ಬೆಂಗಳೂರಿನಲ್ಲಿ ತನ್ನ ಮೆಗಾ ಸರ್ವೀಸ್ ಕ್ಯಾಂಪ್ ಅನ್ನು ಆಯೋಜಿಸಿದ ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್

•           ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸರ್ವೀಸ್ ಕ್ಯಾಂಪ್ ಏಪ್ರಿಲ್ 4ರಿಂದ ಏಪ್ರಿಲ್ 7ರವರೆಗೆ ನಡೆಯಲಿದೆ. ನಗರದಲ್ಲಿನ 2019-2020ರ ಜಾವಾ ಮಾಡೆಲ್ ಹೊಂದಿರುವ ಗ್ರಾಹಕರಿಗೆ ಸರ್ವೀಸ್ ಒದಗಿಸಲಿದೆ.

•           ಗ್ರಾಹಕರಿಗೆ ನೆರವಾಗಲು ಪ್ರಮುಖ ಒರಿಜಿನಲ್ ಈಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ ಗಳು (ಮೂಲ ಉಪಕರಣ ತಯಾರಕರು) ಸಹ ಕ್ಯಾಂಪ್ ನಲ್ಲಿ ಭಾಗವಹಿಸಲಿದ್ದಾರೆ

ಬೆಂಗಳೂರು : ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ ಕಂಪನಿ ತನ್ನ ಅತ್ಯಂತ ಯಶಸ್ವಿ ಮೆಗಾ ಸರ್ವೀಸ್ ಕ್ಯಾಂಪ್ ಅನ್ನು ಕರ್ನಾಟಕದ ಬೆಂಗಳೂರಿನಲ್ಲಿ ಆಯೋಜಿಸಿದೆ. ಹಲವು ರಾಜ್ಯಗಳಾದ್ಯಂತ ನಡೆದ ಅನೇಕ ಕ್ಯಾಂಪ್ ಗಳ ಯಶಸ್ಸಿನ ಸ್ಫೂರ್ತಿಯಿಂದ ನಡೆಯುವ ಈ ನಾಲ್ಕು ದಿನದ ಕ್ಯಾಂಪ್ ಬೆಂಗಳೂರಿನಲ್ಲಿ ಏಪ್ರಿಲ್ 4ರಿಂದ ಏಪ್ರಿಲ್ 7ರವರೆಗೆ ನಡೆಯಲಿದೆ. ಈ ಕ್ಯಾಂಪ್ ಈ ಪ್ರದೇಶಗಳಲ್ಲಿರುವ 2019 ಮತ್ತು 2020ರ ಜಾವಾ ಮೋಟಾರ್ಸೈಕಲ್ ಮಾಡೆಲ್ ಗಳ ಮಾಲೀಕರಿಗೆ ಸರ್ವೀಸ್ ಪಡೆಯುವ ಅವಕಾಶ ಒದಗಿಸಲಿದೆ.

ಸರ್ವೀಸ್ ಕ್ಯಾಂಪ್ ಈ ಕೆಳಗಿನ 4 ಸ್ಥಳಗಳಲ್ಲಿ ನಡೆಯಲಿದೆ:

•           ರಾಜ ಗಣೇಶ್ – #9, ಬಳ್ಳಾರಿ ರಸ್ತೆ, ಗಂಗಾನಗರ, ಬೆಂಗಳೂರು – 560013

•           ಸಿನರ್ಜಿ – 17/38-7, ನೆಲ ಮಹಡಿ ಮತ್ತು ಸೆಲ್ಲಾರ್, 30ನೇ ಮುಖ್ಯ ರಸ್ತೆ, 80 ಅಡಿ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು, ಬೆಂಗಳೂರು-560085

•           ಅಫೈನ್ ಮೋಟಾರ್ಸ್- ವೈಟ್ಫೀಲ್ಡ್ – ಬಿಬಿಎಂಪಿ ಹಳೆಯ ಖಾತಾ ಸಂಖ್ಯೆ. 1162/90, ಪಟ್ಟಂದೂರು, ಅಗ್ರಹಾರ ಗ್ರಾಮ, ಬೆಂಗಳೂರು-560066

 

•           ಲೆಜೆಂಡ್ರಿ – 124 ಮತ್ತು 125, ಎಸ್ ಎಲ್ ಆರ್ ಕಾಂಪ್ಲೆಕ್ಸ್, ನೆಲ ಮಹಡಿ, 6 ನೇ ಕ್ರಾಸ್, 29 ನೇ ಮುಖ್ಯ, ಎನ್ಎಸ್ ಪಾಳ್ಯ, ಬಿಟಿಎಂ ಲೇಔಟ್, 2 ನೇ ಹಂತ, ಬೆಂಗಳೂರು-560076

            ಈ ಸರ್ವೀಸ್ ಕ್ಯಾಂಪ್ ನ ಭಾಗವಾಗಿ 2019-2020 ರ ಜಾವಾ ಮೋಟಾರ್ಸೈಕಲ್ಗಳ ಮಾಲೀಕರು ಸಮಗ್ರ ವಾಹನ ಆರೋಗ್ಯ ತಪಾಸಣೆ ಮತ್ತು ಆಯ್ದ ಭಾಗಗಳ ಉಚಿತ ಬದಲಾವಣೆ ಪಡೆಯುವ ಅರ್ಹತೆ ಹೊಂದುತ್ತಾರೆ. ಮೋಟುಲ್, ಅಮರಾನ್, ಸಿಯೆಟ್ ಟೈರ್ ಗಳು ಸೇರಿದಂತೆ ಹಲವು ಪ್ರಮುಖ ಒರಿಜಿನಲ್ ಈಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ ಗಳು ಅಂದರೆ ಒರಿಜಿನಲ್ ಉಪಕರಣ ತಯಾರಕರು ಕ್ಯಾಂಪ್ ನಲ್ಲಿ ಉಪಸ್ಥಿತರಿರುತ್ತಾರೆ ಮತ್ತು ಗ್ರಾಹಕರಿಗೆ ನೆರವಾಗಲಿದ್ದಾರೆ. ದೀರ್ಘ ಕಾಲದವರೆಗೆ ಗ್ರಾಹಕರಿಗೆ ನೆಮ್ಮದಿ ಒದಗಿಸಲು ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ ಕಂಪನಿಯು ಮೋಟಾರ್ಸೈಕಲ್ಗಳ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಅದರ ಆಧಾರದ ಮೇಲೆ ಉಚಿತ ವಿಸ್ತೃತ ವಾರಂಟಿ ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ ಆಸಕ್ತಿ ಹೊಂದಿರುವ ಮೋಟಾರ್ ಸೈಕಲ್ ಮಾಲೀಕರಿಗೆ ತಮ್ಮ ವಾಹನದ ಎಕ್ಸ್ಚೇಂಜ್ ಅಂದ್ರೆ ಅವರು ಮೋಟಾರ್ ಸೈಕಲ್ ವಿನಿಮಯ ಮಾಡುವುದಿದ್ದರೆ ಆ ವಾಹನಕ್ಕೆ ಸಿಗುವ ಮೌಲ್ಯ ನಿರ್ಧಾರ ಮಾಡುವ ಸ್ಥಳಗಳನ್ನು ತಿಳಿಸಲಾಗುತ್ತದೆ.

            ಇದುವರೆಗೆ 20 ಸರ್ವೀಸ್ ಕ್ಯಾಂಪ್ ಗಳು ಯಶಸ್ವಿಯಾಗಿ ನಡೆದಿದ್ದು, ಸುಮಾರು 5200 ಜಾವಾ ಮೋಟಾರ್ ಸೈಕಲ್ ಗಳಿಗೆ ಸರ್ವೀಸ್ ಮಾಡಲಾಗಿದೆ. ಏಪ್ರಿಲ್ ಅಂತ್ಯದ ಒಳಗೆ ಸುಮಾರು 10000 ಜಾವಾ ಮೋಟಾರ್ ಸೈಕಲ್ ಗಳನ್ನು ಸರ್ವೀಸ್ ಮಾಡುವ ಉದ್ದೇಶವನ್ನು ಜಾವಾ ಕಂಪನಿ ಹೊಂದಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಅನೇಕ ನಗರಗಳಲ್ಲಿ ಮೆಗಾ ಸರ್ವೀಸ್ ಕ್ಯಾಂಪ್ ಗಳನ್ನು ಆಯೋಜಿಸಲಿದೆ. ಗ್ರಾಹಕರಿಗೆ ಅನುಪಮವಾದ ಮತ್ತು ಅಪೂರ್ವವಾದ ಗ್ರಾಹಕ ಸೇವೆ ಒದಗಿಸುವ ಮತ್ತು ಉತ್ತಮ ಮಾಲೀಕತ್ವ ಅನುಭವ ಒದಗಿಸುವ ಬ್ರಾಂಡ್ ನ ಬದ್ಧತೆಗೆ ಇದು ಸಾಕ್ಷಿಯಾಗಿದೆ.

 

            ಜಾವಾ ಯೆಜ್ಡಿ ಮೋಟಾರ್ಸೈಕಲ್ಗಳ ಮಾಲೀಕರು ತಕ್ಷಣವೇ ತಮ್ಮ ಹತ್ತಿರದ ಬ್ರ್ಯಾಂಡ್ ಡೀಲರ್ಶಿಪ್ನಲ್ಲಿ ತಮ್ಮ ಸ್ಲಾಟ್ ಗಳನ್ನು ಕಾಯ್ದಿರಿಸಬಹುದಾಗಿದೆ. ನಿಮ್ಮ ಮೋಟಾರ್ಸೈಕಲ್ ಗೆ ಉನ್ನತ ದರ್ಜೆಯ ಸರ್ವೀಸ್ ಪಡೆಯುವ ಅವಕಾಶವನ್ನು ಮತ್ತು ಅತ್ಯುತ್ತಮ ಗ್ರಾಹಕ ಸೇವೆ ಅನುಭವ ಪಡೆಯುವ ಅವಕಾಶಯನ್ನು ಮಿಸ್ ಮಾಡಿಕೊಳ್ಳಬೇಡಿ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top