ಕುಷ್ಟಗಿ : ನಮ್ಮ ಕನ್ನಡ ನಾಡಿನ ಕನ್ನಡ ಬಾಷೆ ರಾಷ್ಟ್ರೀಯ ಭಾಷೆ ಯಾಗಿ ಹೊರ ಹೊಮ್ಮಬೇಕು ಎಂದು ಸಾಹಿತಿ ಹಾಗೂ ಪತ್ರಕರ್ತ ಕಿಶನ್ ರಾವ್ ಕುಲಕರ್ಣಿ ಹೇಳಿದರು.ಇಲ್ಲಿನ ಬಸವ ಭವನದಲ್ಲಿ ಏರ್ಪಡಿಸಲಾಗಿದ್ದ ಕುಷ್ಟಗಿ ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಇವರ ಸಂಯುಕ್ತಾಶ್ರದಲ್ಲಿ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಉಪನ್ಯಾಸ ನೀಡಿ ಮಾತನಾಡಿದ ಅವರು ಕನ್ನಡ ಭಾಷೆ ಎಂಬುವದು ಇದು ಸಂಖ್ಯೆತ ಭಾಷೆಯಾಗಿ ಉಳಿಯಬೇಕು ಆದರೆ ನಮ್ಮ ರಾಜ್ಯದಲ್ಲಿನ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಬರಿಕೆ ಮಾಡಿ ಕನ್ನಡ ಮಾತನಾಡುತ್ತಾರೆ ಆದರೆ ಹಳ್ಳಿಯ ಪ್ರದೇಶದಲ್ಲಿ ಜನ ತಮ್ಮ ಹಳ್ಳಿ ಭಾಷೆಯಲ್ಲಿ ನಮ್ಮ ರೈತಾಪಿ ವರ್ಗದ ಜನರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ ಆದ್ದರಿಂದ ಈ ಒಂದು ಕನ್ನಡ ಭಾಷೆ ಅನಕ್ಷರಸ್ಥರಲ್ಲಿ ಸಾಹಿತ್ಯ ಹುಟ್ಟಿ ಬರಬೇಕಾಗಿದೆ ಇಂತಹ ಕನ್ನಡ ಕಾರ್ಯಕ್ರಮಗಳು ಹೊಬಳಿ ಮತ್ತು ಹೆಚ್ಚು ಜನ ಸಂಖ್ಯೆ ಹೊಂದಿರುವಂತ ಹಳ್ಳಿಗಳಲ್ಲಿ ನೆಡೆಯಬೇಕು ಹಾಗೂ ಅನಕ್ಷರಸ್ಥರಲ್ಲಿ ಸಾಹಿತ್ಯ ತುಂಬುವಂತ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಎಚ್.ವಾಯ್ ಈಟಿಯವರ್ ಮಾತನಾಡಿದರು. ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ನಿವೃತ್ತಿ ಪ್ರಾಚಾರ್ಯರಾದ ಟಿ.ಬಸವರಾಜ, ಜಿಲ್ಲಾ ಪ್ರತಿನಿಧಿ ಎನ್.ವೈ ಕಡೆಮನಿ, ಪರಿಷತ್ತಿನ ಗೌರವ ಕಾರ್ಯಧರ್ಶಿ ಮಹೇಶ್ ಹಡಪದ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.