ಮಂಡಿ: 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿಯಿಂದ ಸ್ರ‍್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಗೆಲುವು ಸಾಧಿಸಿದ್ದಾರೆ. ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ಹಾಕಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸ್ಥಾನವನ್ನು ಗೆದ್ದಿದ್ದಾರೆ. ಕಂಗನಾ ರಣಾವತ್ 516382 ಮತಗಳನ್ನು ಪಡೆಯುವ ಮೂಲಕ 71663 ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಐಎನ್‌ಸಿಯ ವಿಕ್ರಮಾದಿತ್ಯ ಸಿಂಗ್ ಅವರು 444719 ಮತಗಳೊಂದಿಗೆ ಹಿಂದುಳಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಮಂಡಿಯು ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ. ಇದು (ಹಿಮಾಚಲ ಪ್ರದೇಶ) ನನ್ನ ‘ಜನ್ಮಭೂಮಿ’. ನಾನು ಪ್ರಧಾನಿ ನರೇಂದ್ರ ಮೋದಿಯ ಹೆಸರಿನಲ್ಲೇ ಗೆಲುವು ಕಂಡಿದ್ದೇನೆ. ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಹಾಗಾಗಿ, ನಾನು ಗೆದ್ದ ಬಳಿಕ ಮುಂಬೈಗೆ ಹೋಗುತ್ತಿಲ್ಲ. ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರತಿಸ್ರ‍್ಧಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುವ ಮೂಲಕ ಇಲ್ಲಿಂದ ಹೊರಡಬಹುದು ಎಂದು ಹೇಳುವ ಮೂಲಕ ಬಾಲಿವುಡ್ಗೆ ಗುಡ್ಬೈ ಹೇಳುವ ಸೂಚನೆ ನೀಡಿದ್ದಾರೆ.
ಕಂಗನಾ ಬಿಜೆಪಿ ಪಕ್ಷಕ್ಕೆ ಸೇರಿದಾಗಿನಿಂದ ಅವರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸನಾತನ ಮೌಲ್ಯಗಳನ್ನು ರಕ್ಷಿಸಲು ಮೋದಿ ರ‍್ಕಾರದ ಬದ್ಧತೆಯ ಬಗ್ಗೆ ಅವರು ಮತದಾರರಿಗೆ ಭರವಸೆ ನೀಡಿದ್ದರು. ನರೇಂದ್ರ ಮೋದಿ ಅಧಿಕಾರದಲ್ಲಿರುವವರೆಗೂ ರ‍್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದ್ದರು.
37 ವರ್ಷದ ಬಾಲಿವುಡ್ ತಾರೆಯಾಗಿರುವ ಕಂಗನಾ ರಣಾವತ್ ಅವರು ಪ್ರತಿಸ್ರ‍್ಧಿಯಾದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರು ಈಗ “ತನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಹೊರಡಬೇಕಾಗಬಹುದು” ಎಂದು ಗೇಲಿ ಮಾಡಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಈ ಹಿಂದೆ ಚುನಾವಣೆಯ ವೇಳೆ ಹೇಳಿಕೆ ನೀಡುವಾಗ ಕಂಗನಾ ರಣಾವತ್ ಮಂಡಿಯನ್ನು ಬಿಟ್ಟು ಚುನಾವಣೆ ಮುಗಿದ ನಂತರ ಪ್ಯಾಕ್ ಅಪ್ ಮಾಡಿ ಮುಂಬೈಗೆ ಹಿಂತಿರುಗುತ್ತಾರೆ ಎಂದು ಲೇವಡಿ ಮಾಡಿದ್ದರು. ಅದಕ್ಕೆ ಇದೀಗ ಕಂಗನಾ ತಿರುಗೇಟು ನೀಡಿದ್ದಾರೆ.
ಹೆಣ್ಣಿನ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದರೆ ಅದರ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ. ಅದು ಇಂದು ನಾವು ಮುನ್ನಡೆ ಸಾಧಿಸಿದ ರೀತಿಯಿಂದ ಸ್ಪಷ್ಟವಾಗುತ್ತಿದೆ. ಮಂಡಿ ಹೆಣ್ಣುಮಕ್ಕಳ ಅವಮಾನಗಳನ್ನು ಸಹಿಸುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ.