ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವದ ಜೊತೆಗೆ ಸಂಪೂರ್ಣವಾಗಿ ಅನುರಣಿಸುವ ಗುಣಗಳಾಗಿವೆ. ಅವರು ಆಕಾಂಕ್ಷೆಗಳನ್ನು ಈಡೇರಿಸುವ ಮತ್ತು ಕನಸುಗಳನ್ನು ನನಸಾಗಿಸುವ ಮೂರ್ತರೂಪವಾಗಿದ್ದಾರೆ. ಕ್ರಿಕೆಟ್‌ ಆಟದ ಬಗೆಗಿನ ಅವರ ಉತ್ಸಾಹವು ಅಮೇಜ್‌ನ ಮುಖ್ಯ ಮೌಲ್ಯಗಳೊಂದಿಗೆ ಪ್ರತಿಧ್ವನಿಸುತ್ತದೆ ಮತ್ತು ಗ್ರಾಹಕರ ಕೇಂದ್ರಿಕತೆಯತ್ತ ಸಾಗುತ್ತದೆ.

 

ವಿದ್ಯುತ್ ಪೂರೈಕೆಯಲ್ಲಿನ ಅಸ್ತವ್ಯಸ್ತತೆಯಿಂದ ಸಂಕಷ್ಟಕ್ಕೆ ಸಿಲುಕುವ ಗ್ರಾಹಕರು ಮತ್ತು ಉದ್ದಿಮೆಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಮೇಜ್ ಶ್ರೇಣಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನಗಳು ಮನೆ ಮತ್ತು ಸಣ್ಣ ವಾಣಿಜ್ಯ ಸಂಸ್ಥೆಗಳಿಗೆ ಸುಧಾರಿತ ಉನ್ನತ-ಸಾಮರ್ಥ್ಯದ ಇನ್ವರ್ಟರ್‌ಗಳು  ಜೊತೆಗೆ ದೀರ್ಘಾವಧಿಯ ಮತ್ತು ಭಾರಿ -ಡ್ಯೂಟಿ ಬ್ಯಾಟರಿಗಳನ್ನು ಒಳಗೊಂಡಿರಲಿವೆ. ಸೌರ ಶಕ್ತಿ ಪರಿಹಾರಗಳ ಅತ್ಯುನ್ನತ ಶ್ರೇಣಿಯು ಸೌರ ಇನ್ವರ್ಟರ್‌ಗಳು, ಸಿ10 ರೇಟೆಡ್ ಸೌರ ಬ್ಯಾಟರಿಗಳು ಮತ್ತು ಅತ್ಯಾಧುನಿಕ ಸೌರ ಫಲಕಗಳನ್ನು ಒಳಗೊಂಡಿರಲಿವೆ. ಇವುಗಳನ್ನು ದೃಢವಾದ ನಿರ್ಮಾಣ ಗುಣಮಟ್ಟ ಮತ್ತು ಸುಧಾರಿತ ತಂತ್ರಜ್ಞಾನಗಳೊಂದಿಗೆ ತಯಾರಿಸಲಾಗಿದೆ. ಅಮೇಜ್ ಉತ್ಪನ್ನಗಳನ್ನು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಸಮಯದಲ್ಲಿ ತಡೆರಹಿತ ವಿದ್ಯುತ್ ಬ್ಯಾಕಪ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಮನೆಗಳು,  ಉದ್ದಿಮೆಗಳು ಮತ್ತು ಪ್ರಮುಖ ಸಾಧನಗಳ ಸುಗಮ ಕಾರ್ಯನಿರ್ವಹಣೆಯನ್ನು ಈ ಉತ್ಪನ್ನಗಳು ಖಾತ್ರಿಪಡಿಸಲಿವೆ. ಹೊಸ ಶ್ರೇಣಿಯ ಸೌರ ಇನ್ವರ್ಟರ್‌ಗಳನ್ನು ವಿವಿಧ ಬಗೆಯ ಗ್ರಾಹಕರ ಅಗತ್ಯಗಳಿಗೆ ಹೆಚ್ಚಿನ ಕಾರ್ಯಕ್ಷಮತೆ ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Facebook
Twitter
LinkedIn
WhatsApp
Email
Print
Telegram
Tumblr

Leave a Comment

Your email address will not be published. Required fields are marked *

Translate »
Scroll to Top