ಕೊಪ್ಪಳ: ತಾಲೂಕಿನ ಶ್ರೀಹುಲಿಗೇಮ್ಮ ದೇವಸ್ಥಾನದಲ್ಲಿ ಶ್ರೇಯಸ್ ಕೆ. ಮಂಜು ಅಭಿನಯದ ‘ರಾಣ’ ಚಿತ್ರದ ಸಾಂಗ್ ಲಿರಿಕ್ಸ್ ವಿಡಿಯೋ ನಟ ಧ್ರುವ ಸರ್ಜಾ ಮಂಗಳವಾರ ಬಿಡುಗಡೆಗೊಳಿಸಿದರು.

ನಟ ಧ್ರುವ ಸರ್ಜಾ ಮಾತನಾಡಿ, ಶ್ರೇಯಸ್ ಹೆಸರಿನಲ್ಲೇ ಶ್ರೇಯಸ್ಸು ತಂದೆಯನ್ನು ಮೀರಿಸಿದ ಮಗ ಶ್ರೇಯಸ್ ಆಗುತ್ತಾನೆ, ನನ್ನ ಅತ್ಮೀಯ ಸ್ನೇಹಿತ ಪ್ರತಿಯೊಬ್ಬರೂ ಕಲಾವಿದರನ್ನು ಬೆಳೆಸಬೇಕು ಕಲಾವಿದನಿಗೆ ಸಾವು ಇದೆ ಆದ್ರೆ ಕಲೆಗೆ ಅಲ್ಲ ನನ್ನ ಪ್ರೇರಣೆ ನನ್ನ ಅಣ್ಣ ಎಲ್ಲಾ ಅಭಿಮಾನಿಗಳ ಸಾಮಾಜಿಕ ಜಾಲತಾಣಗಳಲ್ಲಿ ರಾಣಾ ಚಿತ್ರದ ಸಾಂಗ್ ಲಿರಿಕ್ಸ್ ವಿಡಿಯೋ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ. ರಾಣ ಚಿತ್ರದ ಝಲಕ್ ಚೆನ್ನಾಗಿದೆ. ವಿಷ್ಣು ಪ್ರಿಯದಲ್ಲಿ ಸಾಫ್ಟ್ ಹುಡುಗನ ಪಾತ್ರ. ಇಲ್ಲಿ ಟೆರರ್‍ಯಾಗಿ ನಾಯಕ ನಟ ಕಾಣಸಿಕೊಂಡಿದ್ದಾನೆ. ಇಂಥ ಮುಗ್ಧ ಮುಖದಲ್ಲಿ ನಿರ್ದೇಶಕರು ವೈಲೆಂಟ್ ತೋರಿಸಿದ್ದಾರೆ. ತುಂಬ ಚೆನ್ನಾಗಿ ತಯಾರಿ ಮಾಡಿಕೊಂಡಿರುವುದು ಕಾಣುತ್ತಿದೆ. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.

ರಾಣಾ ಚಿತ್ರದ ನಿರ್ಮಾಪಕ ಗುಜ್ಜಲ್ ಪುರೋಶೋತ್ತಮ ಮಾತನಾಡಿ, ಹುಲಿಗೆಮ್ಮ ದೇವಿಯ ಪರಮಭಕ್ತ ನಾನು ಸಮೀಪದ ಹೊಸಪೇಟೆಯವನು. ಈ ಮಣ್ಣಿನಲ್ಲಿಯೇ ಶ್ರೀಹುಲಿಗೆಮ್ಮ ದೇವಿ ಸಾಂಗ್ ರಿಲಿಜ್ ಮಾಡಬೇಕು ಎಂದುಕೊಂಡಿದ್ದೆ, ಅದು ನಿಮ್ಮ ಮುಂದೆ ಇಟ್ಟಿದ್ದೇನೆ ಪ್ರೋತ್ಸಾಹಿಸಿ, ಬೆಳಿಸಬೇಕು ಎಂದರು. ಕಾರ್ಯಕಮದಲ್ಲಿ ನಿರ್ಮಾಪಕ ಕೆ.ಮಂಜು, ನಿರ್ದೇಶಕ ನಂದಕಿಶೋರ್, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರ, ಶ್ರೀಹುಲಿಗೆಮ್ಮ ದೇವಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ಸುತ್ತಗುಂಡಿ, ಚಿತ್ರದುರ್ಗ ಡಿವೈಎಸ್ಪಿ ಗಣೇಶ.ಎಸ್.ಎಸ್., ಜಿ.ಎನ್.ವೆಂಕಟೇಶ, ಮುನಿರಾಬಾದ್ ಪಿಎಸ್‍ಐ ಸುಪ್ರೀತ್ ಪಾಟೇಲ್, ಉಪಸ್ಥಿತರಿದ್ದರು. ಈ ವೇಳೆ ತಮ್ಮ ನೆಚ್ಚಿನ ನಾಯಕ ನಟನಾದ ಧ್ರುವ ಸರ್ಜಾನನ್ನು ನೋಡಲು ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಯಿತು, ನೆಚ್ಚಿನ ನಟನ ಮಾತನಾಡಿಸಲು, ಸೆಲ್ಪಿ ತೆಗೆದುಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಪೊಲೀಸರು ಹರಸಾಹಸ ಪಡಬೇಕಾಯಿತು.