ಸೌಲಭ್ಯ ಕಾಣದ ಕುಂದಲಗುರ್ಕಿ ಶಾಲೆ‌

ಚಿಕ್ಕಬಳ್ಳಾಪುರ ; ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಕ್ತ ನಿರ್ವಹಣೆ ಇಲ್ಲದೆ ಅವಸಾನದಂಚಿಗೆ ತಲುಪಿದೆ. ಶಾಲೆಯಲ್ಲಿ ಪ್ರಸ್ತುತ ಮೂಲ ಸೌಕರ‍್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಸ್‌ಡಿಎಂಸಿ ಕಮಿಟಿಯನ್ನು ಪರಿಗಣಿಸದೆ ಏಕಪಕ್ಷೀಯವಾಗಿ ನಿರ್ಧಾರಗಳು ತೆಗೆದುಕೊಂಡ ಶಿಕ್ಷಕಿ ವಿಜಯಕುಮಾರಿ ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಬೇಜವಬ್ದಾರಿಯಿಂದ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಹಲವು ಅನುಮಾನಗಳು ಕಾಡುವಂತಾಗಿದೆ. ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು

ಶಾಲೆಯ ಮುಖ್ಯ ಶಿಕ್ಷಕಿಯ ಮೇಲೆ ಕ್ರಮ ಕೈಗೊಂಡು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಸೊಣ್ಣಪ್ಪ ಆಗ್ರಹಿಸಿದರು. ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ. ಗಬ್ಬುನಾರುತ್ತಿರುವ ಶೌಚಾಲಯಗಳ ಸ್ವಚ್ಛತೆಯನ್ನ ಮಕ್ಕಳ ಕೈಯಲ್ಲಿ ಮಾಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಿ ಅನುದಾನವನ್ನ ದುರುಪಯೋಗ ಮಾಡಿಕೊಂಡು ಆವರಣದಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸದೆ ಪೋಷಕರು ಮತ್ತು ಕಮಿಟಿಯ ಸದಸ್ಯರೊಂದಿಗೆ ಸೌಜನ್ಯನಿಂದ ನಡೆದುಕೊಳ್ಳದೆ ಪ್ರತಿಯೊಂದಕ್ಕೂ ಉಡಾಫೆ ಉತ್ತರಗಳು ನೀಡುತ್ತಾ ಶಾಲಾ ಅಭಿವೃದ್ಧಿ ಮಾಡುವಲ್ಲಿ ಕುಂದಲಗುರ್ಕಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ವಿಜಯಕುಮಾರಿ ಅವರು ವಿಫಲರಾಗಿದ್ದರೆಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಾಯಿತ್ರಮ್ಮ ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಗರಿಳಿಗೆ ದೂರನ್ನು ದಾಖಲಿಸಿದ್ದರು.

ದೂರನ್ನು ಪರಿಗಣಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಭೂತ ಸೌಕರ್ಯಗಳನ್ನು ಮೂರು ದಿನಗಳಲ್ಲಿ ಕಲ್ಪಿಸಿಕೊಡುತ್ತೇನೆ ಹಾಗೂ ಶಿಕ್ಷಕಿ ವಿರುದ್ಧ ಸೂಕ್ತಕ್ರಮ ಜರುಗಿಸುತ್ತೇನೆಂದು ಭರವಸೆಯನ್ನು ನೀಡಿ. ಒಂದು ತಿಂಗಳಾದರೂ ಒಂದು ಮೂಲಭೂತ ಸೌಲಭ್ಯವನ್ನು ಒದಗಿಸಲಿಲ್ಲ ಹಾಗೂ ಶಿಕ್ಷಕಿ ವಿರುದ್ಧ ಕ್ರಮವನ್ನು ಜರುಗಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ನಾವು ಸ್ಥಳ ಪರಿಶೀಲಿಸಿದಾಗ ಅಲ್ಲಿನ ಲೋಪದೋಷಗಳನ್ನು ಕಂಡು ಅಲ್ಲಿನ ಅವ್ಯವಸ್ಥೆ ಬಗ್ಗೆ ಎರಡು ಮೂರು ದಿಗಳಲ್ಲೇ ಸಭೆ ನಡೆಸಿ ಅವರಿಗೆ ಸ್ಪಂದಿಸಿದ್ದಿವಿ ಹಾಗೂ ಮುಖ್ಯ ಶಿಕ್ಷಕಿಯನ್ನು ಈಗಾಗಲೇ ವರ್ಗಾವಣೆಗೆ ಆದೇಶ ನೀಡಿದ್ದಿವಿ. ನನಗೆ ಯಾವುದೇ ರೀತಿಯಾಗಿ ಜಾತಿ ನಿಂದನೆ ಕಾಣಿಸಿಲ್ಲ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯಲು ಉತ್ತರಿಸಿದರು. ಈ ಮನವಿಗೆ ವಿದ್ಯಾರ್ಥಿಗಳಿಗೆ ಹಾಗೂ ಊರಿನ ಗ್ರಾಮಸ್ಥರಿಗೆ ನ್ಯಾಯ ಒದಗಿಸುತ್ತಾರೂ ಕಾದುನೋಡಬೇಕಾಗಿದೆ ಸಂದರ್ಭದಲ್ಲಿ ಗ್ರಾಮಸ್ಥರಾದ ಅಶ್ವಥ್ಥಪ್ಪ, ನರಸಿಂಹಪ್ಪ, ಚಿಕ್ಕಪಾಪಣ್ಣ, ಸೊಣ್ಣಪ್ಪ, ಮಾದೇಶ್, ಮುನಿಕೃಷ್ಣ, ಮತ್ತಿತರರು ಹಾಜರಿದ್ದರು.

ವರದಿ ಮಾನಸ್,

Leave a Comment

Your email address will not be published. Required fields are marked *

Translate »
Scroll to Top