ಭಾರತದಲ್ಲಿ ಪ್ರಪ್ರಥಮ ಬಾರಿಗೆ  ಶಿಕ್ಷಕ  ಮತ್ತು  ವಿದ್ಯಾರ್ಥಿ  ಪಾಲ್ಗೊಳ್ಳುವಿಕೆ  ಸಮ್ಮಿಳಿತಗೊಳಿಸುವ  ಕ್ರಾಂತಿಕಾರಿ  ಶೈಕ್ಷಣಿಕ  ಆಪ್  ಬಿಡುಗಡೆ

ಬೆಂಗಳೂರು: ಶಿಕ್ಷಣ ಕ್ಷೇತ್ರ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಪ್ರತ್ಯೇಕವಾಗಿ ಸೇವೆ ಸಲ್ಲಿಸುತ್ತಿರುವ ಶೈಕ್ಷಣಿಕ ಆಪ್ಗಳಿಂದ ತುಂಬಿ ಹೋಗಿದೆ. ಆದರೆ, ಇವೆಲ್ಲಕ್ಕಿಂತ ವಿಶಿಷ್ಟವಾಗಿ ರೂಪುಗೊಂಡಿರುವುದು ಈಡೆನ್ ಎಡ್ಜ್ ಜೀನಿಯಸ್ಆಪ್.  ಏಕೆಂದರೆ, ದತ್ತಾಂಶ ಆಧಾರಿತವಾಗಿರುವ ಈ ಅಪ್ ಯಾವುದೇ ತಡೆಗಳಿಲ್ಲದ ಬೋಧನೆ ಮತ್ತು ಕಲಿಕೆಯ ಅನುಭವವನ್ನು ಜೊತೆಯಾಗಿ ನೀಡುವ ವೇದಿಕೆಯಾಗಿದೆ. ಆ ಮೂಲಕ ಕಲಿಕೆ ಹಾಗು ಬೋಧನೆಯಲ್ಲಿ ಹೊಸ ನಾವಿನ್ಯತೆಗೆ ನಾಂದಿ ಹಾಡಿದೆ.

          ಈ ಹೊಸ ಅಪ್ಲಿಕೇಶನ್ ವಿಶಿಷ್ಟತೆ ಅಂದರೆ, ಅದು ಕಲಿಕೆ ಹಾಗು ಬೋಧನೆಯ ವಿಧಾನವನ್ನು ನವೀನ ತಂತ್ರಜ್ಞಾನ ಮೂಲಕ ಇನ್ನಷ್ಟು ಸುಲಲಿತಗೊಳಿಸುತ್ತದೆ. ದತ್ತಾಂಶ ಆಧಾರಿತ ಒಳನೋಟಗಳ ಮೂಲಕ ಅದು ಶೈಕ್ಷಣಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿ ಹಾಡಿದೆ.

 

          ಶೈಕ್ಷಣಿಕ ತಂತ್ರಜ್ಞಾನ ಕ್ಷೇತ್ರದ ಪರಿಣಿತರಾದ ಜಿ. ವಿಜಯ್ ಕುಮಾರ್ ಅವರ ಪ್ರಕಾರ, ಜೀನಿಯಸ್ ಎಲ್ಲಾ ಹಂತಗಳ ಬಳಕೆದಾರರಿಗೆ ಕಲಿಕೆಯನ್ನು ಖಾತ್ರಿ ಪಡಿಸುವ ಮೂಲಕ, ಹೊಸ ಬಗೆಯ ಕಲಿಕಾ ಅನುಭೂತಿ ನೀಡುತ್ತದೆ. ಜೊತೆಗೆ, ಇದನ್ನು ಬಳಸಲು ಕನಿಷ್ಠ ತರಬೇತಿಯ ಅಗತ್ಯ ಮಾತ್ರ ಇದ್ದು, ಇದು ಒಂದು ಅರ್ಥಗರ್ಭಿತ ಇಂಟರ್ಫೇಸ್ ಮೂಲಕ ವಿದ್ಯಾರ್ಥಿಗಳನ್ನು ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಅವಕಾಶ ನೀಡುತ್ತದೆ.

ಇದು ವಿದ್ಯಾರ್ಥಿಗಳು ಉತ್ಸಾಹದಿಂದ, ಸ್ವಯಂ ಪ್ರೇರಣೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ವೇದಿಕೆಯಾಗಿದ್ದು, ಇದರಲ್ಲಿ ಅವರು ವೈಯಕ್ತೀಕರಿಸಿದ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಾರೆ. ಜೊತೆಗೆ ಶಿಕ್ಷಕರಿಗೆ ಜೀನಿಯಸ್ ವೈಜ್ಞಾನಿಕ ಕೆಲಸದ ಹರಿವು ಮತ್ತು ದತ್ತಾಂಶ ಚಾಲಿತ ಒಳನೋಟಗಳನ್ನು ನೀಡುತ್ತದೆ”.

     ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳಲ್ಲಿ ಅಸೈನ್ಮೆಂಟ್ಗಳ ರಚನೆ, ಸಮರ್ಥವಾಗಿ  ಪೂರೈಸುವುದು, ನಿರ್ವಹಣೆ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆಯ ವಿತರಣೆಯಲ್ಲಿ ಸವಾಲುಗಳು ಇರುತ್ತವೆ. ಜೀನಿಯಸ್ ಈ ಸವಾಲುಗಳನ್ನು ವಿಶಿಷ್ಟ ಕಲಿಕೆಯ ಮಾದರಿಗಳ ಮೂಲಕ ಸರಳಗೊಳಿಸಿದೆ. ಬಹು ಪ್ರಶ್ನೆ ಪ್ರಕಾರಗಳನ್ನು (ಸರಿ / ತಪ್ಪು, ಮುಕ್ತ ಪ್ರಶ್ನೆಗಳು ಮತ್ತು ಹೆಚ್ಚಿನವು), ತಡೆರಹಿತ ಸಲ್ಲಿಕೆ ವ್ಯವಸ್ಥೆ ನಿರ್ವಹಣೆ, ಸರಳೀಕೃತ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಒಳಗೊಂಡಿರುವ ಸರಳ ವೇದಿಕೆಯನ್ನು ಇದು ಸೃಷ್ಟಿಸಿದೆ.

          ಈ ಎಲ್ಲಾ ಉಪಕ್ರಮಗಳು, ಪೇಪರ್ಗಳ ಅಗತ್ಯವನ್ನು ನಿವಾರಿಸುತ್ತದೆ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ನೈಜ ಸಮಯದ ಮೇಲ್ವಿಚಾರಣೆಯನ್ನು ಮಾಡುತ್ತದೆ. ಈ ವಿವರಗಳನ್ನು ವಿವರವಾದ ಗ್ರಾಫ್ಗಳು ಮತ್ತು ವರದಿಗಳ ಮೂಲಕ ಅದು ಸೃಷ್ಟಿಸುತ್ತದೆ. ಇದರ ಜೊತೆಗೆ ತಮ್ಮ ಬೋಧನಾ ವಿಧಾನಗಳನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಬಯಸುವ ಶಿಕ್ಷಕರಿಗೆ ಇದು ದತ್ತಾಂಶ ಆಧಾರಿತವಾಗಿ ನಿರ್ಧಾರ ಮಾಡುವ ಸಾಧನಗಳನ್ನು ಒದಗಿಸುತ್ತದೆ.

          ಈಡೆನ್ಎಡ್ಜ್ನ ಜೀನಿಯಸ್ ಶೈಕ್ಷಣಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಒಂದು ಮಾದರಿ ಬದಲಾವಣೆಯನ್ನು ಗುರುತಿಸುತ್ತದೆ. ಇದು ಕಲಿಕೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸರಿ ಸಾಟಿಯಿಲ್ಲದ, ಸಮಗ್ರ ಪರಿಹಾರವನ್ನು ಒದಗಿಸುತ್ತದೆ. ನಾವೀನ್ಯತೆ, ಸೇರ್ಪಡೆಗೊಳ್ಳುವಿಕೆ ಮತ್ತು ದಕ್ಷತೆಯನ್ನು ಸಂಯೋಜಿಸುವ ಮೂಲಕ, ಜೀನಿಯಸ್ ಡಿಜಿಟಲ್ ಶಿಕ್ಷಣ ಯುಗದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ನಡುವಣ ಸಮನ್ವಯವನ್ನು ಇನ್ನಷ್ಟು ಉತ್ತಮಗೊಳಿಸುವಿಕೆಯ ಮೂಲಕ, ಕಲಿಕಾ ಪ್ರಗತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ಶ್ರೀಕಾರ ಹಾಕಲಿದೆ.

 

www.edenedge.in , info@edenedge.in, Ph : +91  94823 47321

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top