ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ

ಮಾದಕ ವ್ಯಸನಿಗಳ ಪತ್ತೆ, ಮಾದಕ ದ್ರವ್ಯ ಜಾಲಗಳ ನಾಶ,  ಅಪರಾಧಿಗಳ ಬಂಧನ ಮತ್ತು ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವ  ಮೂಲಕ, ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ -  ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು  ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು  ಬಿಡುಗಡೆ ಮಾಡಿದರು. ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು ಮುಂಬರುವ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಲಿದೆ.

ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಟ್ಟುನಿಟ್ಟಿನ ಧೋರಣೆ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ವ್ಯಾಪಾರವನ್ನು ತಡೆಗಟ್ಟಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ, ಈ ಕ್ರಮಗಳ ಮೂಲಕ ಮಾದಕ ದ್ರವ್ಯಗಳ ಜಫ್ತಿ ಮತ್ತು ಬಂಧನಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಶಾ ಅವರ ನಿಷ್ಠುರ ನೀತಿಗಳಿಂದಾಗಿ, ಸರ್ಕಾರಗಳು ಮತ್ತು ಏಜೆನ್ಸಿಗಳ ನಡುವಿನ ಸಮನ್ವಯ, ಸಹಕಾರ ಮತ್ತು ಸಹಯೋಗದ ಮೂಲಕ, ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಲ್ಲಿ ಮತ್ತು ಪ್ರಕರಣಗಳ ದಾಖಲೆಗಳಲ್ಲಿ ವೃದ್ಧಿಯಾಗಿದೆ.

 

ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಅಕ್ರಮ ಮಾದಕ ದ್ರವ್ಯದ ವ್ಯಾಪಾರವನ್ನು ತಡೆಯಲು ನಡೆಸಿದ ಬಹುಮುಖ ಪ್ರಯತ್ನಗಳಿಂದ, ವಶಪಡಿಸಿಕೊಂಡ ಮಾದಕವಸ್ತುಗಳ ಪ್ರಮಾಣವು ಸುಮಾರು 100% ಹೆಚ್ಚಾಗಿವೆ ಮತ್ತು ಅದನ್ನು ವ್ಯವಹರಿಸುವವರ ವಿರುದ್ಧ ದಾಖಲಾಗುವ ಪ್ರಕರಣಗಳು 152% ಹೆಚ್ಚಾಗಿವೆ.

ಅಂಕಿಅಂಶಗಳ ಪ್ರಕಾರ, 2006 ರಿಂದ 2013 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1257 ಇತ್ತು, ಇದು 2014-2023 ರ ಅವಧಿಯಲ್ಲಿ 3 ಪಟ್ಟು ಏರಿಕೆಯಾಗಿ 3755 ಕ್ಕೆ ತಲುಪಿದೆ. 2006-13 ರ ಅವಧಿಯಲ್ಲಿ 1363 ಬಂಧನಗಳಾಗಿದ್ದವು, ಇವು 4 ಪಟ್ಟು ಹೆಚ್ಚಿ 2014-23 ಅವಧಿಯಲ್ಲಿ ಬಂಧನಗಳ ಸಂಖ್ಯೆ 5745 ಕ್ಕೆ ತಲುಪಿದೆ. 2006-13ರಲ್ಲಿ ವಶಪಡಿಸಿಕೊಂಡಿದ್ದ 1.52 ಲಕ್ಷ ಕೆಜಿ ಡ್ರಗ್ಸ್ ಪ್ರಮಾಣ ಮೋದಿ ಆಡಳಿತದಲ್ಲಿ ದ್ವಿಗುಣಗೊಂಡು 3.95 ಲಕ್ಷ ಕೆಜಿಗೆ ತಲುಪಿದೆ.  2006-13ರ ಅವಧಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯವು ರೂ.768 ಕೋಟಿಯಿತ್ತು, ಇದು  ಮೋದಿ ಸರ್ಕಾರದ ಅವಧಿಯಲ್ಲಿ 30 ಪಟ್ಟು ಹೆಚ್ಚಾಗಿ ರೂ.22,000 ಕೋಟಿಗೆ ತಲುಪಿದೆ.

 

ಮೋದಿಯವರ ನಾಯಕತ್ವ ಮತ್ತು ಶಾ ಅವರ ದೂರದೃಷ್ಟಿಯಿಂದಾಗಿ, ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳು 12,000 ಕೋಟಿ ರೂಪಾಯಿ ಮೌಲ್ಯದ 12 ಲಕ್ಷ ಕಿಲೋಗ್ರಾಂಗಳಷ್ಟು ಡ್ರಗ್ಸ್ಅನ್ನು ನಾಶಪಡಿಸುವ ಅಭೂತಪೂರ್ವ ಕೆಲಸವನ್ನು ಮಾಡಿವೆ. ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸಾಗಿಸಲು ಕೇಂದ್ರ ಮತ್ತು ರಾಜ್ಯ ಮಾದಕ ದ್ರವ್ಯ ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಒಗ್ಗಟ್ಟು ಮತ್ತು ಹೊಂದಾಣಿಕೆಗಾಗಿ 2019 ರಲ್ಲಿ ನಾಲ್ಕು ಹಂತದ NCORD ಕಾರ್ಯವಿಧಾನವನ್ನು ಬಲಪಡಿಸಲಾಯಿತು. ಮೋದಿ ಸರಕಾರದಲ್ಲಿ, ಮಾದಕ ವ್ಯಸನ ಮುಕ್ತ ನವ ಭಾರತ ನಿರ್ಮಾಣಕ್ಕೆ  ಅಮಿತ್ ಶಾ ಅವರ ತಂತ್ರಗಾರಿಕೆಗಳು ಫಲ ನೀಡುತ್ತಿರುವುದಕ್ಕೆ ಕೇವಲ ನಮ್ಮ ದೇಶವಲ್ಲದೇ  ಜಗತ್ತಿನಾದ್ಯಂತದ ಜನರು ಸಾಕ್ಷಿಯಾಗಿದ್ದಾರೆ.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top