ವರ್ಷಪೂರ್ತಿ ಬಿಸಿನೀರು ಪಡೆಯುವ ಅತ್ಯಾಧುನಿಕ ಸೋಲಾರ್ ವಾಟರ್ ಹೀಟರ್ ಗಳ ಬಿಡುಗಡೆ

ಶುದ್ಧ ಇಂಧನ ಇಂದಿನ ಅಗತ್ಯ – ಎಂ.ಎಸ್.ಐ.ಎಲ್ ವ್ಯವಸ್ಥಾ[ಪಕ ನಿರ್ದೇಶಕ ಮನೋಜ್ ಕುಮಾರ್

ಬೆಂಗಳೂರು:  ನ್ಯೂಟೆಕ್ ಸೋಲಾರ್ ಸಂಸ್ಥೆಯಿಂದ ಗೀಸರ್ ಗಳ ಅವಶ್ಯಕತೆಗಳಿಲ್ಲದೇ,  ಬೇಸಿಗೆ, ಚಳಿ, ಮಳೆಗಾಲ ಒಳಗೊಂಡಂತೆ  ವರ್ಷ ಪೂರ್ತಿ ಸರ್ವಋತುವಿನಲ್ಲೂ ಬಿಸಿನೀರು ಪಡೆಯುವ ಅತ್ಯಾಧುನಿಕ ಸೋಲಾರ್ ಹೀಟರ್ ಗಳನ್ನು ಎಂ.ಎಸ್.ಐ.ಎಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಬಿಡುಗಡೆ ಮಾಡಿದರು.

 

ಮಾಗಡಿ ರಸ್ತೆಯ ಗಂಧದ ಕಾವಲ್ ಬಳಿಯ ಎಬಿಎಸ್ ಕೈಗಾರಿಕಾ ಬಡಾವಣೆಯಲ್ಲಿ “ನ್ಯೂಟೆಕ್ ಕಾರ್ಪೋರೆಟ್ ಕಚೇರಿ” ಉದ್ಘಾಟಿಸಿ, ಹೊಸ ತಂತ್ರಜ್ಞಾನದ ಸೋಲಾರ್ ವಾಟರ್ ಹೀಟರ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನ್ಯೂಟೆಕ್ ಸೋಲಾರ್ ಕಂಪೆನಿ ಜೊತೆ ಎಂ.ಎಸ್.ಐ.ಎಲ್ ಶುದ್ಧ ಇಂಧನಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಹವಾಮಾನ ಬದಲಾವಣೆ ದೃಷ್ಟಿಯಿಂದ ಇಂಗಾಲ ಹೊರ ಸೂಸುವಿಕೆ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಶುದ್ಧ ಇಂಧನ ಈಗಿನ ಅಗತ್ಯವಾಗಿದೆ. ಹಾಲಿ ತಾಂತ್ರಿಕತೆಯಲ್ಲಿ ಹೆಚ್ಚು ಸೌರ ವಿದ್ಯುತ್ ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದರು.

ನ್ಯೂಟೆಕ್ ಸೋಲಾರ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಕುಮಾರ್ ಮಾತನಾಡಿ, ಇಡೀ ದೇಶದಲ್ಲಿಯೇ ಅತ್ಯಂತ ವಿನೂತನ, ಹೊಸದಾಗಿ ಪೇಟೆಂಟ್ ಹೊಂದಿರುವ ಸೋಲಾರ್ ವಾಟರ್ ಹೀಟರ್ ಗಳು ಬಿಡುಗಡೆಯಾಗಿವೆ. ಒಂದು ಮೀಟರ್ ಎತ್ತರದ ಏರ್ ವೆಂಟ್ ಗಳನ್ನು ಅಳವಡಿಸಲಾಗಿದ್ದು, ಇದರಿಂದ ದಕ್ಷತೆ ಹೆಚ್ಚಾಗಿ, ನೀರು ಆವಿಯಾಗುವ ಪ್ರಮಾಣ ಕಡಿಮೆ ಇರಲಿದೆ. ತಮ್ಮದೇ ಆದ ತಂತ್ರಜ್ಞಾನದಿಂದ ಇದನ್ನು ಅಭಿವೃದ್ಧಿಪಡಿಸಿದ್ದು, ಸೌರ ವಿದ್ಯುತ್ ವಲಯದಲ್ಲಿ ಇದೊಂದು ನಾವೀನ್ಯತೆಯ ಪರಿಹಾರವಾಗಿದೆ ಎಂದರು.

