ಬಹಿರಂಗ ಹರಾಜು ಪ್ರಕ್ರಿಯೆ ಅವಧಿ ಮುಗಿದ ಬಳಿಕ ಆರಂಭ ಪೌರಾಯುಕ್ತರ ನಿರಂಕುಶ ಆಡಳಿತಕ್ಕೆ ಹಿಡಿದ ಕೈಗನ್ನಡಿ

ಗಂಗಾವತಿ : ಬೀದಿ ಬದಿ ವ್ಯಾಪಾರಸ್ಥರಿಗೆ ಸಂಬಂಧಿಸಿದಂತೆ ೧೧:೫೦ ಗಂಟೆಗೆ ಜರುಗಬೇಕಿದ್ದ ಬಹಿರಂಗ ಹರಾಜು ಪ್ರಕ್ರಿಯೆಯಯು, ಸಭೆಯ ಅಧ್ಯಕ್ಷರು, ಸದಸ್ಯರು ಮತ್ತು ಬೀದಿ ಬದಿ ವ್ಯಾಪಾರಸ್ಥರ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಸಂಜೆ ಐದು ಗಂಟೆ ಹತ್ತು ನಿಮಿಷಕ್ಕೆ ಆರಂಭಮಾಡಿದ್ದನ್ನು ಗಮನಿಸಿದ ಮಾಜಿ ನಗರಸಭಾ ಸದಸ್ಯ ಹುಸೇನಪ್ಪ ಹಂಚಿನಾಳ ಪೌರಾಯುಕ್ತರ ನಿರಂಕುಶ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.ಅಧಿಕೃತ ಪ್ರಕಟಣೆಯಲ್ಲಿ ಬೆಳಿಗ್ಗೆ ೧೧.೫೦ಕ್ಕೆ ಎಂದು ಹೇಳಲಾಗಿದ್ದು, ಬಹಿರಂಗ ಹರಾಜು ಪ್ರಕ್ರಿಯೆ ಮಾತ್ರ ಸಂಜೆ ೦೫.೩೦ ಕ್ಕೆ ನಡೆಸುವ ಉದ್ದೇಶವಾದರೂ ಏನು ಮಾಜಿ ನಗರಸಭಾ ಅಧ್ಯಕ್ಷರಾದ ಕಮಲಿ ಬಾಬಾ ಅವರು ನಗರಸಭೆ ಪೌರಾಯುಕ್ತರಿಗೆ ಪ್ರಶ್ನೆ ಮಾಡಿದಾಗ ನಗರಸಭೆ ಪೌರಾಯುಕ್ತರು ಏಕವಚನದಲ್ಲಿ ಅವರಿಗೆ ನಿಂದಿಸಿರುವುದು ಕಂಡು ಬಂದಿದೆ.
ನಗರಸಭೆ ಅಧಿಕಾರಿ ಅರಿವಿನ ಜಮಖಂಡಿಯವರು, ಗಂಗಾವತಿ ನಗರದಲ್ಲಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ ಎಂಬ ಆರೋಪಗಳೂ ಕೂಡ ಕೇಳಿಬಂದಿದ್ದು, ಜೊತೆಗೆ ಯಾವುದೇ ಸದಸ್ಯರಿಗೆ ತಿಳಿಸದೆ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನದ ಹುತ್ತ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.


ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೌರಾಯುಕ್ತರ ಗಮನಕ್ಕೆ ತಂದರು ಅವೆಲ್ಲವನ್ನೂ ನಿರಾಕರಿಸಿ ಪ್ರಕ್ರಿಯೆಗೆ ಮುಂದಾಗಿರುವದರ ಬಗ್ಗೆ ತಾವು ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಸಹಾಯಕ ಆಯುಕ್ತರು ಹಾಗೂ ಕೊಪ್ಪಳದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಎರಡು ದಿನದಲ್ಲಿ ನಗರಸಭೆ ಅಧ್ಯಕ್ಷರು ರಾಜಿನಾಮೆ ನೀಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪೌರಾಯುಕ್ತರು ಇದನ್ನೇ ಬಂಡವಾಳವನ್ನಾಗಿ ಮಾಡಿ ಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅಲ್ಲಿನ ಸಂಘಟಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top