ಕನ್ನಡನಾಡು ವಾರ್ತೆ, ಸಂಡೂರು: ಮಾ: 23: 105 ನೇ ಹುಟ್ಟು ಹಬ್ಬ ಆಚರಿಸಿ ಕೊಂಡ ಶತಾಯುಷಿ ದೊಡ್ಡಮನೆ ಕರೆಮ್ಮ ತಾಲೂಕಿನ ಕುರೇಕುಪ್ಪ ಗ್ರಾಮದ ದೊಡ್ಡ ಮನೆ ಕುಟುಂಬದ ದಿವಂಗತ ಲಿಂಗಪ್ಪ ನವರ ಪತ್ನಿ ಶ್ರೀಮತಿ ಕರೆಮ್ಮ ಇವರಿಗೆ 104 ವರ್ಷಗಳು ತುಂಬಿದ್ದು, ದೊಡ್ಡ ಮನೆ ಕುಟುಂಬದವರು ಸಂಭ್ರಮದಿಂದ 105 ನೇ ಹುಟ್ಟುಹಬ್ಬ ಆಚರಿಸಿ, ಕರೆಮ್ಮ ರವರಿಂದ ಕೇಕ್ ಕಟ್ ಮಾಡಿಸಿ ಸಿಹಿ ಹಂಚಿದ್ದಾರೆ, ಈ ಸಂದರ್ಭದಲ್ಲಿ ಕುಟುಂಬದ ಮತ್ತು ಗ್ರಾಮದ ಸುಮಾರು ಎರಡು ನೂರು ಜನರು ಹಾಜರಾಗಿದ್ದು, ಶುಭ ಹಾರೈಸಿದರು.

ಅವರ ಮಗ ಪುರಸಭೆ ಸದಸ್ಯರಾದ ದೊಡ್ಡ ಮನೆ ಕಲ್ಗುಡೆಪ್ಪ ಅವರು ಕರೆಮ್ಮ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಶುಭ ಕೋರಿದರು, ಲಿಂಗಪ್ಪ ಮತ್ತು ಕರೆಮ್ಮ ದಂಪತಿಗಳಿಗೆ 13 ಜನ ಮಕ್ಕಳು, ಇವರಿಗೆ 47 ಜನ ಮೊಮ್ಮಕ್ಕಳು ಇದ್ದು, 21 ಜನ ಮರಿಮೊಮ್ಮಕ್ಕಳು ಇದ್ದಾರೆ. ಹಿರಿಯ ಜೀವದ ಕರೆಮ್ಮ ಅವರು ಈಗಲೂ ಆರೋಗ್ಯ ದಿಂದ ಇದ್ದಾರೆ. ಈ ಸಂದರ್ಭದಲ್ಲಿ ದೊಡ್ಡ ಮನೆ ಕಲ್ಗುಡೆಪ್ಪ, ನಾಗದೇವಪ್ಪ, ಶಿವಪ್ಪ, ನಾಗಪ್ಪ, ದೇವಮ್ಮ,ಷಣ್ಮುಖಮ್ಮ, ಚನ್ನಬಸಮ್ಮ, ಗಂಗಮ್ಮ, ಶ್ರೀದೇವಿ, ಗಂಗಮ್ಮ ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು