ಹೊಸ ಚಿತ್ರನಿರ್ಮಾಪಕರನ್ನು ಪ್ರೋತ್ಸಾಹಿಸಿದರೆ ಮಾತ್ರ ಕನ್ನಡ ಚಿತ್ರರಂಗ ಉಳಿಯಲಿದೆ – ಚಲನಚಿತ್ರ ವಾಣಿಜ್ಯ ಮಂಡಳಿ ಸಂಘದ ಅಧ್ಯಕ್ಷ ಎಂ.ಎಸ್. ಸುರೇಶ್

ಬೆಂಗಳೂರು : ಕನ್ನಡ ಚಿತ್ರೋದ್ಯಮ ಉಳಿದು ಬೆಳೆಯಬೇಕಾದರೆ ಹೊಸ ನಿರ್ಮಾಪಕರನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಘದ ಅಧ್ಯಕ್ಷ ಎಂ.ಎಸ್. ಸುರೇಶ್ ಹೇಳಿದ್ದಾರೆ.

 

ನಗರದ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಉದಯ ಬಾನು ಪಾಕ್ಷಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಹಿರಿಯ ಪತ್ರಕರ್ತರಾದ ನಂಜುಂಡಪ್ಪ.ವಿ, ಚಂದ್ರಶೇಖರ್ ಮತ್ತಿರತರಿಗೆ ಮಾಧ್ಯಮ ಸೇವಾ ರತ್ನ ಸೇರಿ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸಿನೆಮಾ ರಂಗ ಅಮೋಘವಾಗಿ ಬೆಳೆದಿದ್ದು, ಸಿನೆಮಾ ಕ್ಷೇತ್ರಕ್ಕೆ ಮಾಧ್ಯಮದ ಕೊಡುಗೆ ಅಪಾರ. ಪ್ರತಿ ವರ್ಷ 400 ಹೊಸ ಸಿನೆಮಾ ಮೂಡಿ ಬರುತ್ತಿವೆ. ಕನ್ನಡ ಚಲನ ಚಿತ್ರೋದ್ಯಮ ಹೊಸ ನಿರ್ಮಾಪಕರ ಮೇಲೆ ಅವಲಂಬಿತವಾಗಿದೆ. ಚಿತ್ರರಂಗಕ್ಕೆ ಬರುವ ಹೊಸ ನಿರ್ಮಾಪಕರನ್ನು ಪ್ರೋತ್ಸಾಹಿಸಿದರೆ ಮಾತ್ರ ಚಿತ್ರರಂಗ ಉಳಿಯಲಿದೆ ಎಂದರು.

ಚಿತ್ರನಟ ಮೂಗೂರು ಸುರೇಶ್ ಮಾತನಾಡಿ. ಪತ್ರಿಕೆಗಳು‌ ಸಮಾಜದ ಕನ್ನಡಿಅಧಿಕಾರದ ಚುಕ್ಕಾಣಿ ಹಿಡಿದವರು ಜನ ಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಬೇಕು. ಬದುಕಿನಲ್ಲಿ ಮನುಷ್ಯ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕು. ಇಲ್ಲವಾದಲ್ಲಿ ಸುಮ್ಮನಿರಬೇಕು. ಅನ್ಯಾಯಕ್ಕೆ ಮಾತ್ರ ಯಾವುದೇ ಕಾಣಕ್ಕೂ ಕುಮ್ಮಕ್ಕು ನೀಡಬಾರದು ಎಂದರು.

 

ಚಿತ್ರನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಹಿರಿಯ ಚಿತ್ರನಟರಾದ ವೈಜನಾಥ ಬಿರಾದಾರ್, ಭಾಗ್ಯಶ್ರೀ, ಪತ್ರಿಕೆ ಸಂಪಾದಕರಾದ ಮಲ್ಲಿಕಾರ್ಜುನ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top