ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಮಕ್ಕಳ ಆರೋಗ್ಯ ಕುರಿತು “ಆಪ್ ಕಿ ಬಾತ್ ಕಮ್ಯುನಿಟಿಕೆ ಸಾಥ್”  ಎಂಬ ರಾಷ್ಟ್ರ ವ್ಯಾಪಿ ಬೃಹತ್ ಆಂದೋಲನಕ್ಕೆ ಚಾಲನೆ

ವಿಶ್ವ ರಕ್ತಹೀನತೆ ದಿನದ ಹಿನ್ನೆಲೆ; ಕೇಂದ್ರ ಸರ್ಕಾರದ ಗುರಿಯಂತೆ ಮೊದಲ ಕಾರ್ಯಕ್ರಮವಾಗಿ ಅನೀಮಿಯಾ ಮುಕ್ತ ಭಾರತ” ಅಭಿಯಾನ

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ದೇಶದ ಮಕ್ಕಳ ಕ್ಲಿನಿಕ್ ಗಳ 44 ಸಾವಿರ ಮಕ್ಕಳ ತಜ್ಞರಿಂದ ಹುಟ್ಟಿದಾರಾಭ್ಯ 18 ವಯೋಮಿತಿ ಒಳಗಿನ ಮಕ್ಕಳಿಗೆ   “ಸಮುದಾಯದ ಜೊತೆ ಅನಿಮಿಯಾ ಮುಕ್ತ ಭಾರತ” ಅಭಿಯಾನದಡಿ ಉಚಿತ ತಪಾಸಣೆ

ಮಕ್ಕಳ ಆರೋಗ್ಯದ ವಿವಿಧ ಆಯಾಮಗಳ ಕುರಿತು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಅಧ್ಯಕ್ಷರ ಕ್ರಿಯಾ ಯೋಜನೆಯಡಿ 2024 ಮತ್ತು 25 ರಲ್ಲಿ “ಆಪ್ ಕಿ ಬಾತ್ ಕಮ್ಯುನಿಟಿಕೆ ಸಾಥ್”  ಅಭಿಯಾನ ಆಯೋಜನೆ

ಬೆಂಗಳೂರು: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಂಡು  ಮಕ್ಕಳ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿ ನೀಡುವ “ಆಪ್ ಕಿ ಬಾತ್ ಕಮ್ಯುನಿಟಿಕೆ ಸಾಥ್”  ಎಂಬ ಮಹತ್ವದ ಅಭಿಯಾನ ಆರಂಭಿಸಲಾಗಿದೆ.

ಅಭಿಯಾನದಲ್ಲಿ ಮೊದಲ ಭಾಗವಾಗಿ ರಕ್ತಹೀನತೆ ಕುರಿತು ಜಾಗೃತಿ ಮೂಡಿಸುತ್ತಿದ್ದುನಂತರ ಸ್ಥೂಲಕಾಯತೆ, ಆಟಿಸಂ, ತಲೆಸ್ಸೇಮೀಯಾ ಮತ್ತು ಡೌನ್ ಸಿಂಡ್ರೋಮ್ ಕುರಿತು ಜನ ಜಾಗೃತಿಗೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಯೊಬ್ಬರಿಗೂ ಖಚಿತ ಮತ್ತು ಪ್ರಸ್ತುತ ಬದುಕಿನಲ್ಲಿ  ಅಗತ್ಯವಿರುವ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಮತ್ತು ಸಾಮಾಜಿಕ ಆರೋಗ್ಯಕ್ಕೆ ಕೊಡುಗೆ ನೀಡಲು  ಈ ಬೆಳವಣಿಗೆ ಸಹಕಾರಿಯಾಗಲಿದೆ. ಸರ್ಕಾರದ ಸಹಭಾಗಿತ್ವ, ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಮಕ್ಕಳಿಗೆ ವಿಶ್ವಾಸಾರ್ಹ ಮಾಹಿತಿ ತಲುಪಿಸುವ ಗುರಿ ಹೊಂದಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2019 ಮತ್ತು 2020 ರ ಸಮೀಕ್ಷೆಯಂತೆ ಫಲವತ್ತತೆಯ ಸಮಯವಾದ 15 ರಿಂದ 49 ವಯೋಮಿತಿಯ ಅರ್ಧದಷ್ಟು ಮಹಿಳೆಯರು ಹಾಗೂ 6 ರಿಂದ 59 ತಿಂಗಳ ವಯೋಮಿತಿಯ ಮಕ್ಕಳಲ್ಲಿ ಶೇ 59 ರಷ್ಟು ಮಕ್ಕಳು ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕಬ್ಬಿಣ, ಫೋಲಿಕ್ ಆಸೀಡ್ ಮತ್ತು ವಿಟಮಿನ್ ಬಿ12 ಕೊರತೆಯಿಂದ ತೊಂದರೆಗೀಡಾಗಿದ್ದಾರೆ.

 

ಮಲೇರಿಯಾ, ಅನುವಂಶಿಕ ಪರಿಸ್ಥಿತಿಗಳು, ಆನಾರೋಗ್ಯಕರ ಆಹಾರ ಅಭ್ಯಾಸಗಳು, ಕಬ್ಬಿಣದ ಕೊರತೆಯಿಂದ ಉಂಟಾಗುವ ಅನೀಮಿಯಾ, ಹೆಚ್ಚು ಕಬ್ಬಣಾಂಶದ ಆಹಾರ ಸೇವನೆ, ಋತುಚಕ್ರದ ಮತ್ತು ಹೆರಿಗೆ ಸಮಯದಲ್ಲಿ ತೀವ್ರ ರಕ್ತ ಹಾನಿಯಾಗುವ ಸಮಸ್ಯೆಗಳಿಂದ ಬಳುತ್ತಿರುವವರ ಯೋಗಕ್ಷೇಮಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.  ಕಳೆದ 2018 ರಲ್ಲಿ ಕೇಂದ್ರ ಸರ್ಕಾರ ಮಕ್ಕಳು, ಹೆಣ್ಣುಮಕ್ಕಳು ಮತ್ತು ಹದಿಹರೆಯದವರಲ್ಲಿ ರಕ್ತಹೀನತೆ ತಗ್ಗಿಸಲು ಅನೀಮಿಯಾ ಮುಕ್ತ ಭಾರತ ಅಭಿಯಾನ ಆರಂಭಿಸಿತ್ತು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಂಘಟನೆಯ 2024 ನೇ ಸಾಲಿನ ಅಧ್ಯಕ್ಷ ಡಾ. ಜಿ.ವಿ. ಬಸವರಾಜ ಮಾತನಾಡಿ, ಭಾರತದಲ್ಲಿ ರಕ್ತಹೀನತೆ ಅತಿ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ದಣಿವು, ದೌರ್ಬಲ್ಯ, ಅರಿವಿನ ಕಾರ್ಯಕ್ಷಮತೆ ಕಡಿಮೆಯಾಗುವುದು ಮತ್ತು ಸೋಂಕುಗಳು, ಅನಾರೋಗ್ಯದ ಹೆಚ್ಚಿನ ಅಪಾಯ ಉಂಟುಮಾಡಬಹುದು, ಇದರಿಂದ ಸಾಮಾಜಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಬಾಲ್ಯದ ರಕ್ತಹೀನತೆಯ ಬಹುಮುಖಿ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಸಮಗ್ರ ಪರಿಹಾರಗಳು ಈ ಸ್ಥಿತಿಯ ತಕ್ಷಣದ ರೋಗಲಕ್ಷಣಗಳು ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಪರಿಹರಿಸಬಹುದು” ಎಂದು ಹೇಳಿದರು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ದೇಶದ ಮಕ್ಕಳ ಕ್ಲಿನಿಕ್ ಗಳ 44 ಸಾವಿರ ಮಕ್ಕಳ ತಜ್ಞರಿಂದ ಹುಟ್ಟಿದಾರಾಭ್ಯ 18 ವಯೋಮಿತಿ ಒಳಗಿನ ಮಕ್ಕಳಿಗೆ   “ಅನಿಮಿಯಾಕೆ ಬಾತ್ ಕಮ್ಯುನಿಟಿಕೆ ಸಾಥ್”   ಜೊತೆ ಅನಿಮಿಯಾ ಮುಕ್ತ ಭಾರತ” ಅಭಿಯಾನದಡಿ ಉಚಿತ ಅನಿಮೀಯಾ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಂಘಟನೆಯ 2024 ನೇ ಸಾಲಿನ ಅಧ್ಯಕ್ಷರಾದ ಡಾ. ವಸಂತ್ ಕಾಲತ್ಕರ್ ಮಾತನಾಡಿ, ಮಕ್ಕಳಲ್ಲಿ ಸ್ಥೂಲಕಾಯತೆ, ಸ್ವಲೀನತೆ, ಡೌನ್ ಸಿಂಡ್ರೋಮ್ ಮತ್ತು ಥಲಸ್ಸೆಮಿಯಾದಂತಹ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರಿಂದ ಮಕ್ಕಳ ಮೇಲಿನ ಕಾಳಜಿ ಅಧಿಕವಾಗಿದೆ. ವೇಗದ ಮತ್ತು ಒತ್ತಡದ ಜೀವನ ಶೈಲಿ ಸಾಮಾನ್ಯವಾಗಿ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಗೆ ಕಾರಣವಾಗುತ್ತದೆ, ಇದು ಬಾಲ್ಯದ ಸ್ಥೂಲಕಾಯತೆಯ ಹೆಚ್ಚಳಕ್ಕೆ ಕಾರಣೀಭೂತವಾಗಿದೆ. ಆನುವಂಶಿಕ ಮತ್ತು ಪರಿಸರ ಅಂಶಗಳ ನಡುವಿನ ಸಂಕೀರ್ಣವಾದ ಪರಸ್ಪರ ಕ್ರಿಯೆಯು ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳು, ಡೌನ್ ಸಿಂಡ್ರೋಮ್ ನಂತಹ ಸಮಸ್ಯೆಗಳ ಕುರಿತು ಸಮಾಜಿಕ ಜಾಲತಾಣ ಮತ್ತು ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಾಗಿದೆ.  ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಾಲಾ ಜಾಗೃತಿ ಅಭಿಯಾನಗಳನ್ನು ಸಹ ಆಯೋಜಿಸಲಾಗಿದೆ ಎಂದರು.

 

ಪರಿಣಿತ ವೈದ್ಯಕೀಯ ತಂಡ ಜನ ಸಾಮಾನ್ಯರಿಗೆ ವಸ್ತುನಿಷ್ಟ ಮತ್ತು ನಂಬಲರ್ಹ ಮಾಹಿತಿ ನೀಡುತ್ತಿದೆ. ನೀತಿ ಆಯೋಗದ ಸದಸ್ಯ ಡಾ. ವಿನೋದ್ ಕೆ ಪಾಲ್, ಪದ್ಮಶ್ರಿ ಪ್ರಶಸ್ತಿ ಪುರಸ್ಕತರೂ ಆದ ಮಕ್ಕಳ ವೈದ್ಯ ಡಾ. ಪುಖ್ರಾಜ್ ಬಪ್ನಾ ಮತ್ತಿತರೆ ಗಣ್ಯರು ಮಕ್ಕಳ ಯೋಗ ಕ್ಷೇಮ ಕುರಿತು ವಿಡಿಯೋ ಮೂಲಕ ಜಾಗೃತಿ ಸಂದೇಶ ನೀಡಿದ್ದು, ಇದನ್ನು ಎಲ್ಲೆಡೆ ಪ್ರಸಾರ ಮಾಡಿ ಅರಿವು ಮೂಡಿಸಲಾಗುತ್ತಿದೆ.

Facebook
Twitter
LinkedIn
Telegram
WhatsApp
Email
Print

1 thought on “ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಮಕ್ಕಳ ಆರೋಗ್ಯ ಕುರಿತು “ಆಪ್ ಕಿ ಬಾತ್ ಕಮ್ಯುನಿಟಿಕೆ ಸಾಥ್”  ಎಂಬ ರಾಷ್ಟ್ರ ವ್ಯಾಪಿ ಬೃಹತ್ ಆಂದೋಲನಕ್ಕೆ ಚಾಲನೆ”

Leave a Comment

Your email address will not be published. Required fields are marked *

Translate »
Scroll to Top