ಬೆಂಗಳೂರು: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಹಂಪಿ ಮತ್ತು ಆನೆಗುಂದಿ ಭಾಗದ ಹೋಂ ಸ್ಟೇಗಳಿಂದ ಸುಮಾರು 2000ಕ್ಕೂ ಹೆಚ್ಚು ಜನರು ಬದುಕನ್ನು ಕಂಡುಕೊಂಡಿದ್ದು ವಿಶೇಷವಾಗಿ ಆನೆಗುಂದಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರದೇ ಆದ ಸ್ವಂತ ಭೂಮಿಯಲ್ಲಿ ಹೋಂ ಸ್ಟೇ ಕಟ್ಟಡಗಳನ್ನು ಶಾಶ್ವತ ಅಲ್ಲದ ರೀತಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಂಡು, ದೇಶ ವಿದೇಶಗಳಿಂದ ಬರುವಂತ ಪ್ರವಾಸಿಗರಿಗೆ ಒಳ್ಳೆಯ ಆತಿಥ್ಯವನ್ನು ಕೊಟ್ಟು ಪ್ರವಾಸಿಗರಿಗೆ ತುಂಬಾ ಸ್ನೇಹಪೂರ್ವಕವಾಗಿ, ಪ್ರವಾಸಿಗರಲ್ಲಿ ಹಂಪಿ ಆನೆಗೊಂದಿಯ ಸುತ್ತಮುತ್ತಿನ ಭಾಗಗಳ ಬಗ್ಗೆ ಪ್ರವಾಸಿಗರು ಇದು ನಮ್ಮ ದೇಶ, ನಮ್ಮ ಮನೆ ಎನ್ನುವ ರೀತಿಯಲ್ಲಿ ಆತಿಥ್ಯವನ್ನು ನೀಡುತ್ತಿರುವ ಹೋಂ ಸ್ಟೇಗಳ ಮಾಲೀಕರುಗಳು ಅತಂತ್ರದ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ತೊಂದರೆ ಆಗದಂತೆ ನೀಡಿಕೊಳ್ಳಲು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ರವರನ್ನು ಭೇಟಿ ಮಾಡಿದ ಜನಾರ್ದನರೆಡ್ಡಿಯವರು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಹೋಂ ಸ್ಟೇ ಮಾಲೀಕರುಗಳಿಗೆ ಯಾವ ರೀತಿ ಸಹಾಯವನ್ನು ಮಾಡಬೇಕೆಂದು ಪ್ರಸ್ತಾಪಿಸಿದ್ದು, ಸದಕ್ಕೆ ಸ್ಪಂದಿಸಿದ ಸಚಿವ ಹೆಚ್.ಕೆ.ಪಾಟೀಲ್ ರು ಈ ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆಯುವುದಕ್ಕೆ ದಿನಾಂಕವನ್ನು ನಿಗದಿಪಡಿಸಲು ಸೂಚಿಸಿದರು ಎಂದು ಗಾಲಿ ಗಾಲಿ ಜನಾರ್ಧನ ರೆಡ್ಡಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.