 

ಇದರಲ್ಲಿ ಡಿಜಿಟಲ್ ಕಂಟ್ರೋಲ್ಡ್, ಆಪ್ ಕಂಟ್ರೋಲ್ಡ್, ರಿಮೋಟ್ ಕಂಟ್ರೋಲ್ಡ್ ವ್ಯವಸ್ಥೆಯನ್ನು ಸಹ ಅವಳಡಿಸಿದ್ದು,  ಬಿಸಿಲು ಇಲ್ಲದ ಸಂದರ್ಭದಲ್ಲಿ 6 ರಿಂದ 8 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲೂ ನೀರು ಕಾಯಿಸಬಹುದಾಗಿದೆ. ಎಲೆಕ್ಟ್ರಿಕ್ ಸಾಧನದ ಮೂಲಕ ಸಮಯ ನಿಗದಿ ಮಾಡಿದರೆ ನಿಗದಿತ ಕಾಲಕ್ಕೆ ಬಿಸಿ ನೀರು ದೊರೆಯಲಿದೆ. ಈ ಉತ್ಪನ್ನ ಬಳಸಿದರೆ ಗೀಜರ್ ಅಗತ್ಯವಿಲ್ಲ. ರಿಮೋಟ್ ಮೂಲಕ ಸೆಟ್ ಮಾಡಿದರೆ ಪೈಪ್ ನಲ್ಲಿರುವ ತಣ್ಣೀರು ಸಂಪ್ ಗೆ ವಾಪಸ್ ಹೋಗುತ್ತದೆ. ನೀರು ಪೋಲಾಗುವುದನ್ನು ತಪ್ಪಿಸಬಹುದಾಗಿದೆ. ಮೂರು ಸೆಕೆಂಡ್ ಗಳಲ್ಲಿ ಬಿಸಿ ನೀರು ದೊರೆಯಲಿದೆ.  ನ್ಯೂಟೆಕ್ ಸೋಲಾರ್ ಪರಿಕರಗಳು ಐ.ಎಸ್.ಐ ಮಾನ್ಯತೆ ಹೊಂದಿದ್ದು, ಶೇ 80 ರಷ್ಟು ಗೃಹ ಬಳಕೆ ಗ್ರಾಹಕರಿಗೆ, ಶೇ 20 ರಷ್ಟು ಹೋಟೆಲ್ ಗಳು, ಲಾಡ್ಜ್ ಗಳು, ಕೈಗಾರಿಕೆಗಳು ಮತ್ತಿತರೆ ವಲಯಗಳಿಗೆ ನಮ್ಮ ಪರಿಕರಗಳನ್ನು ಪೂರೈಸಲಾಗುತ್ತಿದೆ. ಈವರೆಗೆ ಸಂಸ್ಥೆಯಿಂದ 4 ಲಕ್ಷ ಸೌರ ಪರಿಕರಗಳನ್ನು ಅಳವಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಳ್ಳೂರಿನ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ನ್ಯೂಟೆಕ್ ಸಂಸ್ಥೆಯ ನಿರ್ದೇಶಕರಾದ ಸುಶ್ಮಿತಾ ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು

 

ರೈಟ್ ಚಾನೆಲ್ ಅಡ್ವಟೈಸಿಂಗ್ ಏಜೆನ್ಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿತು

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top