ಪ್ಯಾರಾಚೂಟ್ ಅಡ್ವಾನ್ಸ್ಡ್ ನಿಂದ ಹೊಸ ಹೇರ್ ಆಯಿಲ್ “ಸಂಪೂರ್ಣ” ಬಿಡುಗಡೆ

ನೆಲ್ಲಿಕಾಯಿ, ದಾಸವಾಳ, ಅಲೋವೆರಾ, ಮೆಂತ್ಯ ಮತ್ತು ಕರಿಬೇವಿನ ಎಲೆಗಳಿಂದ ಕೂಡಿದ ತೈಲ

ಬೆಂಗಳೂರು : ಮಾರಿಕೊ ಲಿಮಿಟೆಡ್‌ನ ಪ್ರೀಮಿಯಂನ ಕೂದಲು ಪುಷ್ಠೀಕರಣ  ಬ್ರಾಂಡ್ ಆದ ಪ್ಯಾರಾಚೂಟ್ ಅಡ್ವಾನ್ಸ್ಡ್ನಿಂದ ಕೂದಲ ಆರೈಕೆಯಲ್ಲಿ ತನ್ನ ನವೀನ ಆವಿಷ್ಕಾರವಾದ – ಪ್ಯಾರಾಚೂಟ್ ಅಡ್ವಾನ್ಸ್ಡ್  ಸಂಪೂರ್ಣ ಹೇರ್ ಆಯಿಲ್ – ಅನ್ನು ಅನಾವರಣಗೊಳಿಸಿದೆ. ಮೊದಲಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ಯಾರಾಚೂಟ್ ಅಡ್ವಾನ್ಸ್ಡ್ ಸಂಪೂರ್ಣ ಹೇರ್ ಆಯಿಲ್ ಗ್ರಾಹಕರಿಗೆ ದಪ್ಪವಾದ, ಉದ್ದನೆಯ ಮತ್ತು ಕಪ್ಪಾದ ಕೂದಲನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ಪರಿಹಾರವನ್ನು ನೀಡುವ ಮೂಲಕ ಕೂದಲಿನ ಆರೈಕೆಯಲ್ಲಿ ಬದಲಾವಣೆ ತರಲು ಸಿದ್ಧವಾಗಿದೆ. ಈ ರೀತಿಯ ವಿಶಿಷ್ಟ ಉತ್ಪನ್ನವು ತೆಂಗಿನಕಾಯಿಯ ವಿಶ್ವಾಸಾರ್ಹ ಉತ್ತಮತೆಯನ್ನು ಐದು ವಿಶೇಷ ಗಿಡಮೂಲಿಕೆಗಳಾದ – ನೆಲ್ಲಿಕಾಯಿ, ದಾಸವಾಳ, ಅಲೋವೆರಾ, ಮೆಂತ್ಯ ಮತ್ತು ಕರಿಬೇವಿನ ಎಲೆಗಳ ಸಮೃದ್ಧಗೊಳಿಸುವ ಗುಣಗಳೊಂದಿಗೆ ಸಂಯೋಜಿಸುತ್ತದೆ, ಹಾಗೂ ಕೂದಲಿಗೆ ಬೇಕಾದ “ಹೆಚ್ಚುವರಿ ಕಾಳಜಿ” ಯನ್ನು ಒದಗಿಸುತ್ತದೆ.

ಮಾರಿಕೋ ಲಿಮಿಟೆಡ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಸೋಮಶ್ರೀ ಬೋಸ್ ಅವಸ್ಥಿ ಮಾತನಾಡಿ, ವೇಗದ ಜೀವನಶೈಲಿಯಲ್ಲಿ, ಕೂದಲು ಸುಂದರ ಮತ್ತು ಆರೋಗ್ಯವಾಗಿರಲು ‘ಹೆಚ್ಚುವರಿ ಆರೈಕೆ’ಯ ಅಗತ್ಯವಿದೆ ಮತ್ತು ತೆಂಗಿನಕಾಯಿಯ ಪೋಷಕ ಶಕ್ತಿಯನ್ನು ಐದು ಅಸಾಧಾರಣ ಗಿಡಮೂಲಿಕೆಗಳಾದ ನೆಲ್ಲಿಕಾಯಿ, ದಾಸವಾಳ, ಅಲೋವೆರಾ, ಮೆಂತ್ಯ  ಮತ್ತು ಕರಿಬೇವಿನ ಎಲೆಗಳೊಂದಿಗೆ ಸಂಯೋಜಿಸುವ ಮೂಲಕ ಪ್ಯಾರಾಚೂಟ್ ಅಡ್ವಾನ್ಸ್ಡ್ ಸಂಪೂರ್ಣ ಕರಾರುವಾಕ್ಕಾಗಿ ಅದನ್ನೇ ನೀಡುತ್ತಿದೆ ಎಂದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top