ದೆಹಲಿ,ಜನವರಿ,25 : 2022 ರ ಇದೇ ಜನವರಿ 26 ರಂದು ನವದೆಹಲಿಯ ಕೆಂಪುಕೋಟೆಯ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ( NSS ) ದಕ್ಷಿಣ ಭಾರತದ ತಂಡವನ್ನು ಮುನ್ನೆಡಸಲು ಕರ್ನಾಟಕದಿಂದ ಲೆಫ್ಟ್ ವಿಂಗ್ ಕಮಾಂಡರ್ ಆಗಿ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿಯಾಗಿದ್ದು ಚಿತ್ರದುರ್ಗ ನಗರದ ಎಂ.ರಕ್ಷಿತಾ ಕೋಟೆ ನಾಡಿನ ಕೀರ್ತಿ ಹೆಚ್ಚಿಸಿದ್ದಾಳೆ.
ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಪಂಥ ಸಂಚಲನ ಕಠಿಣ ತರಬೇತಿಯಲ್ಲಿ ಪಲ್ಗೊಂಡಿರುವ ಎಂ. ರಕ್ಷಿತಾ ಕರ್ನಾಟಕ ರಾಜ್ಯದ ಐದು ಬಾಲಕಿಯರಲ್ಲಿ ಒಬ್ಬಳಾಗಿ, ದಾವಣಗೆರೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಏಕೈಕ ವಿದ್ಯಾರ್ಥಿಯಾಗಿ ಚಿತ್ರದುರ್ಗದ SRS ಪಧವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಪಂಥ ಸಂಚಲನ ತಂಡವನ್ನು ಲೆಪ್ಟ್ ವಿಂಗ್ ಕಮಾಂಡರ್ ಅಗಿ ಮುನ್ನೆಡೆಸುವ ಅವಕಾಶ ಪಡೆದಿದ್ದು ಚಿತ್ರದುರ್ಗಕ್ಕೆ ಹೆಮ್ಮೆಯ ಸಂಗತಿ.