ಬೆಂಗಳೂರು: ಸರ್ಕಾರವು 2019ರಲ್ಲಿ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿ ಇದೀಗ ಈ ವಿಚಾರ ಮುನ್ನಡೆಗೆ ತಂದು ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ಭಾರವನ್ನು ತಗ್ಗಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಧ್ಯಯನ ನಡೆಸಿ ಮೂಳೆ ತಜ್ಞರ ಸಲಹೆ ಮೇರೆಗೆ ವಿದ್ಯಾರ್ಥಿಗಳ ದೇಹದ ತೂಕದ 10ರಿಂದ 15ರಷ್ಟು ಮಾತ್ರ ಶಾಲಾ ಬ್ಯಾಗ್ ತೂಕವಿರಬೇಕು ಎಂದು ಶಿಫಾರಸು ಮಾಡಿದ್ದಾರೆ.
ವಿದ್ಯಾರ್ಥಿಯ ಶಾಲಾ ಬ್ಯಾಗ್ ತೂಕ ನಿಗದಿಪಡಿಸಿ ಕಡ್ಡಾಯವಾಗಿ ಪಾಲಿಸುವಂತೆ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.
1 -2 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 1.5 ರಿಂದ 2 ಕೆಜಿ
3 -5 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 2 ರಿಂದ 3 ಕೆಜಿ
6 -8 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 3 ರಿಂದ 5 ಕೆಜಿ
9 -10 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 4 ರಿಂದ 5 ಕೆಜಿ
ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದು 1ರಿಂದ 5ನೇ ತರಗತಿಯವರೆಗೆ ಎನ್ ಸಿ.ಇ.ಆರ್.ಟಿ ನಿಗದಿಪಡಿಸಿರುವ ಪಠ್ಯಕ್ರಮವನ್ನು ಹೊರತುಪಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಿ ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸತಕ್ಕದ್ದು ಮತ್ತು ಈ ಕುರಿತು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ವಿಶೇಷ ತಂಡವನ್ನು ರಚಿಸತಕ್ಕದ್ದು ಎಂದು ತಿಳಿಸಿದೆ.