ಬಳ್ಳಾರಿ : 5/7/2023 ಬುಧವಾರ ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ನಗರದ ದೇವಿನಗರದ ಕುಟ್ಟಿ ಸರ್ಕಲ್ ನಲ್ಲಿರುವ ಮೆದಾರ ಓಣಿಯಲ್ಲಿ ಕಲ್ಯಾಣ ರಾಜ್ಯದ ರಾಜ್ಯ ಪಕ್ಷದ ಅಧಿನಾಯಕಿ ಶ್ರೀಮತಿ ಲಕ್ಷ್ಮಿಅರುಣ ಜನಾರ್ಧನರೆಡ್ಡಿಯವರು ಸ್ವಂತ ಖರ್ಚಿನಲ್ಲಿ ಕೊರೆಸಿದ ಬೋರ್ವೆಲ್, ಮೋಟಾರ್, ಪೈಪ್ ಲೈನ್ ಮತ್ತು ನಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದೈವಲೀಲೆ ಎಂಬಂತೆ ಸಿಹಿ ನೀರನ್ನು ಗಂಗಾದೇವಿ ಆಶೀರ್ವಾದ ಮಾಡಿದ್ದಾಳೆ ಕಾಲೋನಿಯ ಸಮಸ್ತ ಜನರು ತುಂಬಾ ಸಂತೋಷ ಪಟ್ಟರು

ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರ ಗೌಡ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಆಚಾರಿ ಸನ್ಯಾನ್ಯ ಶ್ರೀ ಜನಾರ್ಧನ ರೆಡ್ಡಿಯವರು ಮತ್ತು ಶ್ರೀಮತಿ ಲಕ್ಷ್ಮಿ ಅರುಣಾ ರವರು ಸದಾ ಜನತೆಯ ಸೇವೆಯಲ್ಲಿರುತ್ತಾರೆ ನಮ್ಮ ನಾಯಕರಿಗೆ ಸೋಲು ಗೆಲುವು ಮುಖ್ಯವಲ್ಲ ಸದಾ ಜನಸೇವೆ ಮಾಡುತ್ತಾರೆ

ಸನ್ಮಾನ್ಯ ಶ್ರೀ ಜಿ ಜನಾರ್ಧನ ರೆಡ್ಡಿಯವರ ಆಶಯದಂತೆ ಪ್ರತಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭಾ ಚನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಹಂಪಿ ರಮಣ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಪ್ರಭು ಶೇಖರ್ ಗೌಡ, ಪಕ್ಷದ ಮುಖಂಡರಾದ ಪ್ರವೀಣ್, ಡೊಕೊಮೊ ಸೂರಿ, ನಾಗರಾಜ್, ಸಂತೋಷ್ ರೆಡ್ಡಿ ಭಾಗವಹಿಸಿದರು